ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪದೇ ಪದೇ ಮೊಬೈಲ್ ಟವರ್ ಬ್ಯಾಟರಿ ಕಳವು
ಪ್ರಕರಣಗಳು ವರದಿಯಾಗುತ್ತಿದ್ದು,

ಈ ಇದರಿಂದ ವಿಶೇಷ ತಂಡ ರಚನೆ ಮಾಡಿದ ಚಳ್ಳಕೆರೆ ಉಪಾಧೀಕ್ಷಕರಾದ ಬಿಟಿ. ರಾಜಣ್ಣ ಮತ್ತು ತಳಕು ವೃತ್ತ ನಿರೀಕ್ಷಕರಾದ ಕೆ.
ಸಮೀವುಲ್ಲಾ ರವರ ಮಾರ್ಗದರ್ಶನದಲ್ಲಿ ರಾತ್ರಿ ಗಸ್ತನ್ನು ಹೆಚ್ಚಿಸಿನಿಗಾವಹಿಸಲು ಸೂಚಿಸಿದ ಮೇರೆಗೆ

ನ.30 ರಂದು ಪಿ ಎಸ್ ಐ-2 ರವರು ಅಬ್ಬೇನಹಳ್ಳಿ ಗ್ರಾಮದಲ್ಲಿ ರಾತ್ರಿ ಗಸ್ತು ಮಾಡುತ್ತಿರುವಾಗ ಮೊಬೈಲ್
ಟವರ್ ಬಳಿ ಅನುಮಾನಾಸ್ಪದವಾಗಿ ಕಂಡ ವ್ಯಕ್ತಿಗಳನ್ನು ವಿಚಾರಿಸಲಾಗಿ ಸಂಶಯಾಸ್ಪದ ಉತ್ತರವನ್ನು ನೀಡಿದ ಮೇರೆಗೆ
ಸದರಿಯವರನ್ನು ಠಾಣೆಗೆ ಕರೆತಂದು ವಿಚಾರ ಮಾಡಲಾಗಿ ಸದರಿಯವರು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಟವರ್
ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿರುವುದಾಗಿ ತಿಳಿಸಿದ್ದು, ಸದರಿಯವರು ಈ ಹಿಂದೆ ಠಾಣಾ ವ್ಯಾಪ್ತಿಯ
ತೊರೆಕೊಲಮ್ಮನಹಳ್ಳಿ ಮತ್ತು ಮಲ್ಲೂರಹಳ್ಳಿಗಳಲ್ಲಿ ಮೊಬೈಲ್ ಟವರ್ ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು
ಅಲ್ಲದೇ ಸದರಿ ಆರೋಪಿತರು ಚಿತ್ರದುರ್ಗ, ಹಾವೇರಿ, ವಿಜಯನಗರ, ದಾವಣಗೆರೆ, ಹಾಗೂ ತುಮಕೂರು ಜಿಲ್ಲೆಗಳಲ್ಲಿ
ಮೊಬೈಲ್ ಟವರ್ ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ಸದರಿ ಕಳ್ಳತನ ಮಾಡಿರುವ
ಬ್ಯಾಟರಿಗಳನ್ನು ಬೆಂಗಳೂರಿನ ದಾಸನಪುರ ವ್ಯಾಪ್ತಿಯ ಗುಜರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.

ಆರೋಪಿಗಳಾದ 1) ವೆಂಕಟೇಶ ಗುಡಿಹಳ್ಳಿ ಗ್ರಾಮ,
ಮಂಜುನಾಥ ದೊಡ್ಡಉಳ್ಳಾರ್ತಿ ಗ್ರಾಮ, ಎಸ್ ತಿಪ್ಪೇಸ್ವಾಮಿ ಗುಡಿಹಳ್ಳಿ ಗ್ರಾಮ, ಎಂ ದೊರೆ , ದೇವಣ್ಣನಪಾಳ್ಯ,
ದಾಸನಪುರ ಬೆಂಗಳೂರು. ರವರನ್ನು ದಸ್ತಗಿರಿ ಮಾಡಿದ್ದು.

ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದರಿ ಪ್ರಕರಣವನ್ನು ಭೇಧಿಸುವಲ್ಲಿ ಪಿ ಎಸ್ ಐ -1 ದೇವರಾಜ್, ಪಿ ಎಸ್ ಐ-2 ಶಿವಕುಮಾರ್ ಹಾಗೂ ಸಿಬ್ಬಂಧಿಗಳಾದ
ಹೆಚ್ ಸಿ-ಬಾಷಾ, ನಾರಾಯಾಣ, ಅಣ್ಣಪ್ಪ, ಶ್ರೀ ಹರಿ, ಶಿವಣ್ಣ,
ಅಂಜಿನಪ್ಪ, ಚಾಲಕ ಮಹೇಶ್ ಹಾಗು ಜಿಲ್ಲಾ ತಾಂತ್ರಿಕ ವಿಭಾಗದ ರಘು, ಸತೀಶ್, ಮತ್ತು ಶಿವರಾಜ್
ಕಾರ್ಯಾಚರಣೆ ತಂಡಕ್ಕೆ‌

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಧರ್ಮೇಂದ್ರ ಕುಮಾರ್ ಮೀನಾ,
ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಸ್ವಾಮಿ ಎಸ್ ಜೆ, ಇವರು ನಾಯಕನಹಟ್ಟಿ ಪೊಲೀಸ್
ಠಾಣೆಯ ಪೊಲೀಸರ ಕಾರ್ಯಕ್ಕೆ ಅಭಿನಂದಿಸಿರುತ್ತಾರೆ.

About The Author

Namma Challakere Local News
error: Content is protected !!