ನಾಯಕನಹಟ್ಟಿ:: ಹೋಬಳಿಯ ಮಲ್ಲೂರಹಳ್ಳಿ ಗ್ರಾಮದ ಬುಡಕಟ್ಟು ಜನರ ಆರಾಧ್ಯ ದೇವತೆ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಶ್ರೀ ಕೊಲ್ಲಾಪುರದಮ್ಮ ದೇವಿಯ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೇವಿತೆಯಾಗಿದ್ದಾಳೆ.
ಜಾತ್ರೆಯ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅನಾವರಣಗೊಂಡವು.
ಗ್ರಾಮಸ್ಥರು ಶ್ರೀ ಕೊಲ್ಲಾಪುರದಮ್ಮ ದೇವಿಯ ಪೂಜಾ ಕೈಗಾರಿಗಳನ್ನು ನೆರವೇರಿಸಿ ಕಾಸು ಮೀಸಲು ಮೊಸರು ಕುಂಭ ಜಿನಿಗೆಹಾಲು ತಂದು ಶ್ರೀ ದೇವಿಯ ರಥಕ್ಕೆ ಎಡೆ ಹಾಕಲಾಯಿತು.
ಶ್ರೀ ಕೊಲ್ಲಾಪುರದಮ್ಮ ದೇವಿಯ ದೇವಸ್ಥಾನದಿಂದ ಪಾದಗಟ್ಟಿಯವರಿಗೆ ತಪ್ಪಡಿ ಕಹಳೆ ಉರುಮೆ ಸೇರಿ ಹಲವು ಜಾನಪದ ವಾದ್ಯಗಳು ಮತ್ತು ಪಂಜು ನಂದಿ ಕೋಲುಗಳ ಮೆರವಣಿಗೆ ನಡೆಯಿತು.
ರಥೋತ್ಸವಕ್ಕೆ ಮೊದಲು ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ದಳವಾಯಿ ರವರು ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿಗಳಿಗೆ ಮುಕ್ತಿ ಬಾವುಟವನ್ನು ಪಡೆದುಕೊಂಡರು.
ನಂತರ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ತಮ್ಮಯ್ಯ, ಭೈಯಣ್ಣ, ಮಲ್ಲಿಕಾರ್ಜುನ್, ಮಲ್ಲಯ್ಯ ,ಸಣ್ಣ ಪಾಲಯ್ಯ, ಎಚ್ ಪಿ ಪಾಲಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷ ಎ. ದಳವಾಯಿ, ಉಪಾಧ್ಯಕ್ಷೆ ಕೆ.ಟಿ.ಮಂಜುಳಾ, ಸದಸ್ಯರಾದ ಬಿ ಕಾಟಯ್ಯ ಟಿ.ಪಾಲಯ್ಯ, ಲಕ್ಷ್ಮಮ್ಮ, ನಲ್ಲಜರ್ವಮ್ಮ, ಮಂಜುಳಾ, ಕಮಲಮ್ಮ, ಚಂದ್ರಣ್ಣ ,ವಿಶಾಲಾಕ್ಷಿ, ಸಣ್ಣಪ್ಪಯ್ಯ, ಗೀತಮ್ಮ, ಚಿನ್ನಮ್ಮ, ಕಾಮವ್ವ, ರಾಜನಾಯ್ಕ , ಮತ್ತು ಗ್ರಾಮದ ಎಂ. ಪ್ರಕಾಶ್ ಗೌಡ ,ಸೇರಿದಂತೆ ಮಲ್ಲೂರಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು