ಚಳ್ಳಕೆರೆ : ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಿಂದ ಅವರ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿ ನೀಡಿದಂತಾಗುತ್ತದೆ, ಅದರಂತೆ ವಾಹನ ಚಾಲಕ ಮಕ್ಕಳಿಗೆ ಪ್ರತಿಭೆಯನ್ನು ಮತ್ತು ಅವರಿಗೆ ಸಿಗಬೇಕಾದ ಗೌರವವನ್ನು ಇಂತಹ ವೇದಿಕೆಗಳಿಂದ ಮಾತ್ರ ಸಾಧ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಹೇಳಿದರು.
ನಗರದ ಛೇಂಬರ್ ಆಪ್ ಕಾಮರ್ಸ್ನಲ್ಲಿ ಶ್ರೀರಾಮ್ ಪೌಂಡೆಷನ್‌ವತಿಯಿAದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶ್ರೀರಾಮ್ ಪೌಂಡೆಷನ್‌ನಿAದ ಪ್ರತಿವರ್ಷ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು, ಇವು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಹಾಗೂ ಚಾಲಕರ ಮಕ್ಕಳಿಗೆ ಸ್ಪೂತಿದಾಯಕವಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ದಾರಿ ದೀಪವಾಗಬೇಕು ಎಂದರು.
ಶ್ರೀರಾಮ ಪೌಂಡೆಷನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಧರ್ ಮಠಮ್ ಮಾತನಾಡಿ, ಪ್ರತಿ ವರ್ಷ ನಮ್ಮ ಶ್ರೀರಾಮ್‌ಪೌಂಡೆಷನ್‌ನಿAದ ಚಾಲಕರ ಮಕ್ಕಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿಯಾಗಲು ಇಂತಹ ಪುರಸ್ಕಾರಗಳು ನಡೆಯುತ್ತಾವೆ ಅದರಂತೆ ಈ ವರ್ಷವೂ ಕೂಡ ಚಾಲಕ ಮಕ್ಕಳಿಗೆ ಅಭಿನಂದಿಸಿ ಸನ್ಮಾನ ಮಾಡಲಾಗುತ್ತಿದೆ ಎಂದರು.
ಪೊಲೀಸ್ ಇನ್ಸೆಪೆಕ್ಟೆರ್ ಆರ್.ಎಪ್.ದೇಸಾಯಿ ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬAತೆ ಪ್ರತಿಯೊಬ್ಬರ ತಂದೆ ತಾಯಿ ಕನಸಿನಂತೆ ಸರಕಾರಿ ಸೇವೆ ಮಾಡುವ ಹಂಬಲ ಪ್ರತಿಯೊಬ್ಬರಲ್ಲಿ ಮೈ ಗೂಡಿಸಿಕೊಳ್ಳಬೇಕು, ಇಂತಹ ಪ್ರತಿಭಾ ಪುರಸ್ಕಾರ ನಮ್ಮ ಗುರಿಯನ್ನು ಮತ್ತಷ್ಟು ಉನ್ನತ ಶಿಖರಕ್ಕೆ ಕೊಂಡುಯ್ಯುತ್ತದೆ, ಇವರ ಪ್ರೋತ್ಸಾಹ ಧನ ನಮ್ಮನ್ನು ಉನ್ನತ್ತ ವ್ಯಾಸಂಗದ ಕಡೆದಾರಿ ಮಾಡುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ಭವ್ಯ ಭಾರತದ ಮುಂದಿನ ಭವಿಷ್ಯದ ಮಕ್ಕಳ ಎಂದು ಸಂಬೋಧಿಸುತ್ತಾ, ಎಂಟನೇ ತರಗತಿ ಪಾಸದವರಿಂದ ಅರ್ಥಿಕ ಮಟ್ಟ ಸುಧಾರಿಸಲು ಮಕ್ಕಳ ವ್ಯಾಸಂಗಕ್ಕೆ ಅನುಕೂಲ ಮಾಡಲು ಈ ಪ್ರೋತ್ಸಾಹ ಧನ ಸಾರ್ಥಕವಾಗಬೇಕು, ಖಾಸಗಿ ಸಂಸ್ಥೆಗಳು ನೀಡುವ ಪ್ರೋತ್ಸಾಹ ಧನ ನಮ್ಮ ಬದುಕಿಗೆ ಸ್ಪೂರ್ತಿಯಾಗಬೇಕು, ಗ್ರಾಮೀಣ ಪ್ರದೇಶದ ಮಕ್ಕಳು ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಧನ ಸದ್ಬಳಕೆ ಮಾಡಿಕೊಂಡು ಮುಂದೆ ಬರಲು ಸಹಕಾರಿಯಾಗುತ್ತದೆ ಎಂದರು.
