ಚಳ್ಳಕೆರೆ : ನಮ್ಮ ಸರಕಾರದ ಅವಧಿಯಲ್ಲಿ ರೂಪಿಸಿದ ಜನರ ಬಳಿಗೆ ನಮ್ಮ ಸರಕಾರ ಎಂಬ ಮಾದರಿಯಲ್ಲಿ ಜನತಾ ದರ್ಶನವನ್ನು ಯಶ್ವಿಸಿಗೊಳಿಸಲಾಗುತ್ತಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿವೆ, ಕೊಟ್ಟ ಭರವಸೆಗಳನಗನ್ನು ಈಡೇರಿಸುತ್ತಿದೆ, ಈಗಾಗಲೇ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಜಿಲ್ಲಾ ಉಸ್ತೂವಾರಿ ಮಂತ್ರಿ ಡಿ.ಸುಧಾಕರ್ ಹೇಳಿದರು.
ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ನಮ್ಮ ರಾಜ್ಯ ಸರಕಾರದ ಐದನೇ ಗ್ಯಾರಂಟಿ ಯೋಜನೆಯನ್ನು ಇದೇ ಜ.12ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು, ಈಗಾಗಲೇ ಸಾವಿರಾರು ಯುವಕರು ಅರ್ಜಿಯನ್ನು ನೊಂದಾಯಿಸಿಕೊAಡಿದ್ದಾರೆ, ಇನ್ನೂ 4.ಲಕ್ಷಕ್ಕೂ ಅರ್ಜಿಗಳು ತಲುಪುವ ಸಾಧ್ಯತೆ ಇದೆ, ಇನ್ನೂ ಬಯಲು ಸೀಮೆಯ ಕ್ಷೇತ್ರದ ಅಭಿವೃದ್ದಿ ಹರಿಕಾರ ಎಂದು ಕರೆಸಿಕೊಳ್ಳುವ ಮೂರು ಬಾರಿ ಗೆಲುವು ಸಾಧಿಸಿದ ಶಾಸಕ ಟಿ.ರಘುಮೂರ್ತಿ ಕ್ರೀಯಾ ಶೀಲವುಳ್ಳವಂತವರು, ಇನ್ನೂ ಕ್ಷೇತ್ರದಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಮೊದಲೆನೆಯವರಾಗಿ ಸುಮಾರು 26.ಜನಸಂಪರ್ಕ ಸಭೆಗಳನ್ನು ಮಾಡುವುದರ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ.
ಅಪ್ಪಾರ ಭದ್ರಾ ನೀರು ಬರುವುದು ಗ್ಯಾರಂಟಿ :
ಕ್ಷೇತ್ರದಲ್ಲಿ ಬರಗಾಲಕ್ಕೆ ಸಂಬAಧಿಸಿದAತೆ ಗೋಶಾಲೆ ತೆರೆಯುವುದು, ಕುಡಿಯುವ ನೀರಿಗೆ ಆಹಾಕಾರ ಉಂಟಾಗAದAತೆ ನೊಡಿಕೊಳ್ಳುವುದು ಅಧಿಕಾರಿಗಳ ಕೆಲಸ ಸರಕಾರದಲ್ಲಿ ಕುಡಿಯುವ ನೀರಿಗೆ ಗೋಶಾಲೆಗೆ ಸದಾ ಅನುದಾನ ನೀಡಲಾಗುತ್ತಿದೆ ಎಂದರು.
ಇನ್ನೂ ಅಪ್ಪಾರ ಭದ್ರಾ ಯೋಜನೆ ಕೇವಲ ಎರಡು ಕಡೆ ಮಾತ್ರ ಸಮಸ್ಯೆ ಇದೆ ಅದರ ಭಾಗ ಪೂರ್ಣಗೊಂಡ ನಂತರ ನಮ್ಮ ಜಿಲ್ಲೆಗೆ ನೀರು ಹರಿದು ಬರುತ್ತದೆ, ವಾಣಿ ವಿಲಾಸ ಸಾಗರ ತುಂಬುತ್ತದೆ ಎಂದರು.
ಬಸ್ ಬಾಗಿಲು ಕಿಟಕಿ ಮುರಿಯ ಬೇಡಿ :

ಜನತಾ ದರ್ಶನಕ್ಕೆ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ , ನಮ್ಮ ಸರಕಾರದ ಪ್ರೀ ಬಸ್ ಯೋಜನೆ ಮಹಿಳೆಯರಿಗೆ ವರದಾನವಾಗಿದೆ, ಇನ್ನೂ ಸರಕಾರಿ ಬಸ್‌ಗಳ ಕಿಟಕಿ, ಬಾಗಿಲು ಮುರಿದಿರುವ ನಿದರ್ಶನಗಳು ಇವೆ ಎಂದು ಸಭೆಯಲ್ಲಿ ನಗೆಚಟಾಕಿ ಹಾರಿಸಿದರು, ರಾಜ್ಯದಲ್ಲಿ ಸುಮಾರು 100 ಕೋಟಿಗೂ ಹೆಚ್ಚಿನ ಪ್ರಯಾಣಿಸಿರುವ ಸಂಖ್ಯೆ ಇದೆ, ಇನ್ನೂ ಗೃಹ ಲಕ್ಷಿö್ಮÃ ಯೋಜನೆ ರಾಜ್ಯದಲ್ಲಿ ಸುಮಾರು 97 ರಷ್ಟು ಮಹಿಳೆಯರಿಗೆ ಉಪಯೋಗವಾಗಿದೆ, ಇನ್ನೂ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಮಾತ್ರ ಅಡಚಣೆ ಉಂಟಾಗಿದೆ ಸರಿಪಡಿಸುತ್ತೆವೆ ಎಂದರು.

ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಕಳೆದ ದಿನಗಳಲ್ಲಿ ಸುಮಾರು 26ಜನ ಸಂಪರ್ಕ ಸಭೆಗಳನ್ನು ಮಾಡುವ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಇನ್ನೂ ಸುಮಾರು 619 ವಿಷಯಗಳಲ್ಲಿ ಸು.239 ವಿಲೆವಾರಿಯಾಗಿದ್ದು, 379 ಬಾಕಿ ಅರ್ಜಿಗಳು ಇವೆ,

ಹೋಬಳಿಗೊಂದು ಗೋಶಾಲೆ : ಶಾಸಕ.ಟಿ.ರಘುಮೂರ್ತಿ ಭರವಸೆ :
ಇನ್ನೂ ತಾಲೂಕಿನಲ್ಲಿ ಬರಗಾಲದ ಪ್ರಯುಕ್ತ ಹೋಬಳಿಗೊಂದು ಗೋಶಾಲೆ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ, ಅದರಂತೆ ಕುಡಿಯುವ ನೀರಿಗೆ ತಾತ್ಪರ ಉಂಟಾಗAದತೆ ನೋಡಿಕೋಳಲಾಗುವುದು, ತಾಲೂಕಿನಲ್ಲಿ ನೆಲೆಸಿರುವ ಸುಮಾರು 1891 ದೇವರ ಹಸುಗಳಿಗೆ ಒಂದು ತಿಂಗಳಿಗೆ ಸುಮಾರು 22ಲಕ್ಷ ವೆಚ್ಚಾಗುವುದು, ಅದರಂತೆ ಈಗಾಗಲೇ ಸುಮಾರು 10 ಲಕ್ಷ ಅನುದಾನ ಮಂಜೂರಾತಿ ಹಾಗಿದೆ, ಅದರಂತೆ ನಗರಸಭೆ ಆಡಳಿತಾಧಿಕಾರಗಳು ಹಾಗಿರುವ ಜಿಲ್ಲಾಧಿಕಾರಿಗಳು ನಗರಸಭೆ ಕೌನ್ಸಲ್ ಸಭೆ ಕರೆಯದಿರುವುದು ನಗರಸಭೆಯಲ್ಲಿ ಅಭಿವೃದ್ದಿ ಕಾರ್ಯಗಳು ಕುಂಠಿತಗೊAಡಿವೆ ಆದ್ದರಿಂದ ಸಭೆ ಮಾಡಲು ಸದಸ್ಯರು ಮನವಿ ನೀಡಿದ್ದಾರೆ, ಅದನ್ನು ಜಿಲ್ಲಾಧಿಕಾರಿಗಳು ಪರಿಗಣಿಸಬೇಕು ಎಂದು ಸೂಚಿಸಿದರು.
ಬೆಳೆ ಪರಿಹಾರ ಅವ್ಯಾವಹಾರ :
ಕಳೆದ ಸಾಲಿನಲ್ಲಿ ರೈತರ ಬೆಳೆ ಪರಿಹಾರದಲ್ಲಿ ಅವ್ಯಾವಹಾರ ಹಾಗಿ ಸುಮಾರು ಮಹಾದೇವಪುರ ಗ್ರಾಮ ಪಂಚಾಯಿತಿನಲ್ಲೆ ಸುಮಾರು 80.ಲಕ್ಷದಷ್ಟು ಅವ್ಯಾವಹಾರ ಹಾಗಿದೆ ಎಂದರೆ ಈಡೀ ತಾಲುನಲ್ಲಿ ಅವ್ಯವಾಹರದ ತನಿಖೆ ಚುರುಕುಗೊಳ್ಳಬೇಕು, ತಕ್ಷಣ ತಪ್ಪಿಸ್ಥರಿಗೆ ಕಠಿಣ ಕ್ರಮ ಜರುಗಬೇಕು ಎಂದರು.

ಗ್ಯಾರAಟಿ ಯೋಜನೆ ಬೇಡ ಎನ್ನುವುದು ಎಷ್ಟರ ಮಟ್ಟಿಗೆ ಸರಿ :
ರೈತರು ಜನಪರವಾದ ನಿಲುವು ತಾಳಬೇಕು ನಮ್ಮ ರಾಜ್ಯ ಸರಕಾರ ರಾಜ್ಯದಲ್ಲಿ ಸಂಕಷ್ಟದಲ್ಲಿ ಇರುವ ಹಲವರನ್ನು ಪರಿಗಣಿಸಿ ಅವರಿಗೆ ಸ್ಥೆöÊರ್ಯ ತುಂಬುವ ಕೆಲಸ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳಿಂದ ಇಂದು ರಾಜ್ಯದ ಜನರು ಸಾಮಾರಸ್ಯದ ಜೀವನ ನಡೆಸುತ್ತಿದ್ದಾರೆ. ನಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಜನಪ್ರಿಯಾದ ಯೋಜನೆಗಳು ಹಾಗಿದೆ ಆದರೆ ಕೇವಲ ಗ್ಯಾರಂಟಿಗಳಿಗೆ ಅಭಿವೃದ್ದಿ ಕುಂಠಿತ ಎಂಬುದು ಸರಿಯಲ್ಲ ಎಂದರು.

ಇನ್ನೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ. ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಸುಮಾರು 8 ಜನತಾ ದರ್ಶನ ಕಾರ್ಯಕ್ರಮಗಳನ್ನು ಮುಗಿಸಿ ಇಂದು 9ನೇ ಜನತಾ ದರ್ಶನದಲ್ಲಿ ಬಾಗಿಯಾಗಿದ್ದೆವೆ ಅದರಂತೆ, ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕಛೇರಿಗೆ ದಾವಿಸಬಾರದು ಅವರ ಬಳಿಗೆ ಅಧಿಕಾರಿಗಳು ತೆರಳಬೇಕು ಎಂಬ ಸದುದ್ದೆಶದಿಂದ ಸರಕಾರ ರೂಪಿಸಿದ ಜನತಾ ದರ್ಶನ ಪ್ರಮುಖ ಉದ್ದೇಶವಾಗಿದೆ, ಇನ್ನೂ ಇಷ್ಟು ದಿನಗಳಕಾಲ ಕೇವಲ ಅರ್ಜಿ ಬರೆದು ಕಛೇರಿಗೆ ಅಧಿಕಾರಿಗಳಿಗೆ ಬರೆದು ಕೊಡುವ ಪರಿಪಾಠ ಇತ್ತು ಆ ಸಮಸ್ಯೆ ಇತ್ಯರ್ಥವಾಗಿದೆಯೋ, ಇಲ್ಲವೋ ಎಂಬುದು ಆ ವ್ಯಕ್ತಿ ಬಂದು ಹೇಳಿದಾಗ ಮಾತ್ರ ಗೋಚರಿಸುತ್ತಿತ್ತು ಆದರೆ ಈಗ ಗಣಕಯಂತ್ರದ ಮೂಲಕ ಅರ್ಜಿ ಸ್ವೀಕರಿಸುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಾಜ್ಯದ ಪ್ರಮುಖ ಅಧಿಕಾರಿಗಳು ಅರ್ಜಿ ವಿಲೆವಾರಿಯ ಬಗ್ಗೆ ಮಾಹಿತಿ ಪಡೆಯಬಹುದು, ಎಲ್ಲಾ ಅರ್ಜಿಗಳನ್ನು 30ದಿನಗಳಲ್ಲಿ ವಿಲೆ ಮಾಡಲು ಸರಕಾರ ಸೂಚಿಸಿದೆ ಎಂದರು.
ಚಳ್ಳಕೆರೆ ಪೈಲೆಟ್ ಪ್ರಾಜೆಕ್ಟೆ :
ಸುಮಾರು 8ಜನತಾ ದರ್ಶನದಲ್ಲಿ ಸುಮಾರು 2,229 ಅರ್ಜಿಗಳು ಸ್ವೀಕೃತಗೊಂಡಿವೆ, ಅದಲ್ಲಿ 1,305 ವಿಲೆಯಾರಿಯಾಗಿವೆ ಸುಮಾರು 925 ಅರ್ಜಿಗಳು ಮಾತ್ರ ವಿಲೆ ಹಂತದಲ್ಲಿ ನಡೆಯುತ್ತಿವೆ, ಇನ್ನೂ ಕಂದಾಯಕ್ಕೆ ಸಂಬAಧಿಸಿದ ಸು.395ವಿಲೆಹಾಗಿವೆ 533ಅರ್ಜಿಗಳು ಬಾಕಿ ಇವೆ, ಕಾಲಮಿತಿಯಲ್ಲಿ ವಿಲೆ ಮಾಡಲಾಗುತ್ತಿದೆ ಎಂದರು.
ಬರಗಾಲದ ಪ್ರಯುಕ್ತ ರೈತರ ಹಿತ ದೃಷ್ಠಿಯಿಂದ ತಾಲೂಕಿನಲ್ಲಿ ಸುಮಾರು 29ಸಾವಿರ ರೈತರ ಮಾಹಿತಿ ಇದೆ, ಪ್ರೋಟ್ಸ್ ತಂತ್ರಾಶAದ ಮೂಲಕ ಬೆಳೆಪರಿಹಾರ ಡಿಪಿಟಿ ಮೂಲಕ ಪರಿಹಾರವನ್ನು ಇನ್ನೂ ನಾಲ್ಕು ದಿನಗಳಲ್ಲಿ ಹಾಕಲಾಗುತ್ತಿದೆ, ಇನ್ನೂ ಕಳೆದ ಬಾರಿ ಬೆಳೆ ಪಾರಿಹಾರ ನ್ಯೂನ್ಯತೆಯಲ್ಲಿ ಹಾಗಿದ ಅವ್ಯವಾಹಾರಕ್ಕೆ ಸಂಬAಧಿಸಿದ ಅಧಿಕಾರಿಗಳನ್ನು ಪರೀಶಿಲಿಸಿ ಅದರ ಸಂಬAಧ ಚಳ್ಳಕೆರೆ ತಾಲೂಕನ್ನು ಪೈಲೆಟ್ ಪ್ರಾಜೆಕ್ಟೆ ಹಾಗಿ ಮಾಡಲಾಗುತ್ತಿದೆ ಎಂದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಉಸ್ತೂವಾರಿ ಮಂತ್ರಿ ಡಿ.ಸುಧಾಕರ್, ಸ್ಥಳೀಯ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ದಿದ್ಯಪ್ರಭು ಜಿಆರ್‌ಜೆ, ಜಿಲ್ಲಾ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಪಂ. ಉಪ ಕಾರ್ಯದರ್ಶಿ ತಿಮ್ಮಪ್ಪ, ಡಿವೈಎಸ್ಪಿ ರಾಜಣ್ಣ, ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ, ತಹಶೀಲ್ದಾರ್ ರೇಹಾನ ಪಾಷ, ಇಓ ಶಶಿಧರ್, ಸಿಪಿಐ ಕೆ.ಸಮೀವುಲ್ಲಾ, ಪಿಎಸ್‌ಐ ಕೆ.ಸತೀಶ್ ನಾಯ್ಕ್, ಬಸವರಾಜ್, ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಇದೇ ಸಂಧರ್ಭದಲ್ಲಿ ವಿವಿಧ ಇಲಾಖೆಯಿಂದ ಸಾರ್ವಜನಿಕರ ಸೌಲಭ್ಯಗಳ ದರ್ಶನಕ್ಕೆ ಪ್ರತ್ಯೇಕ ಕೌಂಟರ್ ತೆರಯಾಲಾಗಿತ್ತು,.

ಸರ್ವರ್ ಸಮಸ್ಯೆ :
ಇನ್ನೂ ಸಾರ್ವಜನಿಕರ ಅರ್ಜಿ ಸ್ವೀಕರಿಸಿಲು ಗಣಕೀಕೃತ ಕೌಂಟರ್ ತೆರೆಯಲಾಗಿತ್ತು ಆದರೆ ಇಂಟರ್ ನೆಟ್ ಇಲ್ಲದೆ ಸರ್ವರ್ ಸಮಸ್ಯೆ ಎಂದು ಗಂಟೆ ಗಟ್ಟಲೆ ಕಾಯುತ್ತೆವೆ ಎಂದು ಸಮಸ್ಯೆ ಹೊತ್ತು ಬಂದ ಸಾರ್ವಜನಿಕರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊAಡರು.

  1. ಅರ್ಜಿ ನೀಡಲು ಬಂದ ಸಾರ್ವಜನಿಕರಿಗೆ ಸರ್ವರ್ ಸಮಸ್ಯೆ
    2.ನಗರಸಭೆ ಸಾಮಾನ್ಯ ಸಭೆ ನಡೆಸುವಂತೆ ಜನತಾ ದರ್ಶನದಲ್ಲಿ ನಗರಸಭೆ ಸದಸ್ಯರಿಂದ ಮನವಿ.

About The Author

Namma Challakere Local News
error: Content is protected !!