ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ದ್ಯಾವರನಹಳ್ಳಿಯ ಬಸ್‌ನಿಲ್ದಾಣದ ಸಮೀಪದಲ್ಲಿ ಚಿತ್ರದುರ್ಗ ದಿಂದ ಪಾವಗಡ ಮಾರ್ಗದ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಗುಂಡಿ ಬಿದ್ದು ರಸ್ತೆಯಲ್ಲಿ ಪ್ರಾಣಾಪಯಾದಿಂದ ವಾಹನ ಸಾವರರು ದಿನನಿತ್ಯ ಸಾಗುತ್ತಿದ್ದಾರೆ.
ಹಲವು ದಿನಗಳಿಂದ ಭಾರಿ ಅಪಘಾತವಾದ ಗುಂಡಿಗಳಿದ್ದು ವಾಹನ ಸಾವರರು ಜೀವದ ಭಯದಿಂದ ಸಾಗುವುಂತಾಗಿದೆ.
ಇನ್ನೂ ಸಂಬAಧಪಟ್ಟ ಅಧಿಕಾರಿಗಳು ಜಾಣಕುರುಡುತನದ ವರ್ತನೆಗೆ ಬೇಸತ್ತ ದ್ಯಾವರನಹಳ್ಳಿಯ ಗ್ರಾಮದ ಯುವಕರಾದ ನವೀನ್, ಸುನಿಲ್, ಶೋಬರಾಜ್, ಮಧುಕುಮಾರ್ ಯುವಕರು ತಾವೇ ಗುಂಡಿ ಮುಚ್ಚಲು ಮುಂದಾಗಿದ್ದಾರೆ
ರಸ್ತೆಯಲ್ಲಿ ಬೈಕ್ ಮತ್ತು ಕಾರು ಮುಖ್ಯವಾಗಿ ಶಾಲಾ ವಾಹನಗಳಿಗೆ ಜೀವ ಹಾನಿಯಾಗುವಂತಹ ತೊಂದರೆ ಉಂಟು ಮಾಡುತ್ತಿತ್ತು, ಹಲವು ದ್ವಿ ಚಕ್ರ ವಾಹನ ಸಾವಾರರು ಎಷ್ಟೋ ಬಾರಿ ಅಪಘಾತದಲ್ಲಿ ಸಿಲುಕಿ ಆಸ್ಪತ್ರೆಗೆ ದಾಖಲಾದ ನಿದರ್ಶನಗಳು ಇವೆ.
ಇದರಿಂದ ಎಚ್ಚೆತ್ತುಕೊಂಡ ಗ್ರಾಮದ ಯುವಕರು ತಾತ್ಕಾಲಿಕವಾಗಿ ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕುವ ಮೂಲಕ ಅಪಘಾತದಿಂದ ರಕ್ಷಣೆ ನೀಡಿದ್ದಾರೆ
ಇನ್ನೂ ಹೆಚ್ಚಿನ ಅಪಘಾತಗಳು ಸಂಭವಿಸುವ ಮುನ್ನವೇ ಸಂಬAಧಿಸಿದ ಇಲಾಖೆ ಶಾಶ್ವತವಾಗಿ ಗುಂಡಿ ಮುಚ್ಚಿ ವಾಹನ ಸವಾರರ ರಕ್ಷಣೆಗೆ ಮುಂದಾಗುವರೇ ಕಾದು ನೋಡಬೇಕಿದೆ.
ಹೇಳಿಕೆ..:
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ, ಇದರಿಂದ ಇಲ್ಲಿ ಓಡಾಡುವ ಸಾರ್ವಜನಿಕರ ಸಾರಿಗೆ ಬಸ್, ಶಾಲಾಮಕ್ಕಳ ಸಾರಿಗೆ, ಅಂಬ್ಯೂಲೆನ್ಸ್ ಈಗೆ ಈಗುಂಡಿಗಳಲ್ಲಿ ಹಲವಾರು ದ್ವಿಚಕ್ರ ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಅಫಘಾತಗಳು ಹಾಗಿವೆ ಆದ್ದರಿಂದ ಗ್ರಾಮದ ಯುವಕರ ತಂಡ ಸ್ವತಃ ತಾವೇ ರಸ್ತೆಯುದ್ದಕ್ಕೂ ಗುಂಡಿ ಬಿದ್ದ ತಗ್ಗುಗಳನ್ನು ತಾತ್ಕಲಿಕವಾಗಿ ಮುಚ್ಚುತ್ತಿದ್ದೆವೆ.—ಮಧುಕುಮಾರ್ ಗ್ರಾಮದ ಯುವಕ