ಚಳ್ಳಕೆರೆ : ಈ ಬಾರಿ ಕಾಲೇಜಿಗೆ ಸು.64ರಷ್ಟು ಫಲಿತಾಂಶ ಬಂದಿರುವುದು ಉತ್ತಮವಾಗಿದೆ, ಈಡೀ ರಾಜ್ಯದಲ್ಲಿ 69ರಷ್ಟು ಇದೆ, ಅದಕ್ಕೆ ಪೂರಕವಾಗಿ ಕಾಲೇಜು ಫಲಿತಾಂಶ ಸಂತಸ ತಂದಿದೆ, ಆದ್ದರಿಂದ ಇರುವ ವ್ಯವಸ್ಥೆಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸರಕಾರಿ ಕಾಲೇಜು ವರದಾನವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಸಾಂಸ್ಕೃತಿಕ, ಎನ್‌ಎಸ್‌ಎಸ್ ಮತ್ತು ರೋವರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶದಿಂದ ಬಂದಿರುವ ಮಕ್ಕಳು ಆರ್ಥಿಕ ಪರಸ್ಥಿತಿಯಲ್ಲಿ ಇದ್ದರು ಕೂಡ ಸರಕಾರಿ ಶಾಲೆಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಮಾದರಿಯಾಗಬೇಕು, ಶೈಕ್ಷಣಿಕ ವೃತ್ತಿ ಜೀವನದಲ್ಲಿ ಬಹಳ ಶ್ರೇಯಸ್ಸು ಬಯಸಬೇಕು, ಬಯಲು ಸೀಮೆಯಲ್ಲಿ ಶಿಕ್ಷಣ ಎಂಬುದು ಮರೀಚೀಕೆಯಾಗಿತ್ತು ಆದರೆ ಕಳೆದ ಹತ್ತು ವರ್ಷಗಳಲ್ಲಿ ನನ್ನ ಶಾಸಕ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಉತ್ತಮವಾದ ಶಿಕ್ಷಣ ನೀಡಲು ಪ್ರೋತ್ಸಾಹಿಸಿದ್ದೆನೆ ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಎಂ.ರವೀಶ್, ನಿವೃತ್ತ ಉಪನ್ಯಾಸಕರಾದ ಡಿ.ಸಿ.ಮಲ್ಲಿಕಾರ್ಜುನ, ಉಪ ನಿರ್ದೇಶಕರಾದ ಆರ್.ಪುಟ್ಟಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷÀ ರಾಘವೇಂದ್ರ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಖಜಾಂಚಿಗಳಾದ ಟಿ.ರುದ್ರಮುನಿ, ಸದಸ್ಯರಾದ ಗುರುನಾಥಗುಪ್ತ, ಎಸ್. ಕೋಣಪ್ಪ, ವಸಂತಕುಮಾರ್, ಹಿರಿಯ ಮುಖಂಡರಾದ ಪಿ.ತಿಪ್ಪೇಸ್ವಾಮಿ, ಉಪನ್ಯಾಸಕ ವರ್ಗ ಜಬೀವುಲ್ಗಾ, ನಾಗರಾಜ್ ಬೆಳಗಟ್ಟ, ವಸಂತಕುಮಾರ್, ಹಬೀಬ್‌ವುಲ್ಲಾ, ಎನ್‌ಎಸ್‌ಎಸ್ ಘಟಕಾಧಿಕಾರಿ ಬಿ.ಶಾಂತಕುಮಾರಿ, ನಿವೃತ್ತ ಉಪನ್ಯಾಸಕ ಎಸ್.ಲಕ್ಷö್ಮಣ್, ಲಲಿತಮ್ಮ , ಜಾನಕಮ್ಮ, ಮುಖಂಡರು, ಕಾರ್ಯಕರ್ತರು ಹಾಗೂ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಕಾಲೇಜು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.