ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಸಮೀಪದ ಹೆಗ್ಗೆರೆ ಗೇಟಿನಲ್ಲಿ ಟಿ ವಿ ಎಸ್ ಎಕ್ಸೆಲ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಟಿವಿಎಸ್ ಸವಾರನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣ ಪಾಯದಿಂದ ಪಾರಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಹೆಗ್ಗೆರೆಯಿಂದ ಹಿರಿಯೂರಿನ ಕೊಟ್ಟಿಗೆ ನಿವಾಸಕ್ಕೆ ಹೊರಟಿದ್ದ ಟಿವಿಎಸ್ ಎಕ್ಸೆಲ್ ಸವಾರ ಗೋವಿಂದಪ್ಪ ಹೆಗ್ಗೆರೆ ಗೇಟಿನಲ್ಲಿ ರಸ್ತೆ ಕ್ರಾಸ್ ಮಾಡುವಾಗ ಚಳ್ಳಕೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಎಕ್ಸೆಲ್ ಸವಾರ ಗೋವಿಂದಪ್ಪನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಅಲ್ಲಿದ್ದ ಸ್ಥಳೀಯರು ಧಾವಿಸಿ ಆಂಬುಲೆನ್ಸ್ ಕರೆಸಿ ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮರೆದಿದ್ದಾರೆ.
ಅಪಘಾತದಲ್ಲಿ ಟಿವಿಎಸ್ ಎಕ್ಸೆಲ್ ಹಾಗೂ ಕಾರಿನ ಮುಂಭಾಗ ಪೂರ್ತಿ ಜಕಮ್ ಗೊಂಡಿದ್ದು ಸ್ಥಳಕ್ಕೆ ಸಾಣಿಕೆರೆ ಪೊಲೀಸ್ ಠಾಣೆಯ ಎಎಸ್ಐ ತಿಪ್ಪೇಸ್ವಾಮಿ, ಎನ್.ಕೆ. ಕುಮಾರ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.