ಚಳ್ಳಕೆರೆ : ಚಳ್ಳಕೆರೆ ತಾಲೂಕು ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟ( ಬಹುಜನವಾದ ) ವತಿಯಿಂದ ಅಕ್ಷರದ ಅವ್ವ ಎಂದು ಹೆಸರಾಂತ ಸಾವಿತ್ರಿ ಬಾಪುಲೆ ಜನ್ಮದಿನವನ್ನು ಆಚರಿಸಲಾಯಿತು.
ಇನ್ನೂ ಸಂಘಟನೆ ಅಧ್ಯಕ್ಷರಾದ ಉಮೇಶ್ಚಂದ್ರ ಬ್ಯಾನರ್ಜಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಜನೇವರಿ 3,1831ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದರು. ತಮ್ಮ ಹತ್ತನೇ ವಯಸ್ಸಿನಲ್ಲಿ 13ವರ್ಷದ ಜ್ಯೋತಿರಾವ್ ಫುಲೆಯವರನ್ನು ವಿವಾಹವಾದರು. ತಮ್ಮ ಮನೆಯಲ್ಲಿಯೇ ಜ್ಯೋತಿರಾವ್ ರವರು ತಮ್ಮ ಪತ್ನಿಗೆ ಶಿಕ್ಷಣ ನೀಡಿದರು ಎಂದರು.
ಇದೇ ಸಂಧರ್ಭದಲ್ಲಿ ಉಪಾಧ್ಯಕ್ಷ ಕೆ.ಪೆನ್ನೇಶ್, ಮುತ್ತುರಾಜ್ ಮಾತನಾಡಿ, ಶಿಕ್ಷಣದ ನಂತರ ಸುತ್ತಮತ್ತಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸದರು. ಶಿಕ್ಷಣದ ಮೂಲಕ ಮಾತ್ರ ಹೆಣ್ಣು ಮಕ್ಕಳ ಜೀವನ ಉದ್ಧಾರವಾಗಬಹುದು ಎಂದು ನಂಬಿದ್ದರು. ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. 1847ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಆಗ ಅವರಿಗೆ 17 ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾದರು ಎಂದು ಸ್ಮರಿಸಿದರು.
ಈದೇ ಸಂಧರ್ಭದಲ್ಲಿ ಸಂಘಟನೆ ಅಧ್ಯಕ್ಷರಾದ ಉಮೇಶ್ಚಂದ್ರ ಬ್ಯಾನರ್ಜಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಹೆಗ್ಗೆರೆ, ಉಪಾಧ್ಯಕ್ಷ ಕೆ.ಪೆನ್ನೇಶ್, ರವಿಕುಮಾರ್ ಎಸ್, ನನ್ನಿವಾಳ ಮುತ್ತುರಾಜ್, ಸುರೇಶ್ ಆರ್ ಶ್ರೀನಿವಾಸ್, ಎಸ್.ಚಂದ್ರು, ಯುವ ಮುಖಂಡರುಗಳು ಉಪಸತ್ತಿದ್ದರು