ಚಳ್ಳಕೆರೆ : ಕಡು ಬಡತನದ ಮಧ್ಯೆ ಹೊರ ದೇಶಗಳಲ್ಲಿ ಪಿಎಚ್ ಡಿ ಅಧ್ಯಯನ ಮಾಡುವುದು ತುಂಬಾ ಕಷ್ಟದ ಕೆಲಸ ಆದರೆ ಅಂತಹ ಸಂಧರ್ಭದಲ್ಲಿ ಕೂಡ ಪಿಎಚ್ ಡಿ ಮುಗಿಸಿರುವುದು ಸಂತಸ ತಂದಿದೆ ಎಂದು ದಲಿತ ಸಂಘಟನೆಯ ಟಿ.ವಿಜಯ್ ಕುಮಾರ್ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ _ಅಭಿನಂದನ, ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಮುದಾಯದಲ್ಲಿ ಸ್ಥಿತಿವಂತರು ಬಡತನ ರೇಖೆಗಿಂತ ಕಡಿಮೆ ಸ್ಥರದಲದಲ್ಲಿ ಇರುವವರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಬಲೀಕರಣ ಮಾಡಬೇಕು ಎಂದರು.
ಈದೇ ಸಂಧರ್ಭದಲ್ಲಿ ಪತ್ರಕರ್ತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ, ಮಾತನಾಡಿ,
ತಳ ಸಮುದಾಯದ ಮಕ್ಕಳು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಅತ್ಯುತ್ತಮ ಸ್ಥಾನಕ್ಕೆ ಹೋಗುವುದು ತುಂಬಾ ವಿರಳ, ಸಮುದಾಯದಲ್ಲಿ ನಿಮ್ನ ವರ್ಗಗಳನ್ನು ವ್ಯವಸ್ಥೆ ಗೆ ತಂದು ಮೀಸಲಾತಿ ಹೊಳಗಡೆ ಸಂವಿಧಾನ ಅಡಿಯಲ್ಲಿ ಹುದ್ದೆಗಳನ್ನು ಹೊಂದಿ ವ್ಯವಸ್ಥೆ ತವಾಗಿ ಜೀವನ ಮಾಡುವ ವ್ಯಕ್ತಿಗಳು ಬಡತನದ ಮಕ್ಕಳಿಗೆ ಸಹಕಾರ ಮಾಡುವುದಿಲ್ಲ ಎಂದರೆ ಮತ್ತೆ ಯಾರಿಗೆ ಈ ಹೇಳಬೇಕು ಎಂದು ನೌಕರಿದಾರರಿಗೆ ಕಿವಿಮಾತು ಹೇಳಿದರು.
ದಲಿತ ಸಂಘಟನೆಯ ಸಮಾಜಿಕ ಹೋರಾಟಗಾರ ಶಿವಮೂರ್ತಿ ಮಾತನಾಡಿ, ನೌಕರಿದಾರರು ಬಡತನದ ಮಕ್ಕಳಿಗೆ ಸಹಕಾರ ಮಾಡುವುವಂತ ಗುಣ ಬೆಳೆಸಿಕೊಳ್ಳಬೇಕು, ಇತರ ಸಮುದಾಯಗಳ ಅನ್ನು ನೋಡಿ ಕಲಿಯುವಂತ ಅನಿವಾರ್ಯವಿದೆ ಶಿಕ್ಷಣ ಸಂಘಟನೆ ಮತ್ತು ಹೋರಾಟ ಎಂಬುದು ಅನಿವಾರ್ಯ ಎಂದರು.
ಇದೇ ಸಂಧರ್ಭದಲ್ಲಿ ದಲಿತ ಹೋರಾಟಗಾರ ವಿಜಯ್ ಕುಮಾರ್, ಶಿವಮೂರ್ತಿ, ನಾಗರಾಜ್, ಮಹಾಂತೇಶ್, ನಾಗರಾಜ್, ಉಮೇಶ್, ಅನಿಲ್ ಕುಮಾರ್ ಜೆ. ಇತರರು ಇದ್ದರು.