ಸತತ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ನಮ್ಮ ಸಾಹಿತಿಗಳು, ಚಿಂತಕರು ಚಳುವಳಿ ಮೂಲಕ ಕನ್ನಡ ಭಾಷೆಯನ್ನಾಡುವ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿ ಇಂದು ತಾಯ್ನಾಡ ಭಾಷೆಯನ್ನಾಗಿ ಮಾಡಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಜಿ.ಟಿ.ಗೋವಿಂದರಾಜು ಅಭಿಪ್ರಾಯಪಟ್ಟರು.
ಅವರು ನಗರದ ಚಿತ್ರದುರ್ಗ ರಸ್ತೆಯ ವಾಲ್ಮೀಕಿ ವೃತ್ತದ ಪಕ್ಕದಲ್ಲಿ ತರಾಸು ಕನ್ನಡ ಸೇನೆ ವತಿಯಿಂದ ಆಯೋಜಿಸಿದ್ದ 12ನೇ ಕನ್ನಡ ರಾಜ್ಯೋತ್ಸವ ಉದ್ಘಾಟನೆಯನ್ನು ನೆರೆವೆರಿಸಿ ಮಾತನಾಡಿದರು. ನಾಡು ನುಡಿಯನ್ನು ಗೌರವಿಸುವ ಮೂಲಕ ನಮ್ಮನ್ನು ನಾವು ಗೌರವಿಸಿಕೊಳ್ಳೋಣ. ನಮ್ಮ ಗಡಿಗ್ರಾಮಗಳಲ್ಲಿ ಅನ್ಯ ಭಾಷೆಯರಿದ್ದರೂ ಸಹ ಅವರು ಕನ್ನಡವನ್ನು ಗೌರವಿಸಂತಾಗಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಎಂ.ಶಿವಮೂರ್ತಿ ಮಾತನಾಡಿ, ಕನ್ನಡ ಎನ್ನುವುದು ಕೇವಲ ನವೆಂಬರ್ ತಿಂಗಳಲ್ಲಿ ಆಚರಣೆ ಮಾಡಿ ಕೈಬಿಡುವಂತಾಗಬಾರದು, ಅದು ನಿರಂತರ ಪ್ರಕ್ರಿಯೆಗಳ ಮೂಲಕ ನಡೆಯಬೇಕು, 2008ರಲ್ಲಿ ಶಾಸ್ತಿçಯ ಸ್ಥಾನಮಾನ ಸಿಕ್ಕಿತಾದರು, ಅದಕ್ಕೆ ತಕ್ಕಂತೆ ಇನ್ನು ಹೆಚ್ಚಿ ಸ್ಥಾನಮಾನ ಸಿಗಬೇಕು. 1956 ನ.1 ರಂದು ಡಿ.ದೇವರಾಜು ಅರಸುರವರು ಮೈಸೂರನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು ಎಂದರು.
ನಮ್ಮ ರಾಜ್ಯ ನದಿ, ಗಡಿ, ಭಾಷೆ ಈಗೇ ಹಲವು ವಿವಾವದಗಳ ಮಧ್ಯೆ ತನ್ನ ಭಾಷೆಯನ್ನು ಉಳಿಸಿ ಬೆಳೆಸಿದೆ. ಕೇವಲ ಕನ್ನಡವನ್ನು ಪ್ರಚಾರ ಪಡಿಸುವುದರ ಮೂಲಕ ಹಲ್ಲದೆ, ಉದ್ಯೋಗ ಹಾಗೂ ಅನ್ನದ ಪ್ರಶ್ನೆಯಾಗಿ ಉಳಿದಲ್ಲಿ ಮಾತ್ರ ಕನ್ನಡವನ್ನು ಉಳಿಸಬಹುವುದು ಎಂದರು.
ಈ ಸಂಧರ್ಭದಲ್ಲಿ ಎಂ.ಶಿವಮೂರ್ತಿ, ಪೂಜಾರಿ ಪರಸಪ್ಪ, ಕನ್ನಡ ಪ್ರಾಧ್ಯಪಕರು, ಶಾಲಾ ಮಕ್ಕಳು ಇತರ ಕನ್ನಡ ಅಭಿಮಾನಿಗಳು ಹಾಗೂ ಇತರರಿದ್ದರು.