ನಾಯಕನಹಟ್ಟಿ:: ಹೋಬಳಿಯ ವರವುಗ್ರಾಮದ ದಿವಂಗತ ಶ್ರೀಮತಿ ಬೊಮ್ಮಕ್ಕ ಮತ್ತು ದಿವಂಗತ ಶ್ರೀ ದಡ್ಲ ಪಾಲಯ್ಯ ಇವರ ಪುತ್ರ ಡಿ ಪಿ ಸುರೇಶ್ ಅವರು ಡಾ. ಜಗದೀಶ್ ಎಫ್ ಹೊಸಮನಿ ಅವರ ಮಾರ್ಗದರ್ಶನದಲ್ಲಿ “ಕನ್ನಡ ದಲಿತ ಸಾಹಿತ್ಯದಲ್ಲಿ ದಲಿತತ್ವದ ವಿನ್ಯಾಸಗಳು(ಆಯ್ದ ದಲಿತ ಕಾದಂಬರಿಗಳನ್ನು ಅನುಲಕ್ಷಿಸಿ)” ಎಂಬ ವಿಷಯಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿಯನ್ನು ಜನವರಿ 10 ರೆಂದು 32ನೇ ಘಟಕೋತ್ಸವದಲ್ಲಿ ಡಿ .ಪಿ. ಸುರೇಶ್ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು..
ಡಾಕ್ಟರೇಟ್ ಪದವಿ ಪಡೆದಿರುವ ಡಿ ಪಿ ಸುರೇಶ್ ಅವರನ್ನು ಚೌಳಕೆರೆ ಬಿ.ಭರತ್ ಭೂಷಣ್, ಲೋಕೇಶ್ ಕುದಾಪುರ, ಆರ್ ಮಹಾಂತೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಡಾ. ಕಾಟಂಲಿಂಗಯ್ಯ, ಕಾಟವ್ವನಹಳ್ಳಿ ಮಂಜಣ್ಣ, ಗುಂತುಕೋಲಮ್ಮಹಳ್ಳಿ ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ನಲಗೇತನಹಟ್ಟಿ ಪತ್ರಕರ್ತ ಕೆ.ಟಿ. ಓಬಳೇಶ್, ಅಭಿನಂದಿಸಿದ್ದಾರೆ

About The Author

Namma Challakere Local News
error: Content is protected !!