ಪರಶುರಾಮಪುರ
ಆಂಧ್ರ ಗಡಿಯ ಜಾಜೂರು ಗ್ರಾಮದ ಸಹಿಪ್ರಾ ಶಾಲಾ ಏಳನೇ ತರಗತಿಯ ವಿದ್ಯಾರ್ಥಿ ಟಿ ಅನಿಲ್ಕುಮಾರ ರಾಷ್ಟçಮಟ್ಟದ ಕಿರಿಯ ಬಾಲಕರ ಖೋ ಖೋ ಸ್ಪರ್ಧೆಗೆ ಆಯ್ಕೆ – ಜಾಜೂರು ಗ್ರಾಮದೆಲ್ಲೆಡೆ ಹರ್ಷ
ಆಂಧ್ರ ಗಡಿಯ ಯಾವುದೇ ಮೂಲ ಸೌಕರ್ಯವಿಲ್ಲದ ಗಡಿಯ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ಸಾಧನೆ ಮೆಚ್ಚುವಂತಹುದು ಎಂದು ಜಾಜೂರು ಗ್ರಾಪಂ ಮಾಜಿ ಸದಸ್ಯ ಪ್ರಗತಿಪರ ರೈತ ಜೆ ಎಲ್ ಶ್ರೀನಿವಾಸ ಹೇಳಿದರು
ಸಮೀಪದ ಜಾಜೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ಟಿ ಅನಿಲ್ಕುಮಾರ ಹದಿನಾಲ್ಕು ವರ್ಷದೊಳಗಿನ ಕಿರಿಯ ಬಾಲಕರ ರಾಷ್ಟç ಮಟ್ಟದ ಖೋ ಖೋ ಸ್ಪರ್ಧೆಗೆ ಆಯ್ಕೆಯಾದ ಹಿನ್ನೆಲೆ ಗ್ರಾಮಸ್ಥರು ಸೋಮವಾರ ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಶಾಲಾ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು
ಪ್ರಸಕ್ತ ಸಾಲಿನಲ್ಲಿ ಜಾಜೂರು ಗ್ರಾಮದಲ್ಲಿ ಪರಶುರಾಮಪುರ ಹೋಬಳಿ ವಲಯ-1 ರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಗ್ರಾಮಸ್ಥರ ಸಹಕಾರದಲ್ಲಿ ಆಯೋಜಿಸಿ ಅತ್ಯುತ್ತಮವಾಗಿ ಕ್ರೀಡಾಕೂಟವನ್ನು ನಡೆಸಲಾಗಿತ್ತು ಈ ವೇಳೆ ಗ್ರಾಮದ ಬಾಲಕ ಖೋ ಖೋ ಪಂದ್ಯಾವಳಿಯಲ್ಲಿ ಹೋಬಳಿ ತಾಲೂಕು ಮತ್ತು ಜಿಲ್ಲಾ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕಾರಣ ಈಗ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮೂರಿಗೆ ಹಿರಿಮೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು
ಇದೇ ವೇಳೆ ಗ್ರಾಮದ ಸಮಾನ ಮನಸ್ಕ ಕ್ರೀಡಾಭಿಮಾನಿಗಳು ಶಾಲಾ ಸಮಿತಿಯವರು ಗ್ರಾಪಂ ಸದಸ್ಯರು ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿ ಟಿ ಅನಿಲ್ಕುಮಾರ ಅವರನ್ನು ಪುರಸ್ಕರಿಸಲಾಯಿತು
ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಜೆ ಎಲ್ ಶ್ರೀನಿವಾಸ, ಜೆ ಎಚ್ ಮಾರುತಿ, ಶಾಲಾ ಸಮಿತಿಯ ಅಧ್ಯಕ್ಷ ಎಚ್ ಸಣ್ಣಪ್ಪ, ಸದಸ್ಯರಾದ ಚಲೆಮೇಶ, ಹನುಮಂತರಾಯ, ಮಂಜುನಾಥ, ತಿಪ್ಪೇಸ್ವಾಮಿ, ಕರಿಯಣ್ಣ ಮುಖ್ಯಶಿಕ್ಷಕ ಕರಿಯಣ್ಣ, ಶಿಕ್ಷಕರಾದ ಈರಣ್ಣ, ಮಂಜಣ್ಣ, ಬಸವರಾಜು, ಶಾಲಾ ಸಮಿತಿಯ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು
ಪೋಟೋ (ಪಿಆರ್ಪುರ ಖೋ ಖೋ 27)
ಪರಶುರಾಮಪುರ ಸಮೀಪದ ಜಾಜೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ಟಿ ಅನಿಲ್ಕುಮಾರ ಹದಿನಾಲ್ಕು ವರ್ಷದೊಳಗಿನ ಕಿರಿಯ ಬಾಲಕರ ರಾಷ್ಟç ಮಟ್ಟದ ಖೋ ಖೋ ಸ್ಪರ್ಧೆಗೆ ಆಯ್ಕೆಯಾದ ಹಿನ್ನೆಲೆ ಗ್ರಾಮಸ್ಥರು ಸೋಮವಾರ ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಶಾಲಾ ಶಿಕ್ಷಕರನ್ನು ಅಭಿನಂದಿಸಿದರು ಗ್ರಾಪಂ ಮಾಜಿ ಸದಸ್ಯ ಜೆ ಎಲ್ ಶ್ರೀನಿವಾಸ, ಜೆ ಎಚ್ ಮಾರುತಿ, ಶಾಲಾ ಸಮಿತಿಯ ಅಧ್ಯಕ್ಷ ಎಚ್ ಸಣ್ಣಪ್ಪ, ಸದಸ್ಯರಾದ ಚಲೆಮೇಶ, ಹನುಮಂತರಾಯ, ಮಂಜುನಾಥ, ತಿಪ್ಪೇಸ್ವಾಮಿ, ಕರಿಯಣ್ಣ ಮುಖ್ಯಶಿಕ್ಷಕ ಕರಿಯಣ್ಣ, ಶಿಕ್ಷಕರಾದ ಈರಣ್ಣ, ಮಂಜಣ್ಣ, ಬಸವರಾಜು, ಶಾಲಾ ಸಮಿತಿಯ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು