ಗಣಿತ ವಿಷಯದ ಕಲಿಕೆಗೆ ಪೂರಕ ಕಲಿಕಾ ಸಾಧನಗಳನ್ನು ಪೂರೈಸಿ : ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇವಾನಾಯ್ಕ್
ಚಳ್ಳಕೆರೆ : ಸರ್ಕಾರ ಶಾಲಾ ಹಂತದ ಮಕ್ಕಳಲ್ಲಿ ಗಣಿತ ವಿಷಯವೆಂದರೆ ಕಬ್ಬಿಣದ ಕಡಲೆ ಎಂಬ ಮನೋಭಾವವಿದೆ ಇದನ್ನು ಹೋಗಲಾಡಿಸಲು ಗಣಿತ ಕಲಿಕಾ ಆಂದೋಲನ, ಗಣಿತ ವಿಷಯದ ಕಲಿಕೆಗೆ ಪೂರಕ ಕಲಿಕಾ ಸಾಧನಗಳನ್ನು ಪೂರೈಸಿ ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯಲು ಪ್ರೇರೇಪಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇವಾನಾಯ್ಕ್ ಹೇಳಿದ್ದಾರೆ.
ಅವರು ತಾಲೂಕಿನ ಘಟಪರ್ತಿ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಕಲಿಕಾ ಆಂದೋಲನ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಶಾಲಾ ಹಂತದ ಮಕ್ಕಳಲ್ಲಿ ಗಣಿತದ ಮೂಲಕ್ರಿಯೆಗಳೂ ಸೇರಿದಂತೆ ಆದುನಿಕ ಕಾಲಘಟ್ಟಕ್ಕೆ ಹೊಂದಿಕೆಯಾಗುವAತೆ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸುವ ದೃಷ್ಟಿಯಿಂದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಾಗ ಮಾತ್ರ ಪರಿಣಾಕಾರಿಯಾಗಿತ್ತದೆ ಎಂದರು.
ಇನ್ನೂ ಮುಖ್ಯ ಶಿಕ್ಷಕರಾದ ಜೆ.ಎಂ.ಬಸವರಾಜ್ ಮಾತನಾಡಿ, ಶಾಲಾ ಹಂತದ ಮಕ್ಕಳಲ್ಲಿ ಗಣಿತದ ಮೂಲಕ್ರಿಯೆಗಳೂ ಸೇರಿದಂತೆ ಆದುನಿಕ ಕಾಲಘಟ್ಟಕ್ಕೆ ಹೊಂದಿಕೆಯಾಗುವAತೆ ವ್ಯವಹಾರಿಕ ಜ್ಞಾನವನ್ನು ಮಕ್ಕಳಲ್ಲಿ ಬೆಳೆಸಬೇಕು ವ್ಯಾವಹಾರಿಕ ವಿಷಯದಲ್ಲಿ ಮಕ್ಕಳು ಬಹು ಬೇಗ ಗ್ರಹಿಕೆಯಿಂದ ಗಣಿತದ ಮೂಲ ಕ್ರಿಯೆಗಳು ಸಾಫಲ್ಯವಾಗುತ್ತವೆ ಎಂದರು.
ಈದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ.ಟಿ.ಮಂಜುನಾಥ್, ಕೆ.ಬಿ.ರವಿಕುಮಾರ್, ನಿರಂಜನ್ ಗೌಡ, ಮುಖಂಡರಾದ ದಿನೇಶ್, ಪಿಡಿಒ ಹೊನ್ನುರಪ್ಪ, ಅಕ್ಷರ ಪೌಂಡೇಶನ್ ಜಿಲ್ಲಾ ವ್ಯವಸ್ಥಪಕ ರಘು, ಈಶ್ವರಪ್ಪ ಎಸ್ ಬಿ., ಸಿ ಆರ್ ಪಿ.ಶಿವಣ್ಣ ಕೆ, ಮುಖ್ಯ ಶಿಕ್ಷಕ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಮಂಜಣ್ಣ, ವಸತಿ ಪ್ರೌಢ ಶಾಲೆ ಮುಖ್ಯೋಣಪಾಧ್ಯಯರಾದ ಶಾಂತಮ್ಮ ಬಿ ಜಿ, ಶಾಲಾ ಮಕ್ಕಳು ಹಾಗೂ ಇತರರು ಇದ್ದರು.