ನಾಯಕನಹಟ್ಟಿ:: ಬೋಸೆದೇವರಹಟ್ಟಿಯಲ್ಲಿ ಬುಡಕಟ್ಟು ಸಂಸ್ಕೃತಿಯ ಧಾರ್ಮಿಕ ಕಾರ್ಯಗಳಿಗೆ ಹೆಸರುವಾಸಿ ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ಅವರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಶ್ರೀ ಬೋಸೆ ರಂಗಸ್ವಾಮಿ ಜಾತ್ರೆ ಪ್ರಯುಕ್ತ ಗ್ರಾಮದ ಕಲಾವಿದರು
“ಗರುಡನ ಆರ್ಭಟಕ್ಕೆ ಮರೆಯಾದ ಹಕ್ಕಿ.
ಅರ್ಥಾತ್- ಕಣ್ಣೀರಿನಲ್ಲಿ ಕಣ್ಮರೆಯಾದ ಪ್ರೇಯಸಿ”
ಎಂಬ ಸುಂದರ ಸಾಮಾಜಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದಾರೆ. ಚಿತ್ರದುರ್ಗದ ಪರಂಪರೆಗೆ ಮತ್ತು ಇತಿಹಾಸಕ್ಕೆ ತನ್ನದೇ ಆದ ಮಹತ್ವವನ್ನು ಹೊಂದಿದೆ ಈ ಭಾಗದ ಮ್ಯಾಸ ನಾಯಕರು ತಮ್ಮ ಪೂರ್ವಜರ ಕಾಲದಿಂದಲೂ ಗೋವುಗಳ ರಕ್ಷಣೆ ಗೋವುಗಳನ್ನು ಪೂಜಿಸುವ ಮೂಲಕ ಬುಡಕಟ್ಟು ಸಂಸ್ಕೃತಿಯ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ ಅದೇ ರೀತಿ ಈ ದಿನ ಬೋಸೆ ರಂಗಸ್ವಾಮಿ ಜಾತ್ರೋತ್ಸವ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ್ದೀರಾ ಗ್ರಾಮದಲ್ಲಿ ಶಾಂತಿ ಮತ್ತು ಈ ಭಾಗದ ರೈತರಿಗೆ ಉತ್ತಮ ಮಳೆ ಬೆಳೆ ನೀಡಲಿ ಎಂದು ಶುಭ ಹಾರೈಸಿದರು.
ಇದೆ ವೇಳೆ ನೀರಾವರಿ ಹೋರಾಟ ಸಮಿತಿಯ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಮಾತನಾಡಿ ಹಳ್ಳಿ ಸೊಗಡಿನ ಕಲೆ ಅಳಿವಿನಂಚಿನಲ್ಲಿದೆ ಅದನ್ನ ಉಳಿಸಿ ಬೆಳೆಸುವಲ್ಲಿ ಯುವ ಪೀಳಿಗೆ ಮುಂದಾಗಬೇಕು ನಮ್ಮ ಗ್ರಾಮ ಕಲೆಯ ತವರೂರು ಎಂದೇ ಖ್ಯಾತಿ ಪಡೆದಿದೆ ಇಂದಿನ ಯುವಕರು ಕಲೆ ಮತ್ತು ಸಂಸ್ಕೃತಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಓಬಯ್ಯ ದಾಸ್, ಶ್ರೀಮತಿ ಬೋಸಮ್ಮ ಮಂಜುನಾಥ್, ಊರಿನ ಮುಖಂಡರಾದ ಬಿ. ಎಲ್. ಗೌಡ, ಬಿ. ಡಿ .ಧನಂಜಯ, ಬಿ ಎಂ ಓಬಣ್ಣ, ಡಿ ಬಿ ಬೋರಯ್ಯ, ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ, ಜಿಲ್ಲಾ ಕೈಗಾರಿಕಾ ಉಪನಿರ್ದೇಶಕ ಕೆ ಬಿ ಮಂಜುನಾಥ್, ಸಿ ಬಿ ಮೋಹನ್ ಚೌಳಕೆರೆ, ಮಲ್ಲಕ್ ಬೋರಯ್ಯ, ಪಿ ಬಿ ತಿಪ್ಪೇಸ್ವಾಮಿ, ಡಾನ್ ಬಾಸ್ಕೋ ಶಾಲೆಯ ಮುಖ್ಯಸ್ಥ ಬೋರ್ ಸ್ವಾಮಿ, ಸೇರಿದಂತೆ ಬೊಸೆದೇವರಹಟ್ಟಿ ಗ್ರಾಮದ ಸಮಸ್ತ ಮುಖಂಡರು ಗ್ರಾಮಸ್ಥರು ಇದ್ದರು