ಚಳ್ಳಕೆರೆ : ‌ವಿದ್ಯಾಭ್ಯಾಸ‌ ಪಡೆದ ನಾವುಗಳು ನಮ್ಮ ನೆಲೆದ ತಾಯ್ನಾಡಿಗೆ, ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡುವ ಮೂಲಕ ಸಾರ್ಥಕತೆ ಮೆರೆಯಬೇಕು ಎಂದು ದಾನಿಗಳಾದ ಚೆನ್ನಪ್ಪ ಹೇಳಿದರು.

ಅವರು‌ ತಾಲ್ಲೂಕಿನ ಬಂಡೆಹಟ್ಟಿ ಸರಕಾರಿ ಶಾಲೆಯಲ್ಲಿ ರಾಷ್ಟ್ರ ನಾಯಕರು, ಹರಿಭಕ್ತರ ಭಾವಚಿತ್ರಗಳನ್ನು ಕೊಡುಗೆ ನೀಡುವ ಮೂಲಕ‌ ಮಾತನಾಡಿದ ಅವರು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು, ತಮ್ಮ ಉತ್ತಮ‌ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಮುಖಂಡ ಚೆನ್ನಪ್ಪ ಮಾತನಾಡಿ, ‌ಪ್ರಾಥಮಿಕ‌ ಶಾಲೆಯಿಂದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ನನ್ನ ಮಗ ಈಗ ಸರ್ಕಾರಿ ಪೊಲೀಸ್ ಅಧಿಕಾರಿಯಾಗಿದ್ದು ಸರ್ಕಾರಿ ಶಾಲೆಯಲ್ಲಿ ಓದಿದ್ದು ನನಗೆ ಬಹಳ ಖುಷಿಯಾಗಿದ್ದು ಉಳಿದ ಎಲ್ಲಾ ಪೋಷಕರು ನಿಮ್ಮ
ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಿ ಎಂದು ಕರೆ ನೀಡಿದರು.

ಇದೇ ಸಂಧರ್ಭದಲ್ಲಿ ಬಂಡೆಹಟ್ಟಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾರದ ಆರ್.ನಾಗರಾಜ್, ಸಹ ಶಿಕ್ಷಕರಾದ ಹೆಚ್.ಹನುಮಂತಪ್ಪ, ಎಸ್ ಡಿಎಂಸಿ ಅಧ್ಯಕ್ಷ ಗೊವಿಂದರಾಜು, ಗ್ರಾಮ ಪಂಚಾಯತಿ ಗೀತಾ ಪಾಪಯ್ಯ, ಜಿ.ತಿಪ್ಪೇಸ್ವಾಮಿ, ಇತರರು ಇದ್ದರು.

About The Author

Namma Challakere Local News
error: Content is protected !!