ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ ; ಸ್ವಚ್ಚತೆಯ ಬಗ್ಗೆ ಹರಿವು ಮೂಡಿಸಿ ಶೌಚಾಲಯದ ಬಳಕೆಯ ಬಗ್ಗೆ ಹರಿವು ಮೂಡಿಸುವ ಇಲಾಖೆಗಳಿಗೆ ಹರಿವಿಲ್ಲದಂತಾಗಿದೆ ಎಂದು ಸಾರ್ವಜನಿಕರ ವಲಯದಲ್ಲಿ ದಟ್ಟವಾಗಿ ಹಬ್ಬಿದೆ
ಹೌದು.. ಚಳ್ಳಕೆರೆ ನಗರಸಭೆ ಹಾಗೂ ತಾಲೂಕು ಕಚೇರಿಗಳ ಸ್ಥಿತಿನೋಡಿದರೆ ತಿಳಿಯುತ್ತದೆ. ತಾಲೂಕಿನ ಯಾವುದೇ ಕಚೇರಿಗೆ ಹೊದರೆ ಸಾರ್ವಜನಿಕರಿಗೆ ಮಾತ್ರ ಕುಡಿಯುವ ನೀರಿನಿಂದ ಹಿಡಿದು ಶೌಚಾಲಯದವರೆಗೆ ವಂಚಿತರಾಗಿದ್ದಾರೆ.
ಸರಕಾರದ ಕೆಲಸಗಳ ನಿಮಿತ್ತ ಗ್ರಾಮೀಣ ಭಾಗದಿಂದ ದಿನನಿತ್ಯ ಬರುವ ನೂರಾರು ಸಾರ್ವಜನಿಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಗರದ ಹೃದಯ ಭಾಗವಾದ ತಾಲೂಕು ಕಛೇರಿ ಹಾಗೂ ಪೋಲೀಸ್ ಠಾಣೆಗೆ ದಿನ ನಿತ್ಯ ಆಗಮಿಸುವ ಸಾರ್ವಜನಿಕರ ಸ್ಥಿತಿಯಂತು ನೋಡಬಾರದಾಗಿದೆ, ಪೊಲೀಸ್ ಠಾಣೆಯ ಆವರಣದಲ್ಲಿ ಸುಸುಜ್ಜಿತವಾದ ಶೌಚಾಲಯ ನಿರ್ಮಿಸಿದ್ದರು, ಕೂಡ ಸರಿಯಾದ ನಿರ್ವಾಹಣೆ ಇಲ್ಲದೆ ಗೊಡೆಮೊರೆ, ಹಾಗೂ ಹೆಗ್ಗೆರಿ ತಾಯಮ್ಮ ಪ್ರೌಢ ಶಾಲಾ ಕಂಪೌಡ್ ಗೋಡೆಗೆ ಸಾರ್ವಜನಿಕರು ಶೌಚಕ್ಕೆ ಹೋಗುತ್ತಾರೆ ಇನ್ನೂ ಶಾಲಾ ಮಕ್ಕಳು ಗೊಬ್ಬು ವಾಸನೆಯಿಂದ ದಿನನಿತ್ಯ ಮೂಗು ಮುಚ್ಚಿಕೊಂಡು ಪಾಠ ಕೇಳುವ ಅನಿವಾರ್ಯವಿದೆ.
ಸರಕಾರದ ನಿಯಮಗಳ ಪ್ರಕಾರದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾದ ಮೂಲ ಭೂತ ಸೌಲಭ್ಯ ದೊರಕಿಸುವುದು ಆಧ್ಯ ಕರ್ತವ್ಯ ಆದರೆ ನಗರದ ಸು.31 ವಾರ್ಡಗಳಿದ್ದರು ಶೌಚಾಲಯಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು, ಇನ್ನೂ ನಗರಕ್ಕೆ ದಿನ ನಿತ್ಯ ಸರಿಸುಮಾರು 5ರಿಂದ 8 ಸಾವಿರ ಜನರು ಗ್ರಾಮೀಣ ಪ್ರದೇಶದಿಂದ ಬಂದುಹೋಗುತ್ತಾರೆ, ಆದರೆ ಇವರಿಗೆ ತಕ್ಕಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಬೇಕಾದ ನಗರಸಭೆ ನಿಲ್ಯರ್ಕ್ಷಕ್ಕೆ ಒಳಗಾಗಿದೆ.
ನೆಪ ಮಾತ್ರಕ್ಕೆ ಕೆಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಬಿಟ್ಟರೆ ಎಲ್ಲಿಯೂ ಕೂಡ ಸುಸಜ್ಜಿತವಾದ ಶೌಚಾಲಯ ಇಲ್ಲ, ಇನ್ನೂ ಇದ್ದರು ಕೂಡ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ, ಇದರ ಬಗ್ಗೆ ನಗಸರಭೆ ಪೌರಾಯುಕ್ತರು ಜಾಣತನದಿಂದ ನುಣಚಿಕೊಳ್ಳುತ್ತಾರೆ.
