ಚಳ್ಳಕೆರೆ : ಅಧಿಕಾರಿಗಳು ನೀವು ಯಾರಿಗೂ ಎದರುವು ಅವಶ್ಯಕತೆ ಇಲ್ಲ ನಿಮ್ಮ ವ್ಯಾಪ್ತಿಯ ಕಾರ್ಯವನ್ನು ಸರಿಯಾಗಿ ನಿಭಾಯಿಸಿದರೆ ಸಾರ್ವಜನಿಕರೆ ನಿಮ್ಮನ್ನು ಸನ್ಮಾನ ಮಾಡುತ್ತಾರೆ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅವರು ನಗರದ ನಗರಸಭೆ ಅವರಣದಲ್ಲಿ ಆಯೋಜಿಸಿದ್ದ ತಾಲೂಕಿನ 26ನೇ ಜನಸಂಪರ್ಕ ಸಭೆ, ಹಾಗೂ ನಗರಸಭೆ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ಇ-ಸ್ವತ್ತು ಖಾತೆ ಪ್ರಕರಣಗಳು ಗಂಭೀರವಾದ ಆರೋಪಗಳು ಕೇಳಿ ಬರುತ್ತಿವೆ ಇನ್ನು ಕಳೆದ ಜನಸಂಪರ್ಕ ಸಭೆಯಲ್ಲಿ ಸುಮಾರು 45 ಸಮಸ್ಯೆಗಳು ಗುರುತಿಸಲಾಗಿತ್ತು, ಅದೇ ಸಂಧರ್ಭದಲ್ಲಿ ಐದು ಜನ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಿದರು ವ್ಯವಸ್ಥೆ ಸರಿಹೊಗಿಲ್ಲ ಎಂದರೆ ಏನು ಅರ್ಥ..! ಇದರ ಬಗ್ಗೆ ಪೌರಾಯುಕ್ತರೆ ಉತ್ತರಿಸಬೇಕು, ನಗರದಲ್ಲಿ ಪ್ರಮುಖ ಪಾತ್ರ ನಿಮ್ಮದೆ ಇದೆ, ಆದರೆ ಇ-ಸ್ವತ್ತು ಖಾತೆ ರಿನಿವಲ್ ಮಾಡಲು ಯಾಕೆ ವಿಳಂಭ ಮಾಡುತ್ತಿರಿ, ಹೊಸದಾಗಿ ಇ-ಸ್ವತ್ತು ನೀಡುವಾಗ ಮೂಲ ದಾಖಲಾತಿ ಪರೀಶಿಲಿಸಿ ಕೊಟ್ಟ ನಂತರ ಆಯಾ ವರ್ಷದಲ್ಲಿ ಮರು ರಿನಿವಲ್ ನೀಡುವಾಗ ವಿನಃ ಕಾರಣ ಸಾರ್ವಕಜನಿಕರಿಗೆ ಸ್ಥಳ ಪರೀಶಿಲನೆ ನೆಪದಲ್ಲಿ ಸಾರ್ವಜನಿಕರ ಅಲೆದಾಡಿಸುವುದು ಸರಿಯಲ್ಲ ಎಂದು ಶಾಸಕ ಟಿ.ರಘುಮೂರ್ತಿ ಪೌರಾಯುಕ್ತ ಸಿ.ಚಂದ್ರಪ್ಪ ವಿರುದ್ದ ಗರಂ ಹಾದರು.
ಇನ್ನೂ ಸಾರ್ವಜನಿಕರಾದ ಜಗದೀಶ್ ಹಾಗೂ ಭೀಮಣ್ಣ, ವಕೀಲರಾದ ಪಾಪಣ್ಣ ಸಭೆಯ ಮಧ್ಯೆದಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನೆ ಪಾಲನೆ ಮಾಡುತ್ತಿಲ್ಲ ಇನ್ನು ಕಛೇರಿಯಲ್ಲಿ ಅನ್ಯ ಕಾರ್ಯಗಳತ್ತ ಬಂದರೆ ಕಛೇರಿಯಿಂದ ಹೊರ ಹೋಗಿ ಎಂದು ಕಳಿಸುತ್ತಾರೆ ಕಛೇರಿ ಇವರ ಸ್ವತಃನಾ, ಎಂಬುದು ಅನುಮಾನ ಕಾಡುತ್ತಿದೆ. ಮಾರಣ್ಣ ಲೇಔಟ್ ಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ನಗರಸಭೆ ಸಿಬ್ಬಂದಿ 20 ಸಾವಿರ ಕೇಳುತ್ತಾರೆ.
