ಚಳ್ಳಕೆರೆ : ಮತ್ಸಸಮುದ್ರ ಶ್ರೀ ಆಂಜನೇಯಸ್ವಾಮಿ ಮುಕ್ತಿಬಾವುಟ ಪಡೆದ : ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್
ಈ ಬಾರಿಯ ಮುಕ್ತಿ ಬಾವುಟ
4.ಲಕ್ಷ 51ಸಾವಿರಕ್ಕೆ ಹರಾಜು
ಶ್ರೀ ಆಂಜನೇಯಸ್ವಾಮಿ ರಥೋತ್ಸವಕ್ಕೆ ಜೋಡೆತ್ತು ಬಂಡಿಯಲ್ಲಿ ಬಂದ ಭಕ್ತಗಣ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಮತ್ಸಸಮುದ್ರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಇನ್ನೂ ಮತ್ಸಸಮುದ್ರ ಗ್ರಾಮದ ಸುತ್ತಲಿನ ಹಲವಾರು ಹಳ್ಳಿಗಳಿಂದ ಮುಂಜಾನೆಯೇ ಜೋಡತ್ತು ಬಂಡಿಯಲ್ಲಿ ಧಾವಿಸಿದ ಭಕ್ತವೃಂದ ಶ್ರೀ ಆಂಜನೇಯಸ್ವಾಮಿ ದೊಡ್ಡ ರಥೋತ್ಸವಕ್ಕೆ ಸಾಕ್ಷಿಯಾದರು.
ಇನ್ನು ಎಂದಿನಂತೆ ಶ್ರೀ ಆಂಜನೇಯ ಸ್ವಾಮಿ ದೊಡ್ಡ ರಥೋತ್ಸವದ ಮುಕ್ತಿಬಾವುಟ ಹರಾಜು ಪ್ರಕ್ರಿಯೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹೆಚ್ . ಸಮರ್ಥರಾಯ್ ಮುಕ್ತಿ ಬಾವುಟವನ್ನು ಪಡೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು, ಅದರಂತೆ ಈ ಬಾರಿಯ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ 4, 51,000ಗಳಿಗೆ ಹೆಚ್.ಸಮರ್ಥರಾಯ್ ತಮ್ಮದಾಗಿಸಿಕೊಂಡಿದ್ದಾರೆ.
ಹೇಳಿಕೆ :
ಸುತ್ತಲಿನ ಹತ್ತಾರು ಹಳ್ಳಿಗಳ ಆರಾಧ್ಯ ದೈವವಾದ ಶ್ರೀ ಆಂಜನೇಯಸ್ವಾಮಿಯ ಕಾರ್ತಿಕೋತ್ಸವ ಇಂದು ಭಕ್ತಿಭಾವನೆಯಿಂದ ದೊಡ್ಡ ರಥೋತ್ಸವ ಜರುಗಿದೆ, ಅದರಂತೆ ಸತತವಾಗಿ ಕಳೆದ ಮೂರು ಬಾರಿ ಶ್ರೀ ಆಂಜನೇಯಸ್ವಾಮಿ ದೇವರ ಕೃಪೆಯಿಂದ ಮುಕ್ತಿ ಬಾವುಟವನ್ನು ಪಡೆಯುತ್ತಿದ್ದೆನೆ, ಈ ಬಾರಿಯ ಮುಕ್ತಿ ಬಾವುಟ ಹರಾಜು ಸುಮಾರು 4ಲಕ್ಷದ 51ಸಾವಿರಕ್ಕೆ ದೇವರ ಆರ್ಶಿವಾದಿಂದ ಪಡೆದಿದ್ದೆನೆ, ಅದರಂತೆ ಶ್ರೀ ಆಂಜನೇಯಸ್ವಾಮಿ ಕೃಪೆ ಈ ಭಾಗದ ಭಕ್ತರ ಮೇಲೆ ಸದಾ ಇರಲಿ ಎಲ್ಲಾರಿಗೂ ಒಳಿತು ಮಾಡಲಿ ಎಂದು ಶ್ರೀ ಆಂಜನೇಯಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತೆನೆ… ಎಂದು ಮಾಜಿ ತಾಪಂ.ಸದಸ್ಯ ಹೆಚ್.ಸಮರ್ಥರಾಯ್ ಹೇಳಿದ್ದಾರೆ.