ನಾಯಕನಹಟ್ಟಿ:: ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ವಜ್ರ ಮಹೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಡಾ.ಹೆಚ್.ಎಂ.ವಿಜಯಕುಮಾರ್ ಉದ್ಘಾಟಿಸಿದರು.
ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ವಜ್ರ ಮಹೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ದಿವ್ಯ ಸಾನಿಧ್ಯವಹಿಸಿದ ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಆರ್ಶೀವಚನ ನೀಡಿದರು.
ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆ ವಜ್ರಮಹೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ
ವಿದ್ಯೆ ವಿವಾಧ ಸೃಷ್ಠಿಸಲು ಸಹಕಾರಿಯಾಗಬಾರದು
ನಾಯಕನಹಟ್ಟಿ :: ಇಂದಿನ ಆಧುನಿಕ ಯುಗದಲ್ಲಿ ಪಡೆದುಕೊಳ್ಳುತ್ತಿರುವ ಶಿಕ್ಷಣವು ಉನ್ನತ ಸಾಧನೆ ಮತ್ತು ಸಮಾಜದ ಏಳ್ಗಿಗೆ ಸಹಕಾರಿಯಾಗಬೇಕೇ ಹೊರತು ವಿವಾಧ ಸೃಷ್ಠಿಸಲು ನೆರವಾಗಬಾರದು ಎಂದು ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಮಠದ ನಾಲ್ವಡಿ ಶಾಂತಲಿAಗ ಶಿವಾಚಾರ್ಯ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರ ನಡೆದ ವಜ್ರ ಮಹೋತ್ಸವ ಮತು
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಆರ್ಶೀವಚನ ನೀಡಿದರು.
ಮನುಷ್ಯ ತನ್ನ ಜೀವಮಾನದಲ್ಲಿ ತಾನು ಮಾಡಿದ ಒಳ್ಳೆಯ ಕೆಲಸಗಳನ್ನು ಮಾತ್ರ ಸಾರ್ವಜನಿಕರವಾಗಿ ಹೇಳಿಕೊಂಡು ಮುಂದೆ ಸಾಗುತ್ತಾನೆ. ಆದರೆ ತಾನು ಮಾಡಿದ ತಪ್ಪು ಕೆಲಸಗಳನ್ನು ವಿಗ್ರಹಮುಂದೆ ಹೇಳಿಕೊಳ್ಳುತ್ತಾನೆ. ಯಾವ ವ್ಯಕ್ತಿಯು ತಾನು ಮಾಡಿದ ತಪ್ಪುಗಳನ್ನು ಬಹಿರಂಗವಾಗಿ ಹೇಳಿಕೊಂಡು ಅವುಗಳನ್ನು ಆ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತಾನೋ ಅಂತವರ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ತಪ್ಪನ್ನು ಒಪ್ಪಿಕೊಳ್ಳುವುದೇ ನಿಜವಾದ ಸಂಸ್ಕಾರ. ಈ ಸಂಸ್ಕಾರ ಉತ್ತಮವಾದ ವಿದ್ಯೆಯಿಂದ ದೊರೆಯುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮವಾದ ಶಿಕ್ಷಣದ ಮೂಲಕ ಮೌಲ್ಯಗಳನ್ನು ಕಲಿಯಬೇಕು. ಯಾರು ಮೌಲ್ಯಗಳನ್ನು ಬದುಕಲ್ಲಿ ಅಳವಡಿಸಿಕೊಂಡಿರುತ್ತಾರೆಯೋ ಅವರು ದೈವ ಮತ್ತು ಧರ್ಮದ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುತ್ತಾರೆ. ಹಾಗೇ ನಮ್ಮ ಬದುಕಿಗೆ ಆದರ್ಶವಾಗಿ ಇರಬೇಕಾದ ಮೊದಲನೆ ವ್ಯಕ್ತಿ ಜನ್ಮ ನೀಡಿದ ಜನನಿ, ನಂತರ ತಂದೆ. ಅವರ ನಂತರ ಗುರು-ಹಿರಿಯರು ಮತ್ತು ಜನ್ಮಿಸಿದ ಊರು. ಇವುಗಳಿಗೆ ಬದುಕಿನುದ್ದಕ್ಕೂ ಶ್ರದ್ಧಾಭಕ್ತಿಯಿಂದ ನಡೆದುಕೊಂಡರೆ ಭಗವಂತನ ಕಾರುಣ್ಯ ದೊರೆಯುತ್ತದೆ ಎಂದರು.
ವಿದ್ಯಾಸAಸ್ಥೆಯ ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ ಮಾತನಾಡಿ, “೧೯೬೧-೬೨ರಲ್ಲಿ ಸ್ಥಾಪನೆಯಾದ ಶ್ರೀತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾಸಂಸ್ಥೆಯು ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. ಇಂದಿಗೆ ವಿದ್ಯಾಸಂಸ್ಥೆಯು ಸ್ಥಾಪನೆಯಾಗಿ ೬೦ವರ್ಷ ತುಂಬಿದ್ದು, ಈಗಲೂ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶ್ರಮಿಸುತ್ತಿದೆ” ಎಂದರು.
ವಿದ್ಯಾಸAಸ್ಥೆ ಅಧ್ಯಕ್ಷ ಜಿ.ಎಸ್.ಪ್ರಭುಸ್ವಾಮಿ, ಉಪಾಧ್ಯಕ್ಷ ಡಾ.ಹೆಚ್.ಎಂ.ವಿಜಯಕುಮಾರ್, ಕೋಶಾಧ್ಯಕ್ಷ ಕೆ.ಎಂ.ನಾಗರಾಜ್, ಮುಖಂಡ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಮಾತನಾಡಿದರು. ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್ ,ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು