ಬರಗಾಲದಿಂದ ತತ್ತರಿಸಿದ ರೈತರಿಗೆ ಬ್ಯಾಂಕ್ ನಿಂದ ನೋಟಿಸ್..!
ರೈತ ಸಂಘದಿAದ ಪ್ರತಿಭಟನೆ : ಬರಗಾಲ ಘೋಷಣೆಯಾದರೂ ಸಾಲ ವಸೂಲಾತಿ ನಿಂತಿಲ್ಲ : ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಸರಕಾರದ ವಿರುದ್ಧ ಕಿಡಿ.
ಚಳ್ಳಕೆರೆ : ಹಳ್ಳಿಗಳಲ್ಲಿ ಜನರು ಬರಗಾಲದಿಂದ ತತ್ತರಿಸಿ ಊರು ಖಾಲಿ ಮಾಡುತ್ತಿದ್ದಾರೆ, ಜೀವನಕ್ಕಾಗಿ ರೈತರು ಕೂಲಿಕಾರರು ಹೊಟ್ಟೆ ಹೊರೆಯಲು ಪಟ್ಟಣದತ್ತ ವಲಸೆ ಹೋಗುವಂತ ಪರಸ್ಥಿತಿ ನಿರ್ಮಾಣವಾಗಿದೆ ಆದರೆ ಇಂತಹ ಸಂಧರ್ಭದಲ್ಲಿ ಬ್ಯಾಂಕ್‌ನವರು ರೈತರ ಸಾಲ ವಸೂಲಿಗೆ ಲಾಯರ್ ಮೂಲಕ ನೋಟೀಸ್ ನೀಡಿ ರೈತರನ್ನು ಹೆದರಿಸಿ ಸಾಲ ವಸೂಲಿ ಮಾಡುತ್ತಿರುವ ಬ್ಯಾಂಕ್‌ಗಳ ವಿರುದ್ಧ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ರೈತರ ಆತ್ಮಹತ್ಯೆ ಅಂತಹ ಪ್ರಕರಣಗಳನ್ನು ತಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಚಳ್ಳಕೆರೆ ತಾಲ್ಲೂಕು ಕಛೇರಿ ಮುಂದೆ ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಬ್ಯಾಂಕ್ ನವರಿಂದ ಮುಕ್ತಿ ಕಾಣಿಸಬೇಕು ಎಂದು ತಹಶೀಲ್ದಾರ್ ರೇಹಾನ್ ಪಾಷ ಮನವಿ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸಿದರು.