ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪಡು ಹೊಕ್ಕಿದ್ದು ಕಳೆದ ಒಂದು ತಿಂಗಳಿನಿAದ ತಾಲೂಕಿನ ವಿವಿಧ ಸ್ಥಳಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗಳ ಭಕ್ತಿ ಪಡುಮುಟ್ಟಿದ್ದು ಅದರಂತೆ ಇಂದು ನಗರದ ಬೊಮ್ಮಸಮುದ್ರ ರಸ್ತೆಯಲ್ಲಿ ನೆಲೆಸಿರುವ. ಶ್ರೀ ಪಾರ್ಥಿ ಸಾರಥಿ ಕುವರನ ಸನ್ನಿದಾನದಲ್ಲಿ ಸುಮಾರು ಭಕ್ತಾಧಿಗಳು ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.
ಅದರಂತೆ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲೆ ಧರಸುವ ಮೂಲಕ ನಗರದ ಭಕ್ತಾಧಿಗಳು ಸ್ವಾಮಿಯ ಆರಾಧಕರಾಗಿ ತಮ್ಮ ಸನ್ನಿಧಿಯಲ್ಲಿ ಭಕ್ತಿಯಿಂದ ಸ್ವಾಮಿಯ ಆರಾಧನೆ ಮಾಡುತ್ತಿದ್ದರೆ.
ಇನ್ನೂ ಪಾರ್ಥ ಸಾರಥಿ ಕುವರನ ಸನ್ನಿಧಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರೀ ಗುರುಸ್ವಾಮಿಯಾದ ಗೋಪಲಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ಪಡಿಪೂಜಾ ಮಹೋತ್ಸವವನ್ನು ನೇರೆವೆರಿಸುವ ಮೂಲಕ ಸ್ವಾಮಿ ಕೃಪೆಗೆ ಪಾತ್ರರಾಗಿದ್ದಾರೆ.