ಬಯಲು ಮುಕ್ತ ಶೌಚಾಲಯ ನಿರ್ಮಾಣ ಸರಕಾರದ ಗುರಿ ಅದಕ್ಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರ ಸ್ವಚ್ಚಗ್ರಾಮ, ಸ್ವಚ್ಚಭಾರತ, ಸಂಪೂರ್ಣ ನೈರ್ಮಲ್ಯ ಎಂಬ ಯೋಜನೆಗಳನ್ನು ಜಾರಿಗೆ ತಂದು ಬಯಲು ಮಲಮೂತ್ರ ವಿಸರ್ಜನೆ ಮುಕ್ತ ಮಾಡಲು ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಹಳ್ಳಹಿಡಿಯುತ್ತಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಹಳ್ಳಿಗಳಿಂದ ನಗರಕ್ಕೆ ಹಲವಾರು ಕೆಲಸ ಕಾರ್ಯಗಳ ನಿಮ್ಮಿತ್ತ ದಾವಿಸುವ ಸಾರ್ವಜನಿಕರ ಗೋಳು ಕೇಳುವವÀರಿಲ್ಲ, ಕುಡಿಯುನೀರು, ಶೌಚಾಲಯ, ವಿಶ್ರಾಂತಿ ಸ್ಥಳ, ಇಗೇ ನಗರದಲ್ಲಿ ಸುಸಜ್ಜಿತವಾದ ಸ್ಥಳಗಳು ಇಲ್ಲದೆ ಗ್ರಾಮಂತರ ಪ್ರದೇಶದಿಂದ ಬಂದ ಹಳ್ಳಿಹೈದರು ದಿನವೀಡಿ ಕಛೇರಿಗಳಿಗೆ ರೋಡ್ ರೋಡ್ ಹಲಿಯುವ ದುರ್ದೈವ ಇವರಾದಾಗಿದೆ.
ಜಿಲ್ಲೆಗೆ ದೊಡ್ಡದಾದ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಕಛೇರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಭದ್ರಾಮೇಲ್ದೆ ಕಛೇರಿ, ಲ್ಯಾಂಡ್ ಆರ್ಮಿ, ಎಪಿಎಂಸಿ ಕಛೇರಿ, ಪೊಲೀಸ್ಠಾಣೆ, ನಗರಸಭೆ, ಲೋಕೊಪಯೋಗಿ ಇಲಾಖೆ, ತಾಲೂಕು ಪಂಚಾಯಿತಿ, ಪ್ರವಾಸಿಮಂದಿರ, ಶಿಶುಅಭಿವೃದ್ದಿಇಲಾಖೆ, ಕ್ಷೇತ್ರಶಿಕ್ಷಾಣಾಧಿಕಾರಿಗಳ ಕಛೇರಿ, ಪೋಸ್ಟ್ ಆಪೀಸ್, ವಿವಿಧ ಬ್ಯಾಂಕ್ಗಳು, ಕ್ಷೇತ್ರ ಸಮನ್ವಯಧಿಕಾರಿಗಳ ಕಛೇರಿ, ಪಶು ಇಲಾಖೆ ಇಲಾಖೆ ಈಗೇ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಛೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಮೂಲ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ವಂಚಿತರಾಗಿದ್ದಾರೆ.
ಶೌಚಾಲಯ ಇದ್ದರೂ ನೀರು ಇಲ್ಲ :
1.ತಾಲೂಕು ಕಚೇರಿ ಆವರಣದಲ್ಲಿ ಶೌಚಾಲಯ ಇದ್ದು ಇಲ್ಲವಾಗಿದೆ, ಶೌಚಾಲಯ ಇದ್ದರೂ ವ್ಯವಸ್ಥೆ ಇಲ್ಲವಾಗಿದೆ, ಬಳಕೆಗೆ ನೀರು ಇಲ್ಲ, ಅದಗೆಟ್ಟ ಬಾತ್ರೂಮ್ಂ ಗಳು ಈಗೇ ಮೂಲಭೂತ ಸೌಲಭ್ಯ ಇಲ್ಲವಾಗಿ ಹಳ್ಳಿಗರು ಹಳೆಯ ಗೋಡೆಯ ಮೊರಿಗಳನ್ನು ಆಶ್ರಯ ಪಡೆಯವಂತಾಗಿದೆ. ಇಡೀ ದಿನ ಕಛೇರಿಗೆ ಬರುವ ಮಂದಿ ಸೌಲಭ್ಯಗಳಿಲ್ಲದೆ ಕಛೇರಿಗೆ ಶಾಪಹಾಕಿ ಹೊಗುತ್ತಾರೆ, ಈಗಲಾದರು ತಮ್ಮ ತಮ್ಮ ಇಲಾಖೆಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳು ಮೂಲ ಸೌಲಭ್ಯಗಳನ್ನು ಸರಿಪಡಿಸುವವರು ಎಂದು ಕಾದು ನೋಡಬೇಕಿದೆ.
