ಚಳ್ಳಕೆರೆ : ಕ್ರೂರ ತಂದೆಯನ್ನು ನೋಡಿದ್ದೆವೆ ಹಾಗೂ ಕ್ರೂರ ಮಗನನ್ನು ನೋಡಿದ್ದಾಯ್ತು ಆದರೆ ಕ್ರೂರ ತಾಯಿಯನ್ನು ನೋಡಲು ಸಾಧ್ಯವಿಲ್ಲ ಎನ್ನುವ ಭಾರತೀಯರ ನಾಡಲ್ಲಿ ಇಲ್ಲೋಬ್ಬ ತಾಯಿ ಮಾತ್ರ ತನ್ನ ಹೆತ್ತ ಮಗುವನ್ನು ಕ್ರೂರವಾಗಿ ಕೊಂದು ಸೂಟಿಕೇಸ್ ನಲ್ಲಿ ತುಂಬಿಕೊAಡು ಹೋಗುವಾಗ ಪೊಲೀಸರ ಕೈಗೆ ಸಿಕ್ಕಿರುವುದು ಈಡೀ ತಾಯಿ ಕುಲಕ್ಕೆ ಕಳಂಕವಾಗಿಸಿದ್ದಾಳೆ.
ಗೋವಾದ ಹೋಟೆಲ್‌ನಲ್ಲಿ ಹೆತ್ತ ಮಗುವನ್ನ ಹತ್ಯೆ ಮಾಡಿ ಸೂಟ್ರೇಸ್ ನಲ್ಲಿ ತುಂಬಿಕೊAಡು ಕೊಂಡೊಯ್ಯುತ್ತಿದ್ದ ಸ್ಟಾರ್ಟ್ ಆಫ್ ಫೌಂಡರ್ ಸಿಇಓ ಸುಚೆನಾ ಸೇರ್‌ರನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.
ಸುಚಾನಾ ಸೇರ್ ಗೋವಾದ ಹೋಟೆಲ್‌ನಲ್ಲಿ ಕೊಲೆ ಮಾಡಿದ ಶವವನ್ನು ಸೂಟ್ ಕೇಸ್‌ನಲ್ಲಿ ತುಂಬಿಕೊAಡು ಗೋವಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದು, ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದಳು.
ಗೋವಾದಲ್ಲಿ ತಂಗಿದ್ದ ಹೋಟೆಲ್ ನವರಿಗೆ ಅನುಮಾನ ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ರೂಮಿನಲ್ಲಿ ರಕ್ತದ ಕಲೆಗಳನ್ನು ಕಂಡ ಹಿನ್ನೆಲೆಯಲ್ಲಿ ಅನುಮಾನ ಬಂದಿತ್ತು. ರೂಮಿಗೆ ಕರೆದೊಯ್ದಿದ್ದ ಮಗು ವಾಪಸ್ ಹೋಗುವಾಗ ಇರಲಿಲ್ಲ.
ಇದನ್ನು ಪ್ರಶ್ನಿಸಿದಾಗ ಸಂಬAಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿದ್ದರು. ಆದರೆ ಗೋವಾ ಪೊಲೀಸರು ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಟ್ಯಾಕ್ಸಿ ಡ್ರೈವರ್ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದಾನೆ. ಇದಾದ ನಂತರ ಚಾಲಕ ಆರೋಪಿಯನ್ನು ಐಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾರ್‌ನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವವನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ, ಆರೋಪಿ ಸುಚನಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗೋವಾ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಲು ಐಮಂಗಲ ಪೊಲೀಸರು ಸಿದ್ದರಿದ್ದು ಗೋವಾದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.