ನಾಯಕನಹಟ್ಟಿ:: ಜ.1.
ನೊಂದವರ ಅಸಹಾಯಕರ ಮತ್ತು ಬಡವರಂತಹ ವರ್ಗದ ಜನರ ಸಮಾಜ ಸೇವೆ ಮಾಡಲು ಅಧಿಕಾರದ ಅವಶ್ಯಕತೆ ಇಲ್ಲ ಉತ್ಕರ್ಷವಾದ ಮನಸ್ಸು ಇರಬೇಕು ಇಂತಹ ಸಮಾಜ ಸೇವೆಗಳು ಮುಂದಿನ ಜನ್ಮದವರೆಗೆ ನಮ್ಮಗಳನ್ನು ಯಶಸ್ಸಿನ ದಾರಿಯಲ್ಲಿ ಕೊಂಡಯುತ್ತವೆ ಎಂದು ನಿಕಟಪೂರ್ವ ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು..
ಸೋಮವಾರ ಪಟ್ಟಣದ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದಂತ 2024ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಈ ಸಂಘದ ಮುಖಾಂತರ ಇಂತಹ ಸೇವೆಗಳನ್ನು ಕೈಗೊಳ್ಳಲು ವಿಪು ಲವಾದ ಅವಕಾಶಗಳಿವೆ ಈ ಭಾಗದಲ್ಲಿರುವಂತಹ ಅನೇಕ ಜನರಿಗೆ ನನ್ನ ಉಡುಪು ಶೈಕ್ಷಣಿಕ ಸಾಮಗ್ರಿಗಳು ಅಂಗನವಾಡಿ ಮತ್ತು ಶಾಲಾ ಕೊಠಡಿಗಳ ದುರಸ್ತಿ ಕಾರ್ಯಗಳು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬಹುದು ಇದರ ಮುಖಾಂತರ ಸಮಾಜದ ಋಣವನ್ನು ತೀರಿಸಬಹುದು ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಸಂಘದೊಂದಿಗೆ ಕಾರ್ಯಯೋಜನೆ ರೂಪಿಸಿ ಹೆಜ್ಜೆ ಹಾಕಲಾಗುವುದೆಂದು ಎಂದರು.
ಇದೆ ವೇಳೆ ಎಂ ವೈ ಟಿ ಸ್ವಾಮಿ ಮಾತನಾಡಿ ಈ ಸಂಘವು ಇಂತಹ ಸಮಾಜ ಸೇವೆ ಅಂತ ಕಾರ್ಯಗಳಿಗೆ ಒಂದು ಮುನ್ನುಡಿ ಹಾಕಿಕೊಂಡಿರುವುದು ಸಂತಸದ ವಿಚಾರ ಇಂತಹ ಒಂದು ಹೊಸ ಸಂಪ್ರದಾಯಕ್ಕೆ ಮುಂದಾಗಿರುವುದು ಈ ಭಾಗದ ಹಲವು ಬಡವರು ಮತ್ತು ಅಸಹಾಯಕರಿಗೆ ನೆರವಾಗುತ್ತದೆ ಸಂಘದ ಎಲ್ಲ ಸದಸ್ಯರುಗಳು ಸಮಾಜ ಸೇವೆ ಅಂತ ಮಹತ್ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಹಟ್ಟಿ ಮಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು .ಮಾತನಾಡಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಸಂಕಷ್ಟದಲ್ಲಿರುವಂತಹ ಜನಗಳ ಕೈ ಹಿಡಿದು ಆಸರೆ ನೀಡುವಂತಹ ಮಹತ್ವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಈ ನಿಟ್ಟಿನಲ್ಲಿ ನೆರವು ನೀಡುವಂತಹ ಹೆಚ್ಚು ಹೆಚ್ಚು ಅಧಿಕಾರಿಗಳು ಈ ಸಂಘದೊಂದಿಗೆ ಕೈಜೋಡಿಸಿ ಹಿಂದುಳಿದ ಇಂತಹ ತಾಲೂಕುಗಳಲ್ಲಿ ನೊಂದವರ ಧ್ವನಿ ಆಗಬೇಕು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಘುಮೂರ್ತಿ ಅವರು ತಹಸಿದ್ದರಾಗಿ ಸಾಕಷ್ಟು ಇಂತಹ ಕೆಲಸಗಳನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಈ ಸಂಘದ ಇಂತಹ ಕಾರ್ಯಗಳ ಜೊತೆ ನೆರವು ನೀಡಿ ಹೆಜ್ಜೆ ಹಾಕಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನಿಕಟಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ, ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು , ಎಂವೈಟಿ ಸ್ವಾಮಿ, ರೇಖಲಗೆರೆ ಚಿನ್ನಯ್ಯ, ಮಲ್ಲೂರಹಳ್ಳಿ ಬಿ ಕಾಟಯ್ಯ, ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ, ಬೋರ್ ಸ್ವಾಮಿ, ಕರವೇ ಹೋಬಳಿ ಘಟಕ ಅಧ್ಯಕ್ಷ ಪಿ .ಮುತ್ತಯ್ಯ ಜಾಗನೂರಹಟ್ಟಿ, ಮಲ್ಲೂರಹಳ್ಳಿ ಕೆ ಟಿ ನಾಗರಾಜ್, ಗುಂತಕೋಲಮ್ಮನಹಳ್ಳಿ ಜಿ ಎಂ ಜಯಣ್ಣ, ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ರೆಕಲಗೆರೆ ಯುವ ಮುಖಂಡ ತಿಪ್ಪೇಸ್ವಾಮಿ, ಜಾಗನೂರಹಟ್ಟಿ ಪಿ ತಿಪ್ಪೇಸ್ವಾಮಿ, ರಾಮಸಾಗರ ಸಿ ಎಂ ಪಾಲಯ್ಯ, ಗೌಡ್ರು ಬಸವರಾಜ್ ರಾಮಸಾಗರ, ಇದ್ದರು