.
ನಾಯಕನಹಟ್ಟಿ:: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನತೆ ಆಶಿರ್ವಾದ ಮಾಡಿದಲ್ಲಿ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂಬ ರಾಮಪ್ಪ ಹೇಳಿದ್ದಾರೆ.
ಅವರು ಸೋಮವಾರ ನೇರಲಗುಂಟೆ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ಆಶೀರ್ವಾದ ಪಡೆದು ಮುಖಂಡರು ಕಾರ್ಯಕರ್ತರೊಂದಿಗೆ
2024ರ ಲೋಕಸಭಾ ಚುನಾವಣೆಯ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಆದ್ದರಿಂದ 2024ರ ಲೋಕಸಭಾ ಚುನಾವಣೆ ಆಶೀರ್ವಾದ ಮಾಡುವಂತೆ ಮನವಿಯನ್ನು ಮಾಡಿದರು.
ಇನ್ನೂ ಹೋಬಳಿಯ ಎನ್ ದೇವರಹಳ್ಳಿ ,ಎನ್ ಮಹದೇವಪುರ, ನಲಗೇತನಹಟ್ಟಿ, ಗೌಡಗೆರೆ, ಜೋಗಿಹಟ್ಟಿ ,ಮಲ್ಲೂರಹಟ್ಟಿ ಅಬ್ಬೇನಹಳ್ಳಿ, ಮಲ್ಲೂರಹಳ್ಳಿ, ಗ್ರಾಮ ಪಂಚಾಯತಿಯ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರಿಗೆ 2024ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನೂರಕ್ಕೆ ನೂರರಷ್ಟು ಅಭ್ಯರ್ಥಿಯಾಗುವುದು ನಿಶ್ಚಿತ ಅದರಿಂದ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು .
ಇದೇ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ನೇರಲಗುಂಟೆ ಎಂ ರಾಮಪ್ಪ, ಕಾಂಗ್ರೆಸ್ ಮುಖಂಡ ಎಂ ಸೂರನಾಯಕ, ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಜಿ ಬಿ ಬಾಲರೆಡ್ಡಿ, ಜಿ ತಿಪ್ಪೇಸ್ವಾಮಿ, ಸೋಮಶೇಖರ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ ತಿಪ್ಪೇಸ್ವಾಮಿ, ಎನ್ ದೇವರಹಳ್ಳಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಟಿ ಕಾಟಯ್ಯ, ವರವು ವಿ ಟಿ ಶಂಕರ್ ಮೂರ್ತಿ, ಹಿರೇಹಳ್ಳಿ ಕೃಷ್ಣಪ್ಪ, ನೇರಲಗುಂಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಗೋಪಾಲ ನಾಯಕ, ನೇರಲಗುಂಟೆ ಮಾಜಿ ಗ್ರಾ.ಪಂ.ಅಧ್ಯಕ್ಷ ಈರಣ್ಣ, ಭೀಮನಕೆರೆ ಪಾಲಯ್ಯ, ಸೇರಿದಂತೆ ಮುಂತಾದವರು ಇದ್ದರು