ಇನ್ನೂ ಪಿಎಸ್‌ಐ ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಕೀಳಿರಿಮೆ ಬಿಟ್ಟು ವ್ಯಾಸಂಗದ ಕಡೆಗಮನ ಹರಿಸಬೇಕು, ಇಂತಹ ಸಂಸ್ಥೆಗಳು ನೀಡುವ ಪ್ರೋತ್ಸಾಹ ಧನದಿಂದ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡು ಉನ್ನತ ವ್ಯಾಸಂಗದ ಕಡೆ ದಾಪುಗಾಲು ಹಾಕಬೇಕು, ಗುರಿ, ಸಂಕಲ್ಪ, ಸವಾಲು ಈ ಮೂರು ಹಂತಗಳನ್ನು ಯಾರು ಸರಿಯಾಗಿ ಹರಿತರೆ ಅವರ ಹಾದಿ ಸುಗಮವಾಗಿರುತ್ತದೆ, ಆದ್ದರಿಂದ ಸಮರ್ಥವಾದ ಗುರುವಿನ ಮಾರ್ಗದಿಂದ ದೃಡವಾದ ಸಂಕಲ್ಪವನ್ನು ಮಾಡಿ ಗುರಿಯ ಬೆನ್ನೆರಿ ಸವಾಲುಗಳನ್ನು ಮೆಟ್ಟಿನಿಂತು ಸವಾಲುಗಳನ್ನು ಸಮರ್ಥವಾಗಿ ನಿಬಾಯಿಸಿದರೆ ಮಾತ್ರ ನಿಮ್ಮ ಧ್ಯೇಯ ಸಾಧನೆ ಮಾಡಬಹುದು ಎಂದರು.
ಮುಖ್ಯ ಶಿಕ್ಷಕ ಟಿ.ಅಶೋಕರೆಡ್ಡಿ ಮಾತನಾಡಿ, ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೆ ಆಸ್ತಿಯನ್ನಾಗಿಮಾಡಿ ನಿಮ್ಮ ಮಕ್ಕಳ ಪ್ರತಿಭೆಗೆ ಅವಕಾಶ ಮಾಡಿಕೊಡಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಗಮನಹಸಿರಿ, ಶ್ರೀರಾಮ ಪೈನಾನ್ಸ್ ನಿಂದ ವಿದ್ಯಾರ್ಥಿ ವೇತನ ಉಪಯೋಗ ಪಡೆದು ವ್ಯಾಸಂಗಕ್ಕೆ ಅನೂಕೂಲ ವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಶ್ರೀರಾಮ್ ಪೈನಾನ್ಸ್ನ ತುಮಕೂರು ರೀಜನಲ್ ಬ್ಯುಸಿನೆಸ್ ಹೆಡ್ ಟಿ.ಆರ್.ರಾಘವೇಂದ್ರ, ತುಮಕೂರು ರೀಜನಲ್ ಬ್ಯುಸಿನೆಸ್ ಹೆಡ್ ಟಿ.ಪ್ರವೀಣ್, ಚಳ್ಳಕೆರೆ ಬ್ರಾಂಚ್ ಮ್ಯಾನೆಜರ್ ಶಿವಮೂರ್ತಿ, ಕಲೇಕ್ಷನ್ ಮ್ಯಾನೆಜರ್ ರಮೇಶ್ ಬಾಬು, ವಕೀಲರಾದ ನಾಗರಾಜ್, ಹಾಗೂ ಸಿಬ್ಬಂದಿ, ಪ್ರೋತ್ಸಹ ಬಯಸಿದ ವಿದ್ಯಾರ್ಥಿಗಳು ಇತರರು ಇದ್ದರು.
ಪೋಟೋ, ಚಳ್ಳಕೆರೆ ನಗರದ ಛೇಂಬರ್‌ಆಪ್‌ಕಾಮರ್ಸ್ನಲ್ಲಿ ಶ್ರೀರಾಮ್ ಪೌಂಡೆಷನ್‌ವತಿಯಿAದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸನ್ಮಾನಿಸಿದರು.