ಚಳ್ಳಕೆರೆ : ಸಕ್ಕರೆ ಸಚಿವರಾದ ಶಿವಾನಂದ ಪಾಟೀಲರವರು ರಾಜ್ಯದ ರೈತರ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ರೈತರು ಯಾವತ್ತು ಬರಗಾಲವನ್ನು ಬಯಸಿದವರಲ್ಲ, ರೈತರ ಕಸುಬೆ ಕೃಷಿ, ಈ ಸಚಿವರು ಪದೇ ಪದೇ ಅನ್ನದಾತರನ್ನು ಅವಮಾನಿಸಿ ರೈತರ ಜೀವನವನ್ನು ಹಂಗಿಸುವುದು, ಅವರ ಮೇಲೆ ಮಾನಸಿಕ ದೌರ್ಜನ್ಯ ಮಾಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.
ಅವರು ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ ಗೆ ಮನವಿ ಮಾಡಿ ಮಾತನಾಡಿದರು, ರೈತರಿಗೆ 5 ಲಕ್ಷ ರೂ. ಪರಿಹಾರ ಹೆಚ್ಚಿಸಿದ್ದಕ್ಕೆ ಹೆಚ್ಚು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ರೈತರಿಗೆ ನೀರು ಮತ್ತು ವಿದ್ಯುತ್‌ನ್ನು ಉಚಿತವಾಗಿ
ಕೊಟ್ಟರೂ ಬರಗಾಲ ಬಯಸುತ್ತಿದ್ದಾರೆ. ರೈತರ ಸಾಲ ಮನ್ನಾ ಆಗುತ್ತದೆಂಬ ಆಶಯದಿಂದ ಬರಗಾಲವನ್ನು ರೈತರು ಹೆಚ್ಚು ಹೆಚ್ಚು ಅಪೇಕ್ಷಿಸುತ್ತಾರೆ. ಹೀಗೆ ರೈತರನ್ನು ಅವಮಾನಿಸುವಂತಹ ಹೇಳಿಕೆ ನೀಡುತ್ತಿರುವ ಶಿವಾನಂದ ಪಾಟೀಲರವರಿಗೆ ರೈತರೆಲ್ಲರೂ ಸೇರಿ ರೂ.50ಲಕ್ಷಕ್ಕೂ ಹೆಚ್ಚು ಕೊಡುತ್ತೇವೆ. ಸಚಿವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ಇಂಥ ಕೀಳು ಹೇಳಿಕೆಗಳನ್ನು ನೀಡುವ ಸಚಿವರನ್ನು ಸಚಿವ ಸಂಪುಟದಿAದ ಮುಖ್ಯಮಂತ್ರಿಯವರು ವಜಾ ಮಾಡಬೇಕು ಮತ್ತು ರೈತರು ಬೆಳೆದಿರುವ ಅನ್ನ ತಿನ್ನುವಂತಾದರೆ ತಕ್ಷಣ ರೈತರಿಗೆ ಕ್ಷಮೆ ಯಾಚಿಸಚಿಸಬೇಕು.
ರೈತರು ಬಿಸಿಲಿಗೆ ಬೆನ್ನುಒಡ್ಡಿ, ಮಳೆಗೆ ಮೈ ಒಡ್ಡಿ, ಸಿಡಿಲಿಗೆ ಎದೆಯೊಡ್ಡಿ ‘ಭೂಮಿಯನ್ನು ನಂಬಿ ಎಂತಹ ಕಷ್ಟ ಬಂದರೂ 140ಕೋಟಿ ಜನಕ್ಕೆ ಊಟ ಬಡಿಸುತ್ತಿರುವ ರೈತರನ್ನು ಪ್ರತಿ ತುತ್ತು ತಿನ್ನುವಾಗಲೂ ರೈತರನ್ನು ನೆನೆದುಕೊಂಡು ಹೆಚ್ಚು ಹೆಚ್ಚು ರೈತರಿಗೆ ಪ್ರೋತ್ಸಾಹಿಸಿ ಗೌರವಿಸಬೇಕೇ ವಿನಃ ‘ಇಂಥ ಕೀಳು ಹೇಳಿಕೆಗಳನ್ನು ನೀಡುವುದು ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳಿಗೆ ಘನತೆ ತರುವುದಿಲ್ಲ. ಶಿವಾನಂದ ಪಾಟೀಲರವರು ಕೋರಬೇಕು. ಹಾಗೂ ಸಚಿವ ಸ್ಥಾನದಿಂದ ವಜಕ್ಕೆ ರಾಜ್ಯದ ರೈತರೆಲ್ಲರೂ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪಾಠ ಬಹಿರಂಗವಾಗಿ ರೈತರ ಕ್ಷಮೆ ಕಲಿಸುತ್ತೇವೆಂದು ಈ ಮೂಲಕ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಎಚ್ಚರಿಸಿದರು.
ಈದೇ ಸಂಧರ್ಭದಲ್ಲಿ ಆರ್.ಬಸವರಾಜ್, ಎರಿಸ್ವಾಮಿ, ಶ್ರೀಕಂಠಮೂರ್ತಿ, ತಿಪ್ಪೆಸ್ವಾಮಿ, ಜಿ.ರಾಮಚಂದ್ರ, ಚಂದ್ರಪ್ಪ, ಜಯಮ್ಮ, ಮರೇಶ್, ಶಿವಣ್ಣ, ಜಯಣ್ಣ, ರತ್ನಮ್ಮ, ಸಣ್ಣ ಪಾಪಯ್ಯ, ದುರುಗಪ್ಪ ಇದ್ದರು.