ಚಳ್ಳಕೆರೆ: ರಾಜ್ಯದಲ್ಲಿ ಬರಗಾಲ ಆವರಿಸಿದ್ದು ಬಯಲು ಸೀಮೆಯಲ್ಲಿ ಬರ ಇನ್ನಷ್ಟು ತಾಂಡವಾಡುತ್ತಿದ್ದು, ತಮ್ಮ ಬೆಳೆಗಳ ವಿಫಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಕಂದಾಯ ಸಚಿವರು ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದರು.
ಅವರು ತಾಲ್ಲೂಕಿನ ಕಸಬಾ ಹೊಬಳಿಯ ಬುಡ್ನಹಟ್ಟಿ ಗ್ರಾಮದ ಲಕ್ಷಿö್ಮಬಾಯಿ ಎಂಬುವವರ ಶೇಂಗಾ ಹೊಲಕ್ಕೆ ಬರವಿಕ್ಷಣೆಯ ಅಂಗವಾಗಿ ಬೇಟಿ ನೀಟಿ ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳು ಬರವನ್ನು ಸರಿಯಾಗಿ ವಿಕ್ಷಿಸಿಲ್ಲಾ, ರೈತರ ಸಂಕಷ್ಟಗಳ ಬರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲಾ. ಬೆಂಗಳೂರಿನಲ್ಲಿ ಕುಳಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಬರವಿಕ್ಷಣೆ ವರದಿಯನ್ನು ಸರ್ಕಾರಕ್ಕೆ ನೀಡುತ್ತೆವೆ, ಮತ್ತು ವಿಧಾನಸಭೆ ಅಧಿವೇಷನದಲ್ಲಿ ರೈತರ ಸ್ಥಿತಿಗತಿ ಬಗ್ಗೆ ಮಾತನಾಡುತ್ತೆನೆ ಎಂದರು.
ಸರ್ಕಾರ ವಿನಾಃ ಕಾಲಹರಣ ಮಾಡುತ್ತಿದೆ, ರಾಜ್ಯದಲ್ಲಿ ಕೊಟ್ಟಿರುವ ವರದಿಗೆ ಸ್ಪಂಧಿಸಿ ಕೇಂದ್ರದ ಪರಿಹಾರ ಕೋಡಿಸುತ್ತೆವೆ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿಲ್ಲ, ಎಲ್ಲಾ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಪರಿಹಾರ ಕೊಡಲು ಸಿದ್ದವಾಗಿದೆ, ಕಳೆದ ಬಾರಿ ರಾಜ್ಯದಲ್ಲಿ ನಮ್ಮ ಬಿಜೆಪಿ ಸರಕಾರ ಇದ್ದಾಗ ಕೇಂದ್ರ ಸರಕಾರದ ಅನುದಾನ ಬರುವರೆಗೆ ಕಾದು ಕುಳಿತುಕೊಳ್ಳದೆ ಎರಡು ಪಟ್ಟು ಪರಹಾರ ನೀಡಿದ್ದೆವೆ ಆದರೆ ಈಗೀನ ಸರಕಾರ ಕೇಂದ್ರ ಸರಕಾರದ ಮೇಲೆ ಬೊಟ್ಟು ಮಾಡುವುದು ಬಿಟ್ಟು ನಿಮ್ಮ ಬರ ಪರಿಹಾರ ನೀಡಿ ರೈತರ ಸಂಕಷ್ಟಗಳನ್ನು ಮೊದಲು ಆಲಿಸಿ ಎಂದು ರಾಜ್ಯ ