ಚಳ್ಳಕೆರೆ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ರವರ ನೇತೃತ್ವದಲ್ಲಿ ಇದೇ ತಿಂಗಳು ನವೆಂಬರ್ ಎರಡರಂದು ಕನ್ನಡ ಶಾಲೆಗಳ ವಾಸ್ತವ ಅನಾವರಣ ಅಭಿಯಾನ ಕಾರ್ಯಕ್ರಮ ಚಾಲನೆಗೊಂಡಿದ್ದು ಇಡೀ ಕರ್ನಾಟಕದಲ್ಲಿ ನಡೆಯುತ್ತಿಜe, ಆದ್ದರಿಂದ ನವೆಂಬರ್ 11ರಂದು ನಗರಂಗೆರೆ ಹಾಗೂ ಗೋಪನಹಳ್ಳಿ ಸರ್ಕಾರಿ ಕನ್ನಡ ಶಾಲೆಗಳ ವಾಸ್ತವ ಸ್ಥಿತಿಯನ್ನು ನಮ್ಮ ಪಕ್ಷದ ಚೆಕ್‌ಲಿಸ್ಟ್ ಪ್ರಕಾರ ಲೋಪ ದೋಷಗಳನ್ನು ಪಟ್ಟಿ ಮಾಡಿದ್ದೇವೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ . ಸಿ ನಗರಂಗೆರೆ ಹೇಳಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ = ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದರು.
ಬಹುತೇಕ ಕನ್ನಡ ಶಾಲೆಗಳು ಮೂಲಭೂತ ಸೌಲಭ್ಯಗಳು ವಂಚಿತವಾಗಿವೆ ನಗರಂಗೆರೆ ಶಾಲೆಯಲ್ಲಿ ಬಹು ವರ್ಷಗಳಿಂದ ಮಕ್ಕಳಿಗೆ ಹಾಗೂ ಅಡುಗೆ ಮಾಡಲು ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಕಾಂಪೌAಡ್ ವ್ಯವಸ್ಥೆ ಇಲ್ಲದಿರುವುದು ಎಲ್ಲಾ ಕಟ್ಟಡಗಳು ಕಳಪೆ ಮಟ್ಟದಲ್ಲಿ ಕೂಡಿರೋದು ಮತ್ತು ಗೋಪನಹಳ್ಳಿ ಶಾಲೆಯಲ್ಲಿ ತರಗತಿಯ ಕೊಠಡಿಗಳು ಸಂಪೂರ್ಣವಾಗಿ ಸೀಟುಗಳು ಒಡೆದು ಹೋಗಿರುತ್ತದೆ.
ಮಳೆಗಾಲ ಸಂದರ್ಭದಲ್ಲಿ ಎಲ್ಲಾ ಸೋರುತ್ತದೆ ಹಾಗೂ ಕಿಟಕಿ ಬಾಗಿಲುಗಳು ಎಲ್ಲಾ ಹಾಳಾಗಿರುತ್ತದೆ ಮತ್ತು ಸರಿಯಾದ ರೀತಿಯ ಕಾಂಪೌAಡ್ ವ್ಯವಸ್ಥೆ ಇರುವುದಿಲ್ಲ ಹೀಗೆ ಹಲವಾರು ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇವೆ ಹಾಗೂ ಕನ್ನಡ ಶಾಲೆ ಉಳಿಸಬೇಕು ಹಾಗೂ ಬೆಳೆಸಬೇಕು, ಕನ್ನಡ ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಬೇಕಾಗಿ ಇನ್ನು ಪೂರಕವಾಗಿ ಅಂದರೆ ಗ್ರಂಥಾಲಯ ಈಗಿನ ಆಧುನಿಕ ವ್ಯವಸ್ಥೆಗೆ ತಕ್ಕಂತೆ ಕಂಪ್ಯೂಟರ್ ತರಗತಿ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್ ಮಕ್ಕಳಿಗೆ ಉಪಯೋಗವಾಗುವಂತೆ ಸರ್ಕಾರದಿಂದ ಬರುವಂತಹ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಹಾಗೂ ಸರ್ಕಾರಗಳು ಕೇವಲ ಕನ್ನಡ ಶಾಲೆಯ ಬಗ್ಗೆ ಭಾಷಣ ಮಾಡಿದರೆ ಸಾಲದು ಕನ್ನಡ ಶಾಲೆಗಳನ್ನು ಉಳಿಸುವುದಕ್ಕೆ ಹಾಗೂ ಹಣವನ್ನು ಮೀಸಲಿಟ್ಟಿರುವ ಹಣವನ್ನು ಸದುಪಯೋಗಪಡಿಸುವುದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ ಸಿ ನಗರಂಗೆರೆ, ಜಿಲ್ಲಾ ಕಾರ್ಯದರ್ಶಿ ಬಾಲರಾಜ್ ಎಸ್ ಯಾದವ್, ತಾಲೂಕು ಮುಖಂಡರಾದ ಹಾಗೂ ಪರಾಜಿತ ಅಭ್ಯರ್ಥಿಯಾದ ಬೋಜರಾಜ ಸಿ, ಝಬಿಉಲ್ಲಾ ಅವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!