ಚಳ್ಳಕೆರೆ : ಡಿ.23ರಂದು ಚಳ್ಳಕೆರೆ ನಗರದ ಕೃಷಿ ಇಲಾಖೆ ಆವರಣದಲ್ಲಿ ನಡೆದ ರಾಷ್ಟಿçÃಯ ರೈತರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರೈತರನ್ನೆ ಕರೆಯದೆ ರೈತರಿಗೆ ಅಪಮಾನ ಮಾಡಿದ ಕೃಷಿ ಅಧಿಕಾರಿಗಳ ವಿರುದ್ಧ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ದೂರು ನೀಡುವೆ.
ತಾಲೂಕಿನಲ್ಲಿ ನೆಪ ಮಾತ್ರಕ್ಕೆ ಕೃಷಿ ಇಲಾಖೆ ಇದೆ, ಕೇವಲ ಕೆಲವರಿಗೆ ಮಾತ್ರ ಅಲ್ಲಿನ ಸೌಲಭ್ಯಗಳು ಸಿಗುವಂತೆ ಅಲ್ಲಿನ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಇನ್ನೂ ಈಡೀ ದೇಶವೇ ರೈತ ದಿನಾಚರಣೆಯಲ್ಲಿ ತೊಡಗಿದೆ. ಚಳ್ಳಕೆರೆ ಕೃಷಿ ಅಧಿಕಾರಿಗಳ ವೈಪಲ್ಯದಿಂದ ರೈತರನ್ನು ಕಡೆಗÀಣಿಸಿ ನೆಪಮಾತ್ರಕ್ಕೆ ಕಾರ್ಯಕ್ರಮ ಮಾಡಿರುವುದು ಖಂಡನೀಯ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಕಿಡಿಕಾರಿದ್ದಾರೆ.
ಮಾಜಿ ಪ್ರಧಾನಿ ದಿ. ಚೌದರಿ ಚರಣಸಿಂಗ್ ಅವರ ಜಯಂತ್ಯುತ್ಸವ ದಿನವಾದ ಡಿ.23ರಂದು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗಿದೆ. ಆದರೆ ಕೃಷಿ ಇಲಾಖೆಯ ನಿರ್ಲಕ್ಷದಿಂದಾಗಿ ಡಿ.23ರಂದು ರೈತರ ದಿನಾಚರಣೆಯನ್ನು ಕಸಬಾ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ರೈತರನ್ನು ಆಹ್ವಾನಿಸದೆ ಕೆಲವರನ್ನು ಕರೆದು ಕಾಟಾಚಾರಕ್ಕೆ ಆಚರಣೆ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮದಾನ ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!