ಚಿತ್ರದುರ್ಗ
ಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಮುದಾಯದ ಜನರು ನಾಟಕಗಳನ್ನು ನೋಡುವ ಆಸಕ್ತಿ ಕಳೆದುಕೊಂಡಿಲ್ಲ ಎಂದು ಚಿತ್ರದುರ್ಗದ ಹಿರಿಯ ರಂಗಕರ್ಮಿ ಆರ್ ಶೇಷಣ್ಣಕುಮಾರ ಹೇಳಿದರು
ಚಿತ್ರದುರ್ಗ ನಗರದ ತರಾಸು ರಂಗಮAದಿದಲ್ಲಿ ಶನಿವಾರ ರಾತ್ರಿ ಚಿತ್ರದುರ್ಗ ಬಹುಮುಖಿ ಕಲಾ ಕೇಂದ್ರ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮದಕರಿಪುರ ಕಾರಂಜಿ ಕಲ್ಚರಲ್ ಟ್ರಸ್ಟ್ ಐತಿಹ್ಯ ರಂಗ ಕೇಂದ್ರದ ಸಹಯೋಗದಲ್ಲಿ ಕರ್ನಾಟಕ ಸಂಭ್ರಮದ ಹಿನ್ನೆಲೆ ಆಯೋಜಿಸಿದ್ದ ರಂಗೋತ್ಸವ-2024 ಉಧ್ಘಾಟಿಸಿ ಮಾತನಾಡಿದರು
ಕರ್ನಾಟಕ ರಾಜ್ಯದಲ್ಲೇ ಚಿತ್ರದುರ್ಗ ರಂಗಭೂಮಿ ಕಲೆಗೆ ಹೆಸರಾಗಿದೆ ಚಿತ್ರದುರ್ಗದಲ್ಲಿ ನಾಟಕ ಕಲಾವಿದರು ಹತ್ತು ಹಲವು ಕಲಾ ಸಂಘಗಳನ್ನು ರಚಿಸಿಕೊಂಡು ನಿರಂತರವಾಗಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು ಸಾಮಾಜಿಕ ಬದಲಾವಣೆಗೆ ತಕ್ಕಂತೆ ಜನರು ಸಮೂಹ ಮಾಧ್ಯಮಗಳ ಸೆಳೆತಕ್ಕೆ ಒಳಗಾಗಿ ಪುಕ್ಕಟೆ ನಾಟಕಗಳನ್ನು ಅಭಿನಯಿಸಿದರೂ ಬಂದು ನೋಡುವ ತಾಳ್ಮೆ ಜನರಿಗಿಲ್ಲದಂತಾಗಿದೆ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು
ರAಗೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಎಂ ವೀರೇಶ ಮಾತನಾಡಿ ನಾಟಕ ಕಲಾವಿದರು ಎಂದಿಗೂ ಎದೆಗುಂದುವ ಅವಶ್ಯಕತೆಯಿಲ್ಲ ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳು ಹಲವು ಸಂಘ ಸಂಘ ಸಂಸ್ಥೆಗಳು ಸಮುದಾಯದ ಜನರಿಗೆ ಮೌಲ್ಯಗಳ ತಿಳಿಸಲು ಹೆಚ್ಚೆಚ್ಚು ನಾಟಕ ಪ್ರದರ್ಶನ ಹಮ್ಮಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು
ರಂಗ ಸನ್ಮಾನ ಸೀಕರಿಸಿದ ರಂಗಕರ್ಮಿ ಚಳ್ಳಕೆರೆ ಪಿ ತಿಪ್ಪೇಸ್ವಾಮಿ ಮಾತನಾಡಿ ಈ ಬಾರಿ ಸರ್ಕಾರ ಚಿತ್ರದುರ್ಗ ಜಿಲ್ಲೆಗೆ ರಂಗಭೂಮಿ ಕಲಾವಿದರನ್ನು ಗುರ್ತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ರಂಗಭೂಮಿ ಕಲಾವಿದರಿಗೆ ಸಂದ ಗೌರವ ಕಲಾವಿದರಿಗೆ ಮಾಸಾಶನ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಮನವಿ ಮಾಡಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಕೆ ಮಲ್ಲಿಕಾರ್ಜುನ ಮಾತನಾಡಿ ಇಂದಿನ ಕಾಲಘಟ್ಟದ ಜನರು ಡಿಸ್ಕೋ ದ್ಯಾನ್ಸ್, ಸಾರ್ವಜನಿಕ ಸ್ಥಳಗಳಲ್ಲಿ ಜರುಗುವ ಗಲಾಟೆ ಗದ್ದಲಗಳಿಗೆ ಬಂದು ಸೇರುತ್ತಾರೆ ಆದರೆ ಕಲಾಮಂದಿರದಲ್ಲಿ ಉಚಿತವಾಗಿ ಉಚಿತವಾಗಿ ನಾಟಕಾಭಿನಯ ಹಮ್ಮಿಕೊಂಡರೆ ಜನರೇ ಬರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು
