ನಾಯಕನಹಟ್ಟಿ::ಸೂಕ್ಷ್ಮ ನೀರಾವರಿ ಘಟಕ ಯೋಜನೆಯಡಿ ರೈತರಿಗೆ ನೀಡುವ ಸಿಂಕ್ಲರ್ ಸೆಟ್ ಪೈಪುಗಳ ದರ ಹಾಗೂ ಬೆಳೆ ಪರಿಹಾರ ಬೆಳೆ ವಿಮೆ ವಿತರಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘದ ವತಿಯಿಂದ ಮಾನವಿ ಸಲ್ಲಿಸಲಾಯಿತು.

ಇದೆ ವೇಳೆ ಮಾತನಾಡಿದವರು ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಘಟಕ ಯೋಜನೆ ಅಡಿ ಸಹಾಯಧನದೊಂದಿಗೆ ವಿತರಿಸುವ ಸಿಂಕ್ಲರ್ ಪೈಪ್ ಸೇಟ್ಟಿಗೆ ರೈತರ ಒಂತಿಕೆಯನ್ನು ಒಂದಕ್ಕಿಂತ ಎರಡು ಪಟ್ಟು ಹೆಚ್ಚು ಮಾಡಿರುವ ಕಾರಣ ರೈತರು ಒಂತಿಕೆ ಹಣ ಪಾವತಿಸಲು ತುಂಬಾ ತೊಂದರೆಯಾಗುತ್ತದೆ ರಾಜ್ಯದಲ್ಲಿ ಬರೆದ ಛಾಯಾ ಆವರಿಸಿದೆ ಇಂತಹ ಸಮಯದಲ್ಲಿ ರೈತರಿಗೆ ಸಿಂಕ್ಲರ್ ಇಚ್ಚಿಸುವುದು ಎಷ್ಟು ಸರಿ ನಮ್ಮದು ರೈತಪರ ಸರ್ಕಾರ ಎಂದು ಹೇಳಿ ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳು ಅದೇ ರೈತರಿಗೆ ಅನ್ಯಾಯ ಮಾಡುವುದು ಎಷ್ಟು ಸರಿ ಆಳುವ ಸರ್ಕಾರ ಸಿಂಕ್ಲರ್ ಪೈಪುಗಳನ್ನ ವಿತರಿಸುವ ಕಂಪನಿಗಳ ಪರವಾಗಿದೆ ರೈತರ ಪರವಾಗಿ ಇಲ್ಲ ರದ್ದುಪಡಿಸಿ ಇಂದಿನ ದರದಲ್ಲಿ ಎರಡು ಇಂಚಿನ ಪೈಪು ಸೆಟ್ಟಿಗೆ 1800 ರೂಪಾಯಿಗಳು ಎರಡೂವರೆ ಇಂಚಿನ ಪೈಪು ಸೆಟ್ಟಿಗೆ 1876 ರೂಪಾಯಿ ರೈತರ ಒಂಟಿಕೆ ಹಣ ಪಾವತಿಸಿಕೊಂಡು ಸಿಂಕ್ಲರ್ ಪೈಪ್ ಸಟ್ಟುಗಳನ್ನ ವಿತರಿಸಬೇಕೆಂದು ಹಾರೈಸುತ್ತಾರೆ ಮತ್ತು ಬರಗಾಲ ಘೋಷಣೆಯಾಗಿ ಮೂರ್ನಾಲ್ಕು ತಿಂಗಳು ಕಳೆದರೂ ಒಂದು ಬಿಡಿಗಾಸನ ರೈತರಿಗೆ ಬರ ಪರಿಹಾರವಿದ್ದರೆ ವಿತರಿಸಿಲ್ಲ ರೈತ ಬಾಂಧವರು ತುಂಬಾ ಕಷ್ಟದಲ್ಲಿದ್ದಾರೆ ರೈತರಿಗೆ ಕಷ್ಟ ಅರಿತು ಆದಷ್ಟು ಬೇಗ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಪರಿಹಾರ ವಿಮೆ ವಿತರಿಸಬೇಕು ಎಂದು ಕೃಷಿ ಅಧಿಕಾರಿ ಹೇಮಂತ ನಾಯ್ಕ ರವರಿಗೆ ಮನವಿಯನ್ನು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಸಿದ ಕೃಷಿ ಅಧಿಕಾರಿ ಹೇಮಂತ್ ನಾಯ್ಕ.
ಮನವಿಯನ್ನ ಮೇಲಾಧಿಕಾರಿಗಳಿಗೆ ತಲುಪಿಸುತ್ತೇನೆ ಮೇಲಾಧಿಕಾರಿಗಳು ಆದೇಶ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಹಳೆಯ ದರದಲ್ಲಿ ಸಿಂಕ್ಲರ್ ವಿತರಿಸಲಾಗುವುದು ಎಂದು ರೈತರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಅಧ್ಯಕ್ಷ ಬಿ ಟಿ ಪ್ರಕಾಶ್ ಜಾಗನೂರಹಟ್ಟಿ , ಪದಾಧಿಕಾರಿಗಳಾದ ಚನ್ನಬಸಯ್ಯನಹಟ್ಟಿ ಬಿ.ಬಿ. ಬೋಸಯ್ಯ, ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಚೌಳಕೆರೆ ಡಿ. ಬಿ. ಕರಿಬಸಪ್ಪ, ಚನ್ನಬಸಯ್ಯನಹಟ್ಟಿ ಸಣ್ಣ ಬೋರಯ್ಯ,
ಗುಂತಕೋಲಮ್ಮನಹಳ್ಳಿ ಎಸ್.ಶಿವತಿಪ್ಪೇಸ್ವಾಮಿ,
ಓಬಯ್ಯನಹಟ್ಟಿ ಚನ್ನಪ್ಪ, ಚನ್ನಬಸಯ್ಯನಹಟ್ಟಿ ಗಾದ್ರಿಯ್ಯ, ಗಜ್ಜುಗಾನಹಳ್ಳಿ ಹೊನ್ನೂರಪ್ಪ, ಗೌಡಗೆರೆ ದುರುಗಪ್ಪ, ಧರ್ಮ ನಾಯ್ಕ, ಇದ್ದರು

Namma Challakere Local News
error: Content is protected !!