ಚಳ್ಳಕೆರೆ : ಓದುವ ವಯಸ್ಸಿನಲ್ಲಿ ತಮ್ಮ ಅಮೂಲ್ಯವಾದ ಜೀವನವನ್ನು ಕೇವಲ ವ್ಯಾಸಂಗಕ್ಕಾಗಿ ಮೀಸಲು ಇಡಬೇಕು ಇಂತಹ ಸಂಧರ್ಭದಲ್ಲಿ ಅನ್ಯ ವ್ಯಸನಗಳಿಗೆ ಬಲಿಯಾಗದೆ ವ್ಯಾಸಂಗದ ಕಡೆ ಗಮನಹರಿಸಿ ಎಂದು ಡಿವೈಎಸ್‌ಪಿ ಬಿಟಿ.ರಾಜಣ್ಣ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ ವಾರಿರ‍್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪೊಲೀಸ್ ಉಪವಿಭಾಗದಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಗುಟಕಾ, ಸಿಗರೆಟ್, ತಂಬಾಕು, ಗಾಂಜಾ, ಸೇವನೆ ಮಾಡಬಾರದು, ಇದರಿಂದ ಆರೋಗ್ಯಕ್ಕೆ ಹಾನಿಕರ ಹಾಗೂ ಧೂಮಪಾನ ಮಧ್ಯಪಾನ ಮಾಡಕೂಡದು ಇದರಿಂದ ಕ್ಯಾನ್ಸರ್ ಎಂಬ ಮಾರಣಾಂತಿಕ ಖಾಯಿಲೆಗೆ ತುತ್ತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಮಕ್ಕಳು ಯಾವುದೇ ಸಮಯದಲ್ಲಿ ತುರ್ತು ಸಹಾಯವಾಣಿ ನಂ.112 ನಂಬರಗೆ ದಿನದ 24 ಗಂಟೆಗೆ ಕರೆಮಾಡಿ ತ್ವರಿತ ಸ್ಪಂದನೆಯನ್ನು ಪಡೆಯಬಹುದು. ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನವನ್ನು ಚಲಾಯಿಸಬಾರದು, ವಾಹನ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ಪಾಲಕರು ಚಿಕ್ಕ ಮಕ್ಕಳಿಗೆ ವಾಹನವನ್ನು ಚಲಾಯಿಸಲು ನೀಡಬಾರದು ಎಂದರು.
ಪಿಎಸ್‌ಐ ಕೆ.ಸತೀಶ್ ನಾಯ್ಕ್ ಮಾತನಾಡಿ, ಮಕ್ಕಳಿಗೆ ಮಾದಕ ವ್ಯಸನಗಳ ಸೇವನೆಯ ದುಷ್ಪರಿಣಾಮದ ಕುರಿತು ತಿಳುವಳಿಕೆ ನೀಡಬೇಕು, ಇತ್ತಿಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು ಇತಂಹ ಅಪರಾಧಗಳನ್ನ ತಡೆಗಟ್ಟಲು ಸಾರ್ವಜನಿಕರು ಸಹ ಪೋಲೀಸ್ ಇಲಾಖೆ ಜತೆ ಕೈಜೋಡಿಸಬೇಕು, ಶಾಲೆಗೆ ಬರುವಾಗ ಹೋಗುವಾಗ ಯಾರಾದರು ತೊಂದರೆ ಕೊಟ್ಟರೆ ವಿದ್ಯಾರ್ಥಿಗಳು ಭಯವಿಲ್ಲದೆ ಪೋಲೀಸ್ ಇಲಾಖೆಗೆ ದೂರು ದಾಖಲು ಬಾಕ್ಸನಲ್ಲಿ ದೂರು ದಾಖಲುಸಬಹುದು, ಹಾಗೂ ಖುದ್ದಾಗಿ ಪೋಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಬಹುದು ಎಂದರು.
ಇದೇ ಸಂಧರ್ಭದಲ್ಲಿ ವಾರಿಯರಸ್ ಶಾಲೆಯ ಕಾರ್ಯದರ್ಶಿಯಾದ ಶುಭಾಷ್, ಶಾಲೆಯ ಮುಖ್ಯ ಶಿಕ್ಷಕರು, ಪೊಲೀಸ್ ಸಿಬ್ಬಂದಿ ಹಾಗೂ ಮಕ್ಕಳು ಪಾಳ್ಗೊಂಡಿದ್ದರು.