ಆದರೆ ಖಾತೆ ಮಾಡಿಸುವಾಗ ನಳ ಸಂಪರ್ಕ ಕಂದಾಯ ಬಾಕಿ ಮೊತ್ತ ಕಟ್ಟಿರುತ್ತದೆ ಆದರೆ ಇವರ ನಿಲ್ಯರ್ಕ್ಷಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದಾರೆ ಎಂದು ವಕೀಲರಾದ ಪಾಪಣ್ಣ ಹೇಳಿದಾಗ ಶಾಸಕರು ನಾಳೆಯೇ ಕುಡಿಯುವ ನೀರಿನ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೂ ನಗರದಲ್ಲಿ ಸರಿಸುಮಾರು ಹತ್ತು ಸ್ಮಶಾನಗಳು ಇವೆ ಆದರೆ ಜಾಲಿ ಗಿಡಗಳು ಬೆಳೆದಿವೆ ಎಂಬ ಸಾರ್ವಜನಿಕರ ದೂರುಗಳಿವೆ ಎಂದಾಗ ಶಾಸಕ ಟಿ.ರಘುಮೂರ್ತಿ ಇಂಜಿನಿಯಾರ್ ಲೋಕೇಶ್‌ಗೆ ನಾಳೆಯಿಂದ ಸ್ಮಶಾನ ಅಭಿವೃದ್ದಿಗೆ ಮುಂದಾಗಿ ಇನ್ನೂ ಅರಣ್ಯ ಇಲಾಖೆಯಿಂದ ಗಿಡಗಳು ನೆಡುವ ಮೂಲಕ ಪರಿಸರ ಹಾಗೂ ನೆರಳಿನ ವ್ಯವಸ್ಥೆ ಮಾಡುವುದು ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ ನಗರದ ಸ್ಮಶಾನದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ, ಸ್ವಚ್ಚತೆ ಇಲ್ಲ ಎಂದು ಸಭೆಯ ಗಮನ ಸೆಳೆದರು.
ನಗರದ ಹೃದಯ ಭಾಗದಲ್ಲಿ ಕಳ್ಳತನ ಪ್ರಕರಣಗಳು ಟ್ರಾಪಿಕ್ ಈಗೇ ಪೊಲೀಸ್ ಇಲಾಖೆಯ ವೈಪಲ್ಯ ಎಂಬ ಸಾರ್ವಜನಿಕರ ದೂರುಗಳಿವೆ ಎಂದಾಗ ಪೊಲೀಸ್ ಸಬ್ ಇನ್‌ಸ್ಪೆಕ್ಟೆರ್ ಆರ್.ಎಪ್.ದೇಸಾಯಿ ಮಾತನಾಡಿ ಈಗಾಗಲೆ ನಗರದಲ್ಲಿ ಸುಮಾರು 67ಸ್ಥಳಗಳಲ್ಲಿ ಸಿಸಿಕ್ಯಾಮಾರ ಅಳವಡಿಕೆಗೆ ವರಿಷ್ಠಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಸುಮಾರು 75ಲಕ್ಷ ರೂ.ವೆಚ್ಚಕ್ಕೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಬಿಡಾಡಿ ದನಗಳ ಹಾವಳಿ :
