ಚಳ್ಳಕೆರೆ : ಚಳ್ಳಕೆರೆ ನಗರದ ಮುಖ್ಯ ಅಂಚೆ ಕಚೇರಿ ಮುಂದೆ ಗ್ರಾಮೀಣ ಅಂಚೆ ನೌಕರರ ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.
ನಮ್ಮ ಒಕ್ಕೂಟದಿಂದ ಅನೇಕ ಬಾರಿ ಸರ್ಕಾರ ಗಮನ ಸೆಳೆದರೂ, ಸರ್ಕಾರ ಕೊಟ್ಟ ಭರವಸೆ ಮರೆತಂತಿದ್ದು ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು 2016ರಲ್ಲಿ ಅಂಚೆ ನೌಕರರ ಸ್ಥಿತಿಗತಿ ಅರಿಯಲು ಕಮಲೇಶ್‌ಚಂದ್ರ ಸಮಿತಿ ರಚಿಸಿ ವರದಿ ಕೇಳಿತ್ತು. ಸಮಿತಿ ವರದಿ ನೀಡಿ ಸುಮಾರು ವರ್ಷಗಳೇ ಕಳೆದರೂ ಸರ್ಕಾರ ನೌಕರರ ಹಿತಾಸಕ್ತಿ ಕಾಪಾಡಲು ಯಾವುದೇ ಕ್ರಮಕೈಗೊಂಡಿಲ್ಲ. ನೌಕರರು ತಮ್ಮ ಭರವಸೆ ಈಡೇರಿಕೆಗಾಗಿ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ
ನಿತ್ಯ 8 ಗಂಟೆ ಕೆಲಸ ನೀಡುವುದು, ಪಿಂಚಣಿ ಸೇರಿದಂತೆ ಎಲ್ಲ ರೀತಿಯ ಸವಲತ್ತು ನೀಡುವುದು, ಸೇವಾ ಹಿರಿತನ ಆಧಾರದ ಮೇಲೆ ವಿಶೇಷ ಸೌಲಭ್ಯ ನೀಡುವುದು, ಗ್ರೂಪ್ ಇನ್ಸೂರೆನ್ಸ್, ಜಿಡಿಸಿ ಗ್ರಾಚುಟಿ ಮೊತ್ತವನ್ನು 5 ಲಕ್ಷ ರೂ.ವರೆಗೆ ಏರಿಸುವುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು ಕೂಡಲೆ ಪೂರೈಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆ.ಟಿ.ತಿಮ್ಮರೆಡ್ಡಿ, ಎನ್.ಅಜಯ್, ಕುಮಾರ್, ಪಾಂಡುರAಗರೆಡ್ಡಿ, ಲೋಕೇಶ್ವರ್, ವಿಜಯ್, ದಾದಾಪಿರ್, ನಂದಿನಿ, ಚಿಕ್ಕಣ್ಣ ಇತರರಿದ್ದರು.

About The Author

Namma Challakere Local News
error: Content is protected !!