ಚಳ್ಳಕೆರೆ : ರಾಜ್ಯದಲ್ಲಿ ವಿದ್ಯುತ್ ಅವಘಡಗಳು ಸಂಖ್ಯೆ ಹೇರುತ್ತಿದ್ದರು ಕೆಲವು ಅಧಿಕಾರಿಗಳು ಜಾಣ ಕುರುತನದಿಂದ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹಾಗೇ ವಿದ್ಯುತ್ ಪರಿವರ್ತಕಗಳಿಂದ ವಿದ್ಯುತ್ ಚಲಿಸುವುದು ಮಾಮೂಲಾಗಿದೆ.
ಹೌದು ಚಳ್ಳಕೆರೆ ತಾಲೂಕಿನ ತಳಕು ಬೆಸ್ಕಾ ವ್ಯಾಪ್ತಿಗೆ ಬರುವ ಚನ್ನಗಾನಹಳ್ಳಿ ಗ್ರಾಮದ ಸರಕಾರಿ ಶಾಲೆಯ ಪಕ್ಕದಲ್ಲೆ ವಿದ್ಯುತ್ ಪರಿವರ್ತಕ ಇರುವುದರಿಂದ ಶಾಲೆಗೆ ಆಗಮಿಸುವ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದು ಬರುವ ಅನಿಯಾರ್ವತೆ ಇದೆ ಇನ್ನೂ ಪರಿವರ್ತಕ ಕಂಬ ಮನೆಯ ಅಂಗಳದಲ್ಲಿ ಇರುವುದರಿಂದ ಮಕ್ಕಳು ದಿನ ನಿತ್ಯ ಮಕ್ಕಳು ಆಟ ಹಾಡುವುದು, ಓಡಾಡುವುದು ಈದರ ಪಕ್ಕದಲ್ಲೆ ಕೊಂಚ ವ್ಯಾಮಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಇದರಿಂದ ಹಲವು ಬಾರಿ ಬೆಸ್ಕಾಂ ಇಲಾಖೆ ಮನವಿ ನಿಡಿದ್ದೆವೆ ಆದರೆ ಸ್ಪಂಧನೆ ಇಲ್ಲದೆ ಎಂದು ಸ್ಥಳಿಯ ನಿವಾಸಿ ಉಮೇಶ್ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.
ಇನ್ನೂ ಶಾಲೆ ಕಟ್ಟದ ಪಕ್ಕದಲ್ಲೆ ವಿದ್ಯುತ್ ಪ್ರವಾಯಿಸುವ ತಂತಿಗಳು ಹಾದು ಹೋಗಿದ್ದು ಇದರಿಂದ ಯಾವ ಕ್ಷಣದಲ್ಲಿ ಆದರೂ ವಿದ್ಯುತ್ ಅವಘಡ ಸಂಭವಿಸಬಹುದು ಆದ್ದರಿಂದ ಮುನ್ನೆಚ್ಚರಿಕೆಯಾಗಿ ಪರಿವರ್ತಕದ ಕಂಬವನ್ನು ಬೇರೆಡೆಗೆ ವರ್ಗಾಯಿಸಿ ಅವಘಡದಿಂದ ತಪ್ಪಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

About The Author

Namma Challakere Local News
error: Content is protected !!