ಚಳ್ಳಕೆರೆ : ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಆರೋಗ್ಯ ಅತಿಮುಖ್ಯ ವಾಗಿರುವುದರಿಂದ, ಎಲ್ಲಾ ವಿದ್ಯಾರ್ಥಿಗಳಿಗೆ ರಕ್ತಹೀನತೆಯ ಬಗ್ಗೆ ಸ್ಥಳದಲ್ಲಿ ಪರೀಕ್ಷಿಸಿ ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಎಂ ರವೀಶ್ ಹೇಳಿದರು.
ಅವರು ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಪ್ರಥಮ ಪಿಯುಸಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ, ಅನಿಮೀಯ ಮುಕ್ತಪೌಷ್ಟಿಕ ಕರ್ನಾಟಕ ಯೋಜನೆಯಡಿ ರಕ್ತಹೀನತೆ ಪರೀಕ್ಷೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಗ್ರಾಮೀಣ ಭಾಗದಿಂದ ಬಂದ ಮಕ್ಕಳು ಸರಿಯಾದ ಸಮಯಕ್ಕೆ ಊಟ ಮಾಡದೆ ಬರುವ ವಿದ್ಯಾರ್ಥಿಗಳು ಒತ್ತಡದಲ್ಲಿ ತಮ್ಮ ಆರೋಗ್ಯ ಕಾಳಜಿ ಮರೆಯಬಾರದು ಎಂದರು.
ಇನ್ನೂ ಕಬ್ಬಿಣಾಂಶಯುಕ್ತ ಮಾತ್ರೆಗಳನ್ನು ಹಾಗೂ ಹೀಮೋಗ್ಲೋಬಿನ್ 7ಕ್ಕಿಂತ ಕಡಿಮೆ ಇದ್ದ ವಿದ್ಯಾರ್ಥಿಗಳಿಗೆ ಐರನ್-ಸುಕ್ರೋಸ್ ಇಂಜಕ್ಷನ್ ನೀಡಲಾಗುತ್ತದೆ ಹಾಗೂ ಹೋಮೋಗ್ಲೋಬಿನ್ 5ಕ್ಕಿಂತ ಕಡಿಮೆ ಕಂಡುಬರುವ ಮಕ್ಕಳಿಗೆ ರಕ್ತವನ್ನು ನೀಡಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಎಂ ರವೀಶ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಯಾದ ಶಾಂತಕುಮಾರಿ ಬಿ, ಡಾ.ರಮೇಶ್, ಡಾ.ಮಂಜುನಾಥ್, ಉಪನ್ಯಾಸಕರಾದ ಪುಟ್ಟರಂಗಪ್ಪ, ರವಿಕುಮಾರ್, ರಾಜಶೇಖರ್, ಮಹಾಂತೇಶ್, ಮಧು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರೇಖ, ಅಕ್ಷತಾ ಉಪಸ್ಥಿತರಿದ್ದರು.