ತಳಕು:: ಸಮೀಪದ ಗಿರಿಯಮ್ಮನಹಳ್ಳಿ ರಸ್ತೆ ತಿರುವಿನಲ್ಲಿ ತಳಕು ಲಂಬಾಣಿಹಟ್ಟಿ ಗ್ರಾಮದ ರಾಜನಾಯ್ಕ (55 )ಎಂಬ ವ್ಯಕ್ತಿ ಸ್ಥಳದಲ್ಲಿ ಅಪಘಾತಕೀಡಾಗಿದ್ದಾನೆ.
ಚಳ್ಳಕೆರೆ ಮಾರ್ಗದಿಂದ ತಳಕು ಮಾರ್ಗವಾಗಿ ಟಿವಿಎಸ್ ಬೈಕನಲ್ಲಿ ಹೋಗುವಾಗ ಹಿಂಬದಿಯಿಂದ ಅತೀ ವೇಗವಾಗಿ ಬಂದ ಬುಲೇರಾ ವಾಹನಕ್ಕೆ ಗಿರಿಯಮ್ಮನಹಳ್ಳಿ ಕ್ರಾಸ್ ನಲ್ಲಿ ಸಿಲುಕಿ ಸ್ಥಳದಲ್ಲಿ ಸಾವಪ್ಪಿದ್ದಾನೆ .
ಇದರಿಂದ ಸಿಟ್ಟಿಗೆದ್ದ ಸ್ಥಳೀಯ ಗಿರಿಯಮ್ಮಹಳ್ಳಿ ಗ್ರಾಮಸ್ಥರು ಕೆಲ ಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಗಿರಿಯಮ್ಮನಹಳ್ಳಿ ಗ್ರಾಮದ ಕ್ಯಾಸಪ್ಪ ಮಾತನಾಡಿ. ಅವೈಜ್ಞಾನಿಕ ರಸ್ತೆಯಿಂದ ನಮ್ಮ ಗಿರಿಯಮ್ಮಹಳ್ಳಿ ಕ್ರಾಸ್ ನಲ್ಲಿ ಸಾಕಷ್ಟು ಭಾರಿ ಅಪಘಾತಗಳಾಗಿ ಕ್ರಾಸ್ ನಲ್ಲಿ ಅಂಡರ್ ಪಾಸ್ ಮಾಡಿಸುವಂತೆ ತಳಕು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದೇವೆ ಯಾವುದೇ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಅಧಿಕಾರಿಗಳು ಈ ಕ್ರಾಸ್ ನಲ್ಲಿ ಅಂಡರ್ ಪಾಸ್ ಮಾಡಿಸಿದರೆ ಈ ಭಾಗದ ಜನರಿಗೆ ಒಳ್ಳೆಯದು ಆಗುತ್ತದೆ ಇಂದು ನಡೆದ ಅಪಘಾತದ ವೇಳೆ ಗ್ರಾಮಸ್ಥರು ಧರಣಿ ಕೂತ ಸ್ಥಳದಲ್ಲಿ ಅಧಿಕಾರಿಗಳು ಜನವರಿ 3ನೇ ತಾರೀಖುಗಳು ಗಡುವು ನೀಡಿದ್ದಾರೆ ಮುಂದಿನ ದಿನಗಳಲ್ಲಿ ಅಂಡರ್ ಪಾಸ್ ಮಾಡಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.
ಇನ್ನೂ ಗಿರಿಯಮ್ಮನಹಳ್ಳಿ ಗ್ರಾಮದ ರತ್ನಮ್ಮ ಮಾತನಾಡಿ ನಮಗೆ ಇಲ್ಲಿ ಪ್ರತಿದಿನ ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತದೆ ದಿನಬೆಳಗಾದರೆ ಕೂಲಿಕಾರ್ಮಿಕರು ಸೇರಿದಂತೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಿ ಬರಲು ತುಂಬಾ ತೊಂದರೆ ಆಗುತ್ತದೆ ಅಂಡರ್ ಪಾಸ್ ಮಾಡಿಸುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಗಿರಿಯಮ್ಮನಹಳ್ಳಿ ಗ್ರಾಮಸ್ಥರಾದ ಪ್ರಕಾಶ್ ದಿನೇಶ್ ತಿಪ್ಪಕ್ಕ ಪವನ್, ದಿನೇಶ್, ಲೋಕೇಶ್, ಧನಂಜಯ, ಚಂದ್ರಶೇಖರ್, ತಿಪ್ಪಯ್ಯ ಇದ್ದರು