ಶಿಕ್ಷಕ ಓ ಚಿತ್ತಯ್ಯ ಮಾತನಾಡಿ ಶಾಲಾ ಕಾಲೇಜು ಹಂತದ ವಿದ್ಯಾರ್ಥಿಗಳು ಹೆಚ್ಚೆಚ್ಚು ನಾಟಕಗಳನ್ನು ವೀಕ್ಷಿಸುವುದರಿಂದ ಅವರಲ್ಲಿ ಸಾಮಾಜಿಕ, ಶೈಕ್ಷಣಿಕ, ನೈತಿಕ ಮೌಲ್ಯಗಳು ವೃಧ್ದಿಯಾಗುತ್ತವೆ ಮಹಾತ್ಮ ಗಾಂಧೀಜಿ, ವಿವೇಕಾನಂದರು ಚಿಕ್ಕಂದದಿನಲ್ಲಿ ನಾಟಕಗಳನ್ನು ನೋಡಿ ತಮ್ಮ ಮನ ಪರಿವರ್ತನೆ ಮಾಡಿಕೊಂಡು ದೇಶಕ್ಕೇ ಆದರ್ಶರಾದರು ಎಂದು ಸ್ಮರಿಸಿದರು
ಇದೇ ವೇಳೆ ವೇದಿಕೆಯಲ್ಲಿ ಓ ಮೂರ್ತಿ ಸಂಗಡಿಗರು ಸುಗಮ ಸಂಗೀತ ಗೀತಗಾಯನ ನಡೆಸಿಕೊಟ್ಟರು ತುಮಕೂರಿನ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ (ರಿ) ದ ಕಲಾವಿದರು ಸಾಂಬಶಿವ ಪ್ರಹಸನ ಮತ್ತು ಹೊಟ್ಟೆಯ ಹಾಡು ಎರಡು ನಾಟಕಗಳನ್ನು ಅಭಿನಯಿಸಿದರು
ಸಂದರ್ಭದಲ್ಲಿ ರಚನಾ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಎಂ ಸಿ ಮಂಜುನಾಥ, ಬಹುಮುಖಿ ಕಲಾ ಕೇಂದ್ರದ ಪದಾಧಿಕಾರಿ ಮಧು, ರಾಜಣ್ಣ, ವೀರಣ್ಣ, ಚಿತ್ತಯ್ಯ, ರಂಗಕರ್ಮಿ ಚಳ್ಳಕೆರೆ ಪಿ ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಕೆ ಮಲ್ಲಿಕಾರ್ಜುನ, ಶಿವಣ್ಣ, ಲಕ್ಷಿö್ಮÃದೇವಿ, ಸುಜಾತಾ, ವಿವಿಧ ಕಲಾ ಸಂಘಗಳ ಪದಾಧಿಕಾರಿಗಳು ನಾಗರೀಕರು ನಾಟಕ ಕಲಾವಿದರು ಇದ್ದರು
(ಪೋಟೋ ಸಿಟಿಎ ನಾಟಕ 7)
ಚಿತ್ರದುರ್ಗ ನಗರದ ತರಾಸು ರಂಗಮAದಿದಲ್ಲಿ ಶನಿವಾರ ರಾತ್ರಿ ಚಿತ್ರದುರ್ಗ ಬಹುಮುಖಿ ಕಲಾ ಕೇಂದ್ರ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮದಕರಿಪುರ ಕಾರಂಜಿ ಕಲ್ಚರಲ್ ಟ್ರಸ್ಟ್ ಐತಿಹ್ಯ ರಂಗ ಕೇಂದ್ರದ ಸಹಯೋಗದಲ್ಲಿ ಕರ್ನಾಟಕ ಸಂಭ್ರಮದ ಹಿನ್ನೆಲೆ ಆಯೋಜಿಸಿದ್ದ ರಂಗೋತ್ಸವ-2024 ಚಿತ್ರದುರ್ಗದ ಹಿರಿಯ ರಂಗಕರ್ಮಿ ಆರ್ ಶೇಷಣ್ಣಕುಮಾರ ಉಧ್ಘಾಟಿಸಿದರು ರಚನಾ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಎಂ ಸಿ ಮಂಜುನಾಥ, ಬಹುಮುಖಿ ಕಲಾ ಕೇಂದ್ರದ ಪದಾಧಿಕಾರಿ ಮಧು, ರಾಜಣ್ಣ, ವೀರಣ್ಣ, ಅಭಿರುಚಿ ವೇದಿಕೆ ಸಂಚಾಲಕ ಒ ಚಿತ್ತಯ್ಯ, ರಂಗಕರ್ಮಿ ಚಳ್ಳಕೆರೆ ಪಿ ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಕೆ ಮಲ್ಲಿಕಾರ್ಜುನ, ಶಿವಣ್ಣ, ಲಕ್ಷಿö್ಮÃದೇವಿ, ಸುಜಾತಾ, ವಿವಿಧ ಕಲಾ ಸಂಘಗಳ ಪದಾಧಿಕಾರಿಗಳು ನಾಗರೀಕರು ನಾಟಕ ಕಲಾವಿದರು ಇದ್ದರು