ಚಳ್ಳಕೆರೆ
ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಟ್ರಾಫಿಕ್ ಕೂಡ ಹೆಚ್ಚಾಗಿದ್ದು
ಈ ಹಿನ್ನಲೆಯಲ್ಲಿ ಆಟೋ ಚಾಲಕರು ಕಾನೂನಿನ ನಿಯಮವನ್ನು ಅರಿತರು ಕೂಡ ಅಡ್ಡಾದಿಡ್ಡಿ ಆಟೋ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ , ಎಂದು ಪಿಎಸ್ಐ ಶಿವರಾಜ್ ಹೇಳಿದರು
ಇವರು ನಗರದ ಸರ್ಕಾರಿ ಬಸ್ ಸ್ಟ್ಯಾಂಡ್ ನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಕಡಕ್ ಸುರಕ್ಷಾ ಜೀವನ್ ರಕ್ಷ ಪೊಲೀಸ್ ಠಾಣಾ ವತಿಯಿಂದ ಆಟೋ ಚಾಲಕರಿಗೆ ಹಾಗೂ ವಾಹನ ಚಾಲಕರಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ತಿಳಿಹೇಳಿ ಮಾತನಾಡಿದರು
ಸರ್ಕಾರಿ ಬಸ್ ಸ್ಟಾಂಡುಗಳಲ್ಲಿ ಒಳಗೆ ನುಗ್ಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅಡ್ಡಿಪಡಿಸುತ್ತಿದ್ದಾರೆ ,
ಎಷ್ಟೋ ಬಾರಿ ಸರ್ಕಾರಿ ಬಸ್ಸಿನ ಚಾಲಕರು ಕಂಡಕ್ಟ್ರುಗಳು ಆಟೋ ಚಾಲಕರಿಗೆ ಬಸ್ ಸ್ಟಾಂಡ್ ಒಳಗೆ ಬರಬೇಡಿ ಎಂದರು,
ಕೂಡ ಒಳಗೆ ನುಗ್ಗಿ ಸಾರಿಗೆ ವಾಹನಗಳಿಗೆ ತೊಂದರೆ ಕೊಡುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಲು
ಆಟೋ ಚಾಲಕರು ಮನಬಂದಂತೆ ಟ್ರಾಫಿಕ್ ರೂಲ್ಸ್ ಗಳನ್ನು ಗಾಳಿಗೆ ತೂರಿ
ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದೀರಿ
,ಇದೇ ರೀತಿ ಮುಂದುವರೆದರೆ ಪೊಲೀಸ್ ಇಲಾಖೆ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,
ಈ ಕಾರಣದಿಂದಾಗಿ ಆಟೋ ಚಾಲಕರು ತಮ್ಮ ಸ್ವಪ್ರೇರಣೆಯಿಂದ ಡ್ರೈವಿಂಗ್ ಲೈಸನ್ಸ್ ಆರ್ ಸಿ ಬುಕ್ ಸಮವಸ್ತ್ರ ಜೊತೆಗೆ ದಿನನಿತ್ಯ ಸಂಚರಿಸಬೇಕು
ಇದು ಅಲ್ಲದೆ ವಾಹನ ಚಲಾಯಿಸುವವರು ಹೆಲ್ಮೆಟ್ ಡ್ರೈವಿಂಗ್ ಲೈಸೆನ್ಸ್ ಇನ್ಸೂರೆನ್ಸ್ ಸಮೇತ ಇಟ್ಟುಕೊಂಡು ವಾಹನ ಚಲಾಯಿಸಬೇಕು,
ಇದನ್ನು ಮರೆತು ನೀವು ಏನಾದರೂ ಕಾನೂನು ಬಾಹಿರವಾಗಿ ಆಟೋ ಹಾಗೂ ವಾಹನ ಚಾಲಕರು ಸಂಚರಿಸಿದ ಸಂದರ್ಭದಲ್ಲಿ ಅಂತ ವಾಹನವನ್ನು ಹಿಡಿದು ದಂಡ ಹಾಕಲಾಗುವುದು ಎಂದು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ಆಟೋ ಚಾಲಕ ರಮೇಶ್ ತಿಪ್ಪೇಸ್ವಾಮಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿನ ಚಾಲಕರು ಕಂಡಕ್ಟರ್ಗಳು ಹಾಗೂ ಪೊಲೀಸ್ ಸಿಬ್ಬಂದಿ ವಿಶಾಲ್ ಸೇರಿದಂತೆ ಅನೇಕ ಸಾರ್ವಜನಿಕರು ಹಾಜರಿದ್ದರು