ಚಳ್ಳಕೆರೆ : ತಾಲೂಕು ಕಛೇರಿ ವ್ಯಾಪ್ತಿಯ ಕಸಬಾ ಹೋಬಳಿಯ ದುರ್ಗಾವಾರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ನಾಗರಾಜ್ (50) ಎಂಬುವವರು ಆತ್ಮೆಹತ್ಯೆ ಗೆ ಶರಣಾಗಿರುವುದು ವರದಿಯಾಗಿದೆ.
ಚಿತ್ರದುರ್ಗ ನಗರದ ಹೊರವಲಯದ ಬೆಂಗಳೂರು ರಸ್ತೆಯ ಖಾಸಗಿ ಹೋಟೆಲ್ ಸಮೀಪದ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಮರವೊಂದಕ್ಕೆ ನೆಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ
ಆತ್ಮಹತ್ಯೆಗೆ ಕಾರಣ ಏನೆಂಬುವುದು ಗೊತ್ತಿಲ್ಲ ಆದರೆ ತನಿಖೆ ನಂತರ ನಿಖರವಾದ ಕಾರಣ ಹೊರಬಿಳಲಿದೆ.
ಸ್ಥಳಕ್ಕೆ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸುತ್ತಿದ್ದಾರೆ.