@@@@@@@@@:
ದಿನನಿತ್ಯ ನಗರÀಕ್ಕೆ ಸಾವಿರಾರು ಮಂದಿ ಮಹಿಳಾ ವಿದ್ಯಾರ್ಥಿಗಳು, ಸಾರ್ವಜನಿಕರು, ಇಗೆ ಹಲವು ಮಂದಿ ಅನ್ಯ ಕಾರ್ಯಗಳತ್ತಾ ದಾವಿಸುವ ಮಂದಿಗೆ ಸರಿಯಾದ ಶೌಚಾಲಯ ಇಲ್ಲದೆ ಜಲಬಾಧೆ ತಾಳಲಾರದೆ ಹನಿ ನೀರು ಕುಡಿಯಲು ಹಿಂದೆಟು ಹಾಕುವ ಹೆಣ್ಣು ಮಕ್ಕಳ ಸ್ಥಿತಿ ಚಿಂತಜನಕವಾಗಿದೆ. ಈಗಲಾದರೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸ್ಥಳೀಯ ಸಂಸ್ಥೆಯಾದ ನಗರಸಭೆಗೆ ಹಾಗೂ ವಿವಿಧ ಇಲಾಖೆಗಳ ಬಗ್ಗೆ ತನಿಕೆ ಮಾಡಿ ಸೌಲಭ್ಯಗಳ ದುರಸ್ತಿಗೆ ಆಗ್ರಹ ಪಡಿಸಬೇಕು
—- ಸೋಮಗುದ್ದು ರಂಗಸ್ವಾಮಿ, ಅಖಂಡ ರಾಜ್ಯ ರೈತ ಸಂಘ ಚಳ್ಳಕೆರೆ
2.ಸರ್.ಸುಮಾರು 30ಕಿಲೋ ಮೀಟರ್ ದೂರದಿಂದನಿAದ ತಾಲೂಕು ಕಛೇರಿಗೆ ನಮ್ಮ ಅಮ್ಮ ಅಣ್ಣನ ಜೊತೆ ಅನ್ಯಕಾರ್ಯ ನಿಮ್ಮಿತ್ತ ಬಂದಿವಿ. ಆದರೆ ಶೌಚಕ್ಕೆ ಹೋಗಬೇಂದರೆ ಇಲ್ಲ ಶೌಚಾಲಯ ಇಲ್ಲದೆ ನೀರುಕುಡಿಯಲು ಹಿಂದೇಟು ಹಾಕುವ ಪರಸ್ಥಿತಿ ಇದೆ, ಪುರುಷರು ಹೇಗಾದರೂ ಮಾಡಿ ನಿತ್ಯಕರ್ಮ ಮುಗಿಸುತ್ತಾರೆ ಆದರೆ ನಾವು ಮಹಿಳೆಯರು ಸರ್..ನಾವು ಹೆಲ್ಲಿಗೆ ಹೋಗೊದು, ಪೊಲೀಸ್ ಠಾಣೆ ಮುಂದೆ ಇರುವ ಶೌಚಾಲಯ ನೀರಿಲ್ಲದೆ ಗೊಬ್ಬು ವಾಸನೆ ಬೀರುತ್ತದೆ ಇದರಿಂದ ತುಂಬಾ ಸಮಸ್ಯೆಯಾಗಿದೆ, ಇದರ ಬಗ್ಗೆ ಸ್ಥಳಿಯ ಶಾಸಕರು, ಜಿಲ್ಲಾಧಿಕಾರಿಗಳು ಮೊದಲ ಆಧ್ಯತೆಯಾಗಿ ಶೌಚಾಲಯ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಇಲ್ಲವಾದರೆ ನಮ್ಮಂತ ಮಹಿಳೆಯರ ಪಾಡೆನು..?– ನೊಂದ ಗ್ರಾಮೀಣ ಪ್ರದೇಶದ ಮಹಿಳೆ
ಪೋಟೋ ಚಳ್ಳಕೆರೆ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಇರುವ ನಗರಸಭೆ ವ್ಯಾಪ್ತಿಯ ಶೌಚಾಲಯ ದುರಸ್ತಿಯಲ್ಲಿರುವುದು.