ನಗರದಲ್ಲಿ ಬಿಡಾಡಿ ದನಗಳು ಸಾರ್ವಜನಿಕರ ದೂರಿನ ಮೇರೆಗೆ ಕಳೆದ ಸಭೆಯಲಿ ಚರ್ಚಿಸಲಾಗಿತ್ತು ಎಂದು ಪೌರಾಯುಕ್ತರು ಸಭೆಯ ಗಮನ ಸೇಳೆದಾಗ ಈಡೀ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸರಕಾರಿ ಗೋಶಾಲೆ ಚಳ್ಳಕೆರೆಯಲ್ಲಿ ನಿರ್ಮಿಸಲಾಗಿದೆ, ಆದರೆ ನಿಮಗ್ಯಾಕೆ ಅಲ್ಲಿ ಬಿಡಾಡಿ ದನಗಳನ್ನು ಬಿಡಲು ತೊಂದರೆ ಈ ಕೂಡಲೇ ನಗರದಲ್ಲಿ ರಸ್ತೆ ಮಧ್ಯೆ ತಿರುಗಾಡುವ ದನಗಳನ್ನು ಗೋಶಾಲೆಗೆ ಕಳಿಸಿ ಎಂದು ಖಡಕ್ ಹಾಗಿ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಬೀದಿ ನಾಯಿಗಳ ಹಾವಳಿಗೆ ಸಭೆಯಲ್ಲಿ ಗಂಭೀರವಾದ ಚರ್ಚೆಯಾತು,
ಇನ್ನು ಸಾರ್ವಜನಿಕರ ದೂರಿನ್ವಯ ಸಾರ್ವಜನಿಕರ ಆಸ್ವತ್ರೆ ಮುಂಬಾಗ ಅತೀ ವೇಗದ ವಾಹನಗಳ ಓಡಾಡಟಕ್ಕೆ ರಸ್ತೆ ಉಬ್ಬುಗಳನ್ನು ಹಾಕಬೇಕು ಎಂದು ಮನವಿ ನೀಡಿದ್ದರು.
ಅಕ್ರಮ ಗುಡಿಸಲು ತೆರವು :
ಕುವೆಂಪು ಶಾಲೆ ಪಕ್ಕ ತಿಪ್ಪೆಗುಂಡಿ ಇರುವುದು ತೆರವು ಗೊಳಿಸಬೇಕು ಎಂದು ಶಾಸಕರು ಹೇಳಿದಾಗ ನಮ್ಮದು ಆ ಜಾಗ ಎಂದು ನಗರಸಭೆ ಸದಸ್ಯೆ ಸುಮಕ್ಕ ಮಧ್ಯೆ ಹೇಳಿದಾಗ ನಿಮ್ಮ ಜಾಗಕ್ಕೆ ಪುರಾವೆಗಳು ಇದ್ದರೆ ತಂದು ನಿಮ್ಮ ಜಾಗವನ್ನು ಭದ್ರಗೊಳಿಸಿ ತಿಪ್ಪೆ ಹಾಕುವುದು ಬೇಡ ಎಂದರು. ಕಂದಾಯ ಬಡವಣೆಯಲ್ಲಿ ಅಕ್ರಮ ಶೆಡ್ಡುಗಳು ನಿರ್ಮಾಣವಾಗಿದ್ದು ಅವುಗಳನ್ನ ಈ ಕೂಡಲೆ ತೆರವುಗೊಳಿಸಿ ನಿರ್ಗತಿಕರಿಗೆ ಸೂಕ್ತವಾದ ಸ್ಥಳ ತೋರಿಸಿ ಎಂದರು.
ಮತದಾನಕ್ಕೆ ಸಹಾಯ ಪಡೆಯುತ್ತಾರೆ..!
ನಗರಸಭೆ ಕಛೇರಿಯಲ್ಲಿ ಓದು ಬರಹ ಗೊತ್ತಿಲ್ಲದವರು ಬೇರೆಯವರೆ ಸಹಾಯ ಪಡೆದು ಕಛೇರಿಗೆ ದಾವಿಸುತ್ತಾರೆ ಅವರನ್ನು ಮಧ್ಯವರ್ತಿಗಳು ಎಂದು ಸಂಭೋಧಿಸುವುದು, ಬೇಡ ಚುನಾವಣೆ ಸಂಧರ್ಭದಲ್ಲಿ ಮತಗಟ್ಟೆಗೆ ಸಹಾಯಕರು ಬರುತ್ತಾರೆ ಅಂತಹದರಲ್ಲಿ ಇವರನ್ನು ಯಾಕೆ ದೂರುತ್ತಿರಿ ಎಂದು ಅಧಿಕಾರಿಳಿಗೆ ಖಡಕ್ ಹಾಗಿ ಸೂಚಿಸಿದರು.
