ಚಳ್ಳಕೆರೆ : ನಗರದಲ್ಲಿ ಶೌಚಾಲಯ ಪರೀಶಿಲನೆಗೆ ಹೈ ಕೋರ್ಟ್ ಸೂಚನೆ ಮೇರೆಗೆ ಇಂದು ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿದರು.
ಇನ್ನೂ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ಹೈಟೆಕ್ ಸ್ಪರ್ಶದ ಮಹಾತ್ವಕಾಂಕ್ಷೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಈ ಯೋಜನೆ ವೆಚ್ಚಾ ಕೇಂದ್ರಸರಕಾರ ರಾಜ್ಯಸರಕಾರ ಹಾಗೂ ನಗರಸಭೆ ಅನುದಾನದ ಮೂಲಕ ಅನುದಾನ ಕೃಡಿಕರಿಸಿ ನಿರ್ಮಾಣ ಮಾಡಲಾಗುತ್ತಿದೆ.
ಇನ್ನೂ ಜನಸಂಖ್ಯೆಗೆ ತಕ್ಕಂತೆ ನಗರದ ಸಂತೆ ಮಾರುಕಟ್ಟೆಯ ಸ್ಥಳದಲ್ಲಿ ಶೌಚಾಲಯ ನಿರ್ಮಾಣಕ್ಕೂ ಸ್ಥಳ ಪರೀಶಿಲನೆ ನಡೆಸಿದರು.
ಈದೇ ಸಂಧರ್ಭದಲ್ಲಿ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಪರಿಸರ ಎಂಜಿನಿಯಾರ್ ನರೇಂದ್ರಬಾಬು, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸ್ಥಳದಲ್ಲಿ ಇದ್ದರು.