ಚಳ್ಳಕೆರೆ : ವಿದ್ಯುತ್ ಅಪಘಾತ ತಡೆ ಸಪ್ತಾಹದ ಅಂಗವಾಗಿ ಬೆಸ್ಕಾಂ ಚಳ್ಳಕೆರೆ ವಿಭಾಗದಿಂದ ವಿಭಾಗದಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಜಾಥಾವನ್ನು ನಗರದ ಪ್ರಮುಖ ರಸ್ತೆಯಲ್ಲಿ ನಡೆಸಲಾಯಿತು.
ನಗರದ ಬೆಸ್ಕಾಂ ಕಚೇರಿಯಿಂದ ಆರಂಭವಾದ ಜನ ಜಾಗೃತಿ ಜಾಥಾವು ಅಂಬೇಡ್ಕರ್ ವೃತ್ತ, ನೆಹರು ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಸುರಕ್ಷಣಾ ಜನ ಜಾಗೃತಿ ಜಾಥ ಮಾಡಿದರು.
ಬೆಸ್ಕಾಂ ಎಡ್ಲೂö್ಯ ರಾಜಣ್ಣ ಮಾಧ್ಯಮದೊಂದಿಗೆ ಮಾತನಾಡಿ, ವಿದ್ಯುತ್ ಅಪಘಾತ ಹಾಗೂ ತುರ್ತು ಸಂದರ್ಭದಲ್ಲಿ ದೂರವಾಣಿ ಸಂಖ್ಯೆ 1912 ಕರೆ ಮಾಡಿ ಮಾಹಿತಿ ನೀಡಬಹುದು. ಚಳ್ಳಕೆರೆ ವಿಭಾಗದ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯುತ್ ಅಪಘಾತಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂಧರ್ಭದಲ್ಲಿ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿಯರ್ ಗಳಾದ ದೇವರಾಜ್, ಸುರೇಶ್ ಕುಮಾರ್, ಶಿವಕುಮಾರ್, ಧನಂಜಯ್, ನಾಗರಾಜ್, ಕಚೇರಿ ಸಿಬ್ಬಂದಿಗಳಾದ ಹೇಮಂತರಾಜ್, ಅರಣ್ ಕುಮಾರ್. ಸ್ವರ್ಣ, ವೆಂಕಟಚಾರ್ಯ, ಹಾಗೂ ಲೈನ್ ಮ್ಯಾನ್‌ಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬೇಡಿ ಹಾಗೂ ಪ್ಲೆಲ್ಸ್ ಬ್ಯಾನರ್ ಕಟ್ಟ ಬೇಡಿ ಕಟ್ಟುವಾಗ ವಿದ್ಯುತ್ ಶಾಕ್ ನಿಂದ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸಿದರು.

Namma Challakere Local News
error: Content is protected !!