ಅಭಿಷೇಕ ನಗರವನ್ನು ಪ್ರತೇಕ ವಾರ್ಡ್ನ್ನಾಗಿ ಮಾಡಲು ಸ್ಥಳಿಯವರು ಮನವಿಯನ್ನು ನೀಡಿದ್ದಾರೆ ಇದರ ಬಗ್ಗೆ ಸೂಕ್ತ ಕ್ರಮವಹಿಸಿ ಎಂದರು.
ಹೇಳಿಕೆ :
ನಾವು ಪತ್ರಿಕೆಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ನಗರಸಭೆಯ ಹಾಗೂ ನಗರದ ಮಸ್ಯೆಗಳನ್ನು ನೋಡಿ ತಿಳಿಯಬೇಕೆ ಹಾಗದರೇ ನಿಮ್ಮ ಕೆಲಸವೇನು..? ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಚಾಟಿ ಬೀಸಿದರು. ಇನ್ನೂ ಕಳೆದ ದಿನಗಳಲ್ಲಿ ‘ನಮ್ಮ ಚಳ್ಳಕೆರೆ ಟಿವಿ’ ಹಾಗೂ ‘ವಿಶ್ವವಾಣಿ’ ಪತ್ರಿಕೆಯಲ್ಲಿ ನಗರಸಭೆ ಸಮಸ್ಯೆಗಳ ಬಗ್ಗೆ ವರದಿ ಬಿತ್ತರಿಸಿರುವುದು ಇಲ್ಲಿ ಮೆಲಕು ಹಾಕಬಹುದು.
ಇದೇ ಸಂಧರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಸದಸ್ಯ ಕೆ.ವೀರಭದ್ರಯ್ಯ, ರಮೇಶ್ ಗೌಡ, ಕವಿತಾ, ಸುಮಕ್ಕಾ, ಜಯಲಕ್ಷಿö್ಮ ಕೃಷ್ಣಮೂರ್ತಿ, ಸುಜಾತಾ, ಜಯಣ್ಣ, ಹೊಯ್ಸಳ ಗೊವಿಂದರಾಜ್, ರುದ್ರನಾಯಕ, ತಹಶಿಲ್ದಾರ್ ರೇಹಾನ ಪಾಷ, ಪೌರಾಯುಕ್ತ ಸಿ.ಚಂದ್ರಪ್ಪ, ಬೇಸ್ಕಾಂ ಎಇಇ ರಾಜಣ್ಣ, ಕುಡಿಯುವ ನೀರು ಸರಬರಾಜು ಎಇಇ ಕಾವ್ಯ, ತೋಟಗಾರಿಕೆ ಇಲಾಖೆ ವಿರುಪಾಕ್ಷಪ್ಪ, ಕೃಷಿ ಅಧಿಕಾರಿ ಜೆ.ಅಶೋಕ್, ಸಿಡಿಪಿಓ ಹರಿಪ್ರಸಾದ್, ಅರಣ್ಯಧಿಕಾರಿ ಬಹುಗುಣ, ಪಿಎಸ್‌ಐ ಕೆ.ಸತೀಶ್ ನಾಯ್ಕ್, ಬಿಸಿಎಂ ಅಧಿಕಾರಿ ದಿವಕಾರ್, ಆಹಾರ ಇಲಾಖೆ ಅಧಿಕಾರಿಗಳು, ಹಾಗೂ ನಗರಸಭೆ ಸಿಬ್ಬಂದಿ, ಪೌರಾಕಾರ್ಮಿಕರು ಇತರ ಸಾರ್ವಜನಿಕರು ಹಾಜರಿದ್ದರು.