ನಗರಸಭೆಗೆ
ಧನ್ಯವಾದಗಳನ್ನು ಅರ್ಪಿಸಿದ ನಗರದ ಜನತೆ.!

.!

ನಮ್ಮ ಚಳ್ಳಕೆರೆTV ವರದಿ ಪರಿಣಾಮ ಎಚ್ಚೆತ್ತುಕೊಂಡ ನಗರಸಭೆ..!!

ಪಾಳು ಬಿದ್ದ ಸಾರ್ವಜನಿಕ ಶೌಚಾಲಯಕ್ಕೆ ಕಾಯಕಲ್ಪ..!!

ನಗರಸಭೆಗೆ
ಧನ್ಯವಾದಗಳನ್ನು ಅರ್ಪಿಸಿದ ನಗರದ ಜನತೆ.!

ಚಳ್ಳಕೆರೆ : ನಮ್ಮ ಚಳ್ಳಕೆರೆTV ವರದಿ ಪರಿಣಾಮ ಎಚ್ಚೆತ್ತುಕೊಂಡ ಚಳ್ಳಕೆರೆ ನಗರಸಭೆ ಸಾರ್ವಜನಿಕ ಶೌಚಾಲಯಕ್ಕೆ ಸ್ವಚ್ಚತೆಗೆ ಮುಂದಾಗಿದೆ.

ಹಾದು ಚಳ್ಳಕೆರೆ ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳು ಹದಗೆಟ್ಟು ಗೊಬ್ಬು ವಾಸನೆ ಬೀರುತ್ತಿವೆ ಇದರಿಂದ ಸಾರ್ವಜನಿಕರು ನಗರಸಭೆ ಗೆ ಶಾಪ ಹಾಕುತ್ತಿದ್ದಾರೆ ಎಂಬ ವರದಿ ನಮ್ಮ ಚಳ್ಳಕೆರೆ ಟಿವಿ ಬಿತ್ತರಿಸಿದ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತರು ಕಾರ್ಯಪ್ರವೃತ್ತರಾಗಿ ಮುಂಜಾನೆಯೇ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಇರುವ ಶೌಚಾಲಯ ಸ್ವಚ್ಚತೆ ಮುಂದಾಗಿದೆ.

ಇನ್ನೂ ಸಾರ್ವಜನಿಕ ಶೌಚಾಲಯ ಬಳಕೆಗೆ ಗೋಡೆ ಮೊರೆ, ಕಟ್ಟಡ ಮೊರೆ ಹೋಗುವ ಬದಲು ಸಾರ್ವಜನಿಕ ಶೌಚಾಲಯ ಬಳಸಿ ಸುಚಿತ್ವ ಕಾಪಾಡಿ ಎಂದು ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಮನವಿ ಮಾಡಿದ್ದಾರೆ.

ಸಾರ್ವಜನಿಕರು ನಗರಸಭೆ ಯೊಂದಿಗೆ ಕೈ ಜೋಡಿಸಿದಾಗ ಮಾತ್ರ ನಗರ ಅಭಿವೃದ್ಧಿ ಕಾಣಲು‌ಸಾಧ್ಯ ಆದ್ದರಿಂದ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ.

About The Author

Namma Challakere Local News
error: Content is protected !!