ಚಳ್ಳಕೆರೆ/ತಳಕು : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆಯೇ..? ರೈತರಿಗೆ ಬೆಳೆ ಪರಿಹಾರ ನೀಡಲು ಏಕೆ ವಿಳಂಬ..! ಎಂದು ಬಿಜೆಪಿಯ ಮಾಜಿ ಕಂದಾಯ ಸಚಿವ ಹಾಗು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಅವರು ಭಾನುವಾರ ತಳಕು ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ ರಾಜ್ಯ ಸರ್ಕಾರ 192 ತಾಲೂಕುಗಳನ್ನು ಬೆಳೆ ಪರಿಹಾರ ನೀಡಲು ಘೋಷಣೆ ಮಾಡಿದೆ ಆದರೆ ಇದುವರೆಗೆ ಯಾವುದೇ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ ಅಧಿಕಾರಿಗಳು ಸಮಿಕ್ಷೆ ಮಾಡಿದ್ದೇವೆ ಎಂದಿದ್ದಾರೆ ಆದರೆ ಸಮೀಕ್ಷೆ ವರದಿ ತಗೊಂಡು ಸರ್ಕಾರ ರೈತರ ಅಕೌಂಟಿಗೆ ಡಿಬಿಟಿ ಮಾಡಬೇಕಾಗಿತ್ತು ಇನ್ನೂ ಮಾಡಿಲ್ಲ ಕಳೆದ ಬಾರಿ ನಾನು ಇಂತಹ ಸಂದರ್ಭದಲ್ಲಿ ನಮ್ಮ ಸರ್ಕಾರ ಇದ್ದಾಗ ನಾನು ಕಂದಾಯ ಸಚಿವನಾಗಿದ್ದಾಗ ಬೆಳೆ ಹಾನಿಯಾದಾಗ ಎಲ್ಲಾ ರೈತರಿಗೂ ಒಂದು ತಿಂಗಳ ಒಳಗಾಗಿ ಪರಿಹಾರವನ್ನು ನೀಡಿದ್ದೇವೆ.
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಆದ್ದರಿಂದ ಮಂತ್ರಿಗಳು ಶಾಸಕರು ಹೊರಗೆ ಬರುತ್ತಿಲ್ಲ.ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನು ಎರಡು ವರ್ಷ ಯಾರಿಗೂ ಒಂದು ಪೈಸೆ ಕೊಡಬೇಡಿ ಅಂತ ಹೇಳಿದ್ದಾರೆ ಎಂದು ಸರಕಾರದ ವಿರುದ್ದ ವಾಗ್ದಳಿ ನಡೆಸಿದರು.
ರೈತರಿಗೆ ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ, ಕಳೆದ ಆರು ತಿಂಗಳಿನಿAದ ಬಿಪಿಎಲ್ ಕಾರ್ಡ್ ಯಾರಿಗೂ ಕೊಡುತ್ತಿಲ್ಲ, ರೈತರ ಪಂಪ್ಸೆಟ್‌ಗಳಿಗೆ ಸುಮಾರು 2:30 ಲಕ್ಷ ಅರ್ಜಿ ಬಂದಿವೆ ಎಂಬ ಮಾಹಿತಿ ಇದೆ. ಇದುವರೆಗೆ ಯಾವ ರೈತರಿಗೆ ಪರ್ಮಿಷನ್ ಕೊಡ್ತಾ ಇಲ್ಲ ಇನ್ನು ಮುಂದಿನ ದಿನಗಳಲ್ಲಿ ವಿಧಾನಸಭಾ ಅಧಿವೇಶನ ಬರುತ್ತೆ ಅಲ್ಲಿ ರೈತರಿಗೆ ಬಡವರಿಗೆ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಸುಮಾರು 85 ಜನ ಶಾಸಕರು ಸೇರಿ ಅಧಿವೇಶನದಲ್ಲಿ ಹೋರಾಟವನ್ನು ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಜಿಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಜಯಪಾಲಯ್ಯ, ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಲ್ಲಿಕಾರ್ಜುನ್, ರೈತ ಮೋರ್ಚ ಜಿಲ್ಲಾಧ್ಯಕ್ಷ ಟಿ.ವೆಂಕಟೇಶ ಯಾದವ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಪಿ.ಶಿವಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಅಬ್ಬೇನಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಶಂಕರಸ್ವಾಮಿ, ಮಲ್ಲೂರಹಳ್ಳಿ ಮಲ್ಲಯ್ಯ, ಗುಂತಕೋಲಮ್ಮನಹಳ್ಳಿ ಜೆಸಿಬಿ.ತಿಪ್ಪೇಸ್ವಾಮಿ, ತೊರೆಕೋಲಮನಹಳ್ಳಿ ಮಂಜಣ್ಣ, ಸೇರಿದಂತೆ ಇದ್ದರು ಇದ್ದರು