ಚಳ್ಳಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮಧ್ಯೆ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ, ಇದರಿಂದ ವಿದ್ಯಾವಂತ ಯುವಕರಿಂದ ಹಿರಿವಯಸ್ಸಿನ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆರೋಪಿಸಿದ್ದಾರೆ.
ಅವರು ತಾಲೂಕಿನ ತಳಕು ಹೋಬಳಿಯ ಕಾಲುವೆಹಳ್ಳಿ ಗೌಡರ ಹಟ್ಟಿ ಯಾದಲಗಟ್ಟೆ ಕ್ಯಾತಗೊಂಡನಹಳ್ಳಿ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಮಹಿಳಾ ಸಂಘಗಳು ಹಾಗೂ ಗ್ರಾಮಸ್ಥರು ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.,,,,,
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರು ಹೆಚ್ಚಾಗುತ್ತಿದ್ದು, ಈ ಅಕ್ರಮ ಮಧ್ಯವನ್ನು ಸೇವಿಸಿ ಯುವಜನತೆ ಕೂಲಿ ಮಾಡಿದ ಹಣವನ್ನೆಲ್ಲ ಮಧ್ಯಪಾನಕ್ಕೆ ಖರ್ಚು ಮಾಡುತ್ತಿದ್ದು ಹೆಂಡತಿ ಮಕ್ಕಳನ್ನು ದಿನನಿತ್ಯ ಹಿಂಸಿಸುತ್ತಿದ್ದಾರೆ ಮನೆಗಳಲ್ಲಿ ನೆಮ್ಮದಿ ಇಲ್ಲದೆ ಹೆಂಡತಿ ಮಕ್ಕಳು ಉಪವಾಸವಿರುವ ಪರಿಸ್ಥಿತಿ ಬಂದೊದಗಿದೆ
ಇಂತಹ ದುಷ್ಚಟಕ್ಕೆ ವಿದ್ಯಾರ್ಥಿಗಳು ಸಹ ಬಲಿಯಾಗುತ್ತಿದ್ದು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಕೆಲವರು ಕುಡಿತದ ಚಟಕ್ಕೆ ಬಿದ್ದು ಕೂಲಿ ಹೋಗದೆ ನಿರುದ್ಯೋಗಿಗಳಾಗಿ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ
ಇದನ್ನು ಮನಗಂಡು ಗ್ರಾಮಗಳಲ್ಲಿ ಮಧ್ಯ ಮಾರಾಟ ಮಾಡದಂತೆ ಪಂಚಾಯಿತಿ ಮುಖಂಡರು ಮತ್ತು ಗ್ರಾಮದ ಮುಖ್ಯಸ್ಥರು ರಾಜಿ ಪಂಚಾಯತಿ ನಡೆಸಿ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡಿದರೂ ಬೆಲೆ ಕೊಡದೆ ಉದಾಸೀನ ಮಾಡಿ ಕದ್ದು ಮುಚ್ಚಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಆದ್ದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಕೂಡಲೇ ಇಂತಹ ಅಕ್ರಮ ಮಧ್ಯ ಮಾರಾಟಗಾರರ ಮೇಲೆ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಅಬಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಬಕಾರಿ ನಿರೀಕ್ಷಕ ನಾಗರಾಜ್ ಮಾತನಾಡಿ ,ಅಕ್ರಮ ಮಧ್ಯ ಮಾರಾಟ ಮಾಡುವುದು ಕಾನೂನಿನ ರೀತಿಯಲ್ಲಿ ಅಪರಾಧವಾಗಿದ್ದು ಕೂಡಲೇ ಈ ಗ್ರಾಮಗಳಿಗೆ ಭೇಟಿ ನೀಡಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪಾಲಣ್ಣ ರಂಗಸ್ವಾಮಿ ಬಿ ಮಹಾಂತೇಶ ಕುಮಾರ ಗ್ರಾಮ ಪಂಚಾಯತಿ ಸದಸ್ಯರಾದ ತಿಪ್ಪಕ್ಕ ತಿಪ್ಪೇಸ್ವಾಮಿ ಆಶಾ ಶಿಲ್ಪ ಪವಿತ್ರ ಬಾಲಣ್ಣ ಲಕ್ಷ್ಮಿ ದೇವಿ ಜಯಲಕ್ಷ್ಮಿ ಓಬಳಮ್ಮ ಜಯಮ್ಮ ಸರಸ್ವತಿ ಸಿದ್ದಮ್ಮ ಶಿವಮ್ಮ ಲಕ್ಷ್ಮಕ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.