ಚಳ್ಳಕೆರೆ: ದ್ವಿತೀಯ ಪಿಯುಸಿ ನಂತರದ ಕೋರ್ಸ್ ಗಳಿಗೆ ಸಿಇಟಿ ಪರೀಕ್ಷೆ ತೆಗೆದುಕೊಳ್ಳಲು ಎಲ್ಲಾ ರೀತಿಯ ಮಾಹಿತಿಯನ್ನು ನೀಡಿ ಅರ್ಜಿಯನ್ನು ತುಂಬಲು ಸಹಾಯ ಮಾಡಿ, ಅನುಕೂಲ ಮಾಡಿಕೊಡಬೇಕು ಎಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ ರವೀಶ್ ಕುಮಾರ್ ಹೇಳಿದರು.
ಅವರು ನಗರದ ಸೊಮಗುದ್ದು ರಸ್ತೆಯ ಸರಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಿಇಟಿ ವಿದ್ಯಾರ್ಥಿ ಮಿತ್ರ – 2024 ಚಳ್ಳಕೆರೆ ತಾಲೂಕಿನ ಎಲ್ಲಾ ವಿಜ್ಞಾನ ವಿಭಾಗದ ಉಪನ್ಯಾಸಕರಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸ ಬೇಕಾಗಿರುವುದು ಶಿಕ್ಷಕರ ಜವಾಬ್ದಾರಿಯಾಗಿದ್ದು ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ತಮ್ಮ ವೃತ್ತಿ ಜೀವನದ ಇಂಜಿನಿಯರಿAಗ್ ವೈದ್ಯ ಸೇರಿದಂತೆ ಇತರೆ ವೃತ್ತಿ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಿಇಟಿ ಪರೀಕ್ಷೆ ಅತ್ಯಂತ ಪ್ರಮುಖವಾಗಿದ್ದು ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡಿ ಲೋಪ ದೋಷಗಳಾಗದಂತೆ ಅರ್ಜಿಗಳನ್ನು ತುಂಬಲು ಉಪನ್ಯಾಸಕರು ಸ್ಥಳದಲ್ಲಿ ಇದ್ದು ನೆರವು ನೀಡಬೇಕು ತರಬೇತಿ ಕಾರ್ಯಗಾರವನ್ನು ಸಮರ್ಥ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿಯನ್ನು ನೀಡಿ ಉಜ್ವಲ ಭವಿಷ್ಯಕ್ಕೆ ಕಾರಣರಾಗಿ ಎಂದು ತಿಳಿಸಿದರು
ಹಿರಿಯ ಉಪನ್ಯಾಸಕರಾದ ವಸಂತ ಕುಮಾರ್ ಮಾತನಾಡಿ, ಇದು ಅತ್ಯಂತ ಉತ್ತಮವಾದ ಕಾರ್ಯಗಾರವಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ನಿಮ್ಮಿಂದ ಅನುಕೂಲವಾಗುತ್ತದೆ , ಇದನ್ನು ಮಕ್ಕಳಿಗೆ ತಲುಪಿಸುವ ಕಾರ್ಯ ನಿಮ್ಮಿಂದ ಸಾದ್ಯ ಎಂದರು.

ಈ ಕಾರ್ಯಕ್ರಮದಲ್ಗಿ, ಪ್ರಾಚಾರ್ಯರಾದ ಶಿವಾರೆಡ್ಡಿ, ವೀರೇಶ್ , ನರೇಂದ್ರ ಬಾಬು, ಸಿಇಟಿ ಮಾಸ್ಟರ್ ಟ್ರೈನರ್ ಶಾಂತಕುಮಾರಿ ಬಿ, ಅಶ್ವತ್ ರೆಡ್ಡಿ, ಕೋಮಲ, ಪಾಪಣ್ಣ, ಉಮೇಶ್, ಈರಣ್ಣ, ಶ್ರೀತಿಪ್ಪೇಸ್ವಾಮಿ, ಜಗದೀಶ್, ಹಾಗೂ ಚಳ್ಳಕೆರೆ ತಾಲ್ಲೂಕಿನ ಎಲ್ಲಾ ವಿಜ್ಞಾನ ಉಪನ್ಯಾಸಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!