ಚಳ್ಳಕೆರೆ : ಯುವ ಜನರಲ್ಲಿ ಮಾದಕ ವಸ್ತು ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ರವರ ನಿರ್ದೇಶನದ ಮೇರೆಗೆ ಚಳ್ಳಕೆರೆ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಬಿಟಿ.ರಾಜಣ್ಣ ನೇತೃತ್ವದಲ್ಲಿ ನಗರದ ವಾಲ್ಮಿಕಿ ವೃತ್ತದಲ್ಲಿ ಪ್ರಾರಂಭಗೊAಡ ಜಾಗೃತಿ ಜಾಥ ಚಿತ್ರದುರ್ಗ ನಶೆಮುಕ್ತ- ನಶೆಮುಕ್ತ ಚಳ್ಳಕೆರೆ” ಘೋಷಣೆಯಡಿ ನಗರದ ಪ್ರಮುಖ ಬೀದಿಗಳಲ್ಲಿ “ಜಾಗೃತಿ ಜಾಥ” ನಡೆಸಲಾಯಿತು.
ಇನ್ನೂ ವಾಲ್ಮೀಕಿ ವೃತ್ತದಿಂದ ಪ್ರಾರಂಭಗೊAಡ ಜಾಗೃತಿ ಜಾಥ ಅಂಬೇಡ್ಕರ್ ವೃತ್ತ, ನೆಹರು ವೃತ್ತದ ಮೂಲಕ ನಗರದ ಪೊಲೀಸ್ ಠಾಣೆಗೆ ತಲುಪಿತು, ನಂತರ ಪೊಲೀಸ್ ಠಾಣೆಯ ಮುಂದೆ ಮಾದಕ ವ್ಯಸನದಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಿದರು.
ನಂತರ ಡಿವೈಎಸ್‌ಪಿ ಬಿಟಿ.ರಾಜಣ್ಣ ಜಾಥವನ್ನು ಕುರಿತು ಮಾತನಾಡಿದ ಅವರು ನಗರದಲ್ಲಿ ಕಳ್ಳತನ ಪ್ರಕರಣಗಳು, ದರೋಢೆ ಪ್ರಕರಣಗಳ ಮೂಲ ಈ ಮಾದಕ ವ್ಯಸನಿಗಳ ಪದಾರ್ಥಗಳು, ಆದ್ದರಿಂದ ಯುವಕರು ಇಂತಹ ದುಷ್ಟಗಳಿಗೆ ಬಲಿಯಾಗದೆ ಉತ್ತಮವಾದ ಜೀವನ ರೂಪಿಸಿಕೊಳ್ಳಿ ಇದರಿಂದ ಕುಟುಂಬಗಳು ಬೀದಿಗೆ ಬರಲಿವೆ, ಓದುವ ವಯಸ್ಸಿನಲ್ಲಿ ಇಂತಹ ವ್ಯಸನಗಳಿಗೆ ಮಾರುಹೊಗದೆ ಜಾಗೃತರಾಗಿ ಎಂದರು.
ಇನ್ನೂ ಪಿಎಸ್‌ಐ ಕೆ.ಸತೀಶ್ ನಾಯ್ಕ್, ಮಾಧ್ಯಮದೊಂದಿಗೆ ಮಾತನಾಡಿ, ವ್ಯಾಸಂಗದ ಹಂತದಲ್ಲಿ ದಿನನಿತ್ಯ ನಾವು ನಮ್ಮ ಸಹಾಪಾಠಿಗಳೊಂದಿಗೆ ಹೆಚ್ಚಿನ ಕಾಲ ಕಳೆಯುತ್ತೆವೆ ಅಂತಹ ಸಹಾಪಾಠಿಗಳ ನಡೆತೆ ಉತ್ತಮವಾಗಿರಬೇಕು, ಅವರ ಸ್ವಭಾವ ಕೂಡ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಆದ್ದರಿಂದ ಓದುವ ಹಂತದಲ್ಲಿ ಗೆಳೆತನ ಮೂಲಕ ನಮ್ಮ ಜೀವನ ರೂಪಿಸಿಕೊಳ್ಳಬಹುದು, ಇನ್ನೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂಧರ್ಭದಲ್ಲಿ ಪಿಎಸ್‌ಐ ಧರೇಪ್ಪಾ ಬಾಳಪ್ಪ, ಇನ್ನೂ ಎಎಸ್‌ಐಗಳು, ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಮಕ್ಕಳು ಜಾಥದಲ್ಲಿ ಪಾಲ್ಗೊಂಡಿದ್ದರು.