ಚಳ್ಳಕೆರೆ : ಆಹಾರ ಮೇಳಗಳಿಂದ ಮಕ್ಕಳಿಗೆ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಮೂಲಕ, ದೇಶಿ ಉತ್ಪನ್ನಗಳ ಆಹಾರ ಪದ್ದತಿ ಪರಿಚಯ ಮಾಡುವ ನಿಟ್ಟಿನಲ್ಲಿ ಆಹಾರ ಮೇಳಗಳು ಪ್ರೋತ್ಸಹದಾಯಕವಾಗಿವೆ ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ ಹೇಳಿದರು.

ಅವರು ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಆಹಾರ ಮೇಳದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಮಾನಸೀಕ ವಿಕಸನಕ್ಕೆ‌ ಈ ಆಹಾರ ಮೇಳೆಗಳುವುಪಯುಕ್ತವಾಗಿವೆ ಇದರಿಂದ ಮಕ್ಕಳಿಗೆ ವ್ಯಾವಹಾರಿಕ ಜ್ಞಾನ ಹೆಚ್ಚುವುದಲ್ಲದೆ ಲಾಭ ನಷ್ಟದ ಬಗ್ಗೆ ಪ್ರಾಪಂಚಿಕ ಜ್ಞಾನ ಬೆಳೆಯುತ್ತದೆ ಎಂದರು.

ಇನ್ನೂ ಇದೇ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ದಯಾನಂದ ಪ್ರಹ್ಲಾದ್ ಮಾತನಾಡಿ, ನಮ್ಮ ಶಾಲೆಯಲ್ಲಿ ಎರಡನೇ ಬಾರಿಗೆ ಈ‌ ಆಹಾರ ಮೇಳವನ್ನು ಆಯೋಜಿಸಲಾಗಿದೆ, ಇದರಿಂದ ಮಕ್ಕಳಿಗೆ ನಾಲ್ಕು ಗೊಡೆಗಳ‌ ಮಧ್ಯೆ ಕಲಿತ ಪಾಠಕ್ಕೆ ಹಿಂಬು ನೀಡುವಂತೆ ವ್ಯಾವಹಾರಿಕ ಜ್ಞಾನಕ್ಕೆ ಸಂಬಂದಿಸಿದಂತೆ ಬುದ್ದಿ‌ಮಟ್ಟ ಹಾಗು ಅವರ ವಿವೇಚನದ ಮೂಲಕ ಅವರ ಆಲೋಚನೆ ಹಾಗೂ ಕ್ರಿಯಾಶೀಲ ಬೆಳೆವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ ಆದರಿಂದ ಈ ಆಹಾರ ಮೇಳ ಉಪಯುಕ್ತವಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ರಾಜೇಶ್ ಗುಪ್ತ ಮಾತನಾಡಿ, ಒಂದು ಉದ್ದೆಮೆಯಲ್ಲಿ ತೊಡಗಿಸಿದ ಬಂಡವಾಳ ಮತ್ತು ನಿವ್ವಳ ಬಂಡವಾಳ ಮಕ್ಕಳಿಗೆ ಲಾಭ -ನಷ್ಟದ ಬಗ್ಗೆ, ಮನವರಿಕೆಯಾಗುತ್ತದೆ, ಮನುಷ್ಯ ಜೀವನ ಬಗ್ಗೆ ವ್ಯಾವಹಾರಿಕ ಜ್ಞಾನ ಹೆಚ್ಚಿಸುತ್ತದೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎನ್ನುವ ಮಾತು ಇಂದು ಒಂದು ಹೆಜ್ಜೆ ಮುಂದೆ ಹೋಗಿ ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎನ್ನುವ ಮೂಲಕ ಮಕ್ಕಳಿಗೆ ಕೌಶಲ್ಯದ ಜೊತೆಗ ಅವರ ಮಾನಸೀಕ ಬುದ್ದಿಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು.

ಇದೇ ಸಂಧರ್ಭದಲ್ಲಿ ಶಾಲೆಯ ಆವರಣದಲ್ಲಿ ಒಟ್ಟಾರೆ 15 ಆಹಾರ ಮೇಳದ ಸ್ಟಾಲ್ ಗಳನ್ನು ತೆರೆದು ಮಕ್ಕಳು ತಾವೇ ಸ್ವತಃ ಬಂಡವಾಳ ಹಾಕಿ ಆಹಾರ ತಯಾರಿಸಿ ನಂತರ ಅದನ್ನು ಮಾರಾಟ ಮಾಡುವ ದೃಶ್ಯಗಳು ಕಂಡು ಬಂದವು ಇನ್ನೂ ಒಂದು ಸ್ಟಾಲ್ ಗಳಲ್ಲಿ ಹತ್ತರಿಂದ ಹದಿನೈದು ದಿನಸಿ ಬಗೆ ಬಗೆಯ ಅಡುಗೆ ತಯಾರಿಸಿ, ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಜನರಿಗೆ ರುಚಿಯನ್ನು ಉಣಬಡಿಸುವ ಮೂಲಕ ದೇಶಿ ಆಹಾರ ಮೇಳಕ್ಕೆ ಪಾತ್ರರಾದರು.

ಇದೇ ಸಂಧರ್ಭದಲ್ಲಿ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಡಿ ಎನ್.ಮಧುಸೂದನ್, ಟ್ರಸ್ಟಿಗಳಾದ ಡಿಎನ್.ಶಿವಪ್ರಸಾದ್ , ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗು ಸಾರ್ವಜನಿಕರು ಮಕ್ಕಳ‌ ಪೋಷಕರು ಪಾಲ್ಗೊಂಡಿದ್ದರು.

Namma Challakere Local News
error: Content is protected !!