ನಾಯಕನಹಟ್ಟಿ:: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಗ್ರಾಮದ ಪ್ರತಿಯೊಬ್ಬರು ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಹೇಳಿದ್ದಾರೆ.
ಅವರು ಮಂಗಳವಾರ
ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದಾಪುರ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು 2023 -24ನೇ ಸಾಲಿನ 14ನೇ ಮತ್ತು 15ನೇ ಹಣಕಾಸು ಆಯೋಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.
ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ್ದಾರೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿಯನ್ನು ಮಾಡಿದರು.
ಇದೆ ವೇಳೆ ತಾಲೂಕು ಸಾಮಾಜಿಕ ಪರಿಶೋಧನಾ ವ್ಯವಸ್ಥಾಪಕ ಟಿ ಮಲ್ಲಪ್ಪ ಮಾತನಾಡಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯ ಸಾಮಾಜಿಕ ಪರಿಶೋಧನಾ ದಿನಾಂಕ 21.12.2023 ರಿಂದ ಸುಮಾರು ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸಾಮಾಜಿಕ ಹರಿಶೋದನೆಯ ಸಂಬಂಧಪಟ್ಟಂತೆ ಕಾಮಗಾರಿಗಳ ವೀಕ್ಷಣೆ ಕಡಿತಗಳ ಪರಿಶೀಲನೆ ಈ ಯೋಜನೆಯಲ್ಲಿ ಕೆಲಸ ನಿರ್ವಹಿಸುವಂತಹ ಎಲ್ಲಾ ಕೂಲಿಕಾರ್ಮಿಕರ ಮನೆ ಮನೆ ಭೇಟಿ ಮಾಡಿ ವರದಿ ತಯಾರು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಲುವಾಗಿ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲ ಆಯೋಜಿಸಲಾಗಿದೆ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 112 ಕಾಮಗಾರಿಗಳು ನಡೆದಿದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 90 ಕಾಮಗಾರಿ ವೈಯಕ್ತಿಕ 57 ಕಾಮಗಾರಿ ಸಮುದಾಯ 33 ಕಾಮಗಾರಿ ಕೃಷಿ ಇಲಾಖೆ 4 ಕಾಮಗಾರಿ ತೋಟಗಾರಿಕೆ 8 ಕಾಮಗಾರಿ ರೇಷ್ಮೆ ಇಲಾಖೆ 4 ಕಾಮಗಾರಿ ಜಲ ನಯನ ಇಲಾಖೆ ಒಂದು ಕಾರ್ಯಕ್ರಮಗಾರಿ ನಡೆದಿದೆ ಈ ಕಾಮಗಾರಿಗಳ ಕೂಲಿ ಕೂಲಿ ಮೊತ್ತ 45 ಲಕ್ಷದ 44,902.
ಸಾಮಗ್ರಿ ಮೊತ್ತ 40 ಲಕ್ಷದ 56395 ಒಟ್ಟು ಕಾಮಗಾರಿಯ ಮೊತ್ತ. 86 ಲಕ್ಷದ 349 ರೂಪಾಯಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ, ಸದಸ್ಯರಾದ ಎಂ. ಪಾಲಯ್ಯ, ಕೆ .ಟಿ. ಜಯಂತಿಬಾಯಿ, ಪಿಡಿಒ ಎಸ್ ರಾಘವೇಂದ್ರ, ಕುದಾಪುರ ಗ್ರಾಮದ ಮುಖಂಡ ಸಣ್ಣಬಸಯ್ಯ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಕಾರ್ಯದರ್ಶಿ ಸರ್ವಮಂಗಳ, ಬಿಲ್ ಕಲೆಕ್ಟರ್ ಎಸ್ ಯೋಗೇಂದ್ರ, ಕಂಪ್ಯೂಟರ್ ಆಪರೇಟರ್ ತಿಪ್ಪೆರುದ್ರಪ್ಪ, ಇಂಜಿನಿಯರ್ ಮೋನಿಷಾ, ಬಿಎಫ್ ಟಿ .ಜಿ ಎಂ ಚಿದಾನಂದ, ಕಾಯಕ ಮಿತ್ರ ಭವ್ಯ, ಸೇರಿದಂತೆ ಕುಂದಾಪುರ ಗ್ರಾಮದ ಗ್ರಾಮಸ್ಥರಾದ ಶ್ರೀನಿವಾಸ್, ಚಿನ್ನನಾಯಕ, ಬಸವರಾಜ್, ನಾಗೇಂದ್ರ, ದಾಸರಬೋರಯ್ಯ, ಜಯಮ್ಮ, ರತ್ನಮ್ಮ, ಲಕ್ಷ್ಮಿ ದೇವಿ, ಕಮಲಮ್ಮ, ಬೋರಮ್ಮ, ಹಾಗೂ ನರೇಗಾ ಕೂಲಿ ಕಾರ್ಮಿಕರು ಇದ್ದರು