ಚಳ್ಳಕೆರೆ // ಉದ್ಯಮಿಯೊಬ್ಬರು ಸಾಲಬಾದೆ ತಾಳಲಾರದೆ ಆತ್ಮಹತ್ಯೆಗೆ ಶರಣು
ಚಳ್ಳಕೆರೆ : ಉದ್ಯಮಿ ಯೊಬ್ಬರು ಸಾಲಬಾಧೆ ತಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.
ನಗರದ ಎಂಆರ್ ಎಪ್ ಶೋರಂ ಮಾಲೀಕರು ಹಾಗಿದ್ದ ಸುರೇಶ್ (50) ಇವರು ಆಟೋ ಮೊಬೈಲ್ ನಲ್ಲಿ ಹೆಸರುವಾಸಿಯಾಗಿದ್ದರು ಆದರೆ ಕಳೆದ ತಡ ರಾತ್ರಿ ನಗರದ ಬಳ್ಳಾರಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ತನ್ನ ತಂದೆ ಸಾಮಾಧಿ ಮೇಲೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಇನ್ನೂ ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.