ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಸಮೀಪದ ರಸ್ತೆ ತಿರುವಿನಲ್ಲಿ‌ ತಿಮ್ಮಣ್ಣಹಳ್ಳಿ ಗ್ರಾಮದ ರಾಜನಾಯ್ಕ್ (55) ಎಂಬ ವ್ಯಕ್ತಿ ಸ್ಥಳದಲ್ಲಿ ಅಪಘಾತಕ್ಕಿಡಾಗಿದ್ದಾನೆ

ಚಳ್ಳಕೆರೆ ಮಾರ್ಗದಿಂದ ತಳಕು ಮಾರ್ಗವಾಗಿ ಟಿವಿಎಸ್ ಬೈಕ್ ನಲ್ಲಿ ಹೋಗುವಾಗ ಹಿಂಬದಿಯಿಂದ ಅತೀ ವೇಗವಾಗಿ ಬಂದ ಬುಲೇರಾ ವಾಹನಕ್ಕೆ ಗಿರಿಯಮ್ಮನಹಳ್ಳಿ ಸಮೀಪದ ಕ್ರಾಸ್ ನಲ್ಲಿ ಸಿಲುಕಿ ಸ್ಥಳದಲ್ಲಿ ಸಾವನಪ್ಪಿದ್ದಾನೆ

ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ರಸ್ತೆಯನ್ನು ಕೆಲ ಕಾಲ‌ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಅವೈಜ್ಞಾನಿಕ ರಸ್ತೆ‌ ನಿರ್ಮಾಣದಿಂದ ಸರಿಯಾದ ಸ್ಥಳದಲ್ಲಿ ‌ನಿಲ್ದಾಣ‌ ಇಲ್ಲದೆ, ಅಂಡರ್ ಪಾಸ್ ನಿರ್ಮಿಸಿದೆ, ಪ್ರತಿ ಗ್ರಾಮಕ್ಕೂ ಸರ್ವಿಸ್ ರಸ್ತೆ ನಿರ್ಮಿಸಿದೆ ರಸ್ತೆ ಕ್ರಾಸ್ ಗೂ ಸರಿಯಾದ ಮಾರ್ಗಗಳು‌ ಇಲ್ಲದೆ ಈ ಅಪಘಾತಗಳು ಸಂಭವಿಸುತ್ತಾವೆ, ತಿಂಗಳಿಗೆ ಕನಿಷ್ಟ ಎರಡರಿಂದ ಮೂರು ಅಪಘಾತಗಳು‌ ಸಂಭವಿಸುತ್ತಾವೆ ಕೆಲವು ಅಪಘಾತದಲ್ಲಿ ಪ್ರಾಣಗಳು ಹೋಗಿವೆ, ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ನಮಗೆ ಸಂಬಂದವಿಲ್ಲವೆಂದು ಮೌನ ವಹಿಸಿದೆ.

ಇನ್ನೂ ಸ್ಥಳಿಯ ಶಾಸಕರು, ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಹೆಚ್ಚಿನ ಅಪಘಾತಗಳನ್ನು ತಪ್ಪಿಸಿ, ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಇಲ್ಲವಾದರೆ ಈ ಸ್ಥಳದಲ್ಲಿ ಇನ್ನೂ ನೂರಾರು ಪ್ರಾಣಗಳು ಬಲಿ‌ ಕೊಡ ಬೇಕಾಗುತ್ತದೆ ಎಂದು ಸ್ಥಳಿಯರು ನೊಂದ ಮಾತುಗಳನ್ನು ಹಾಡಿದರು‌

ಇನ್ನೂ ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ ,
ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಸಿಪಿಐ ಕೆ.ಸಮೀವುಲ್ಲಾ, ಪಿಎಸ್ಐ ಲೋಕೇಶ್ ಇತರ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯರು ಇದ್ದರು.

Namma Challakere Local News
error: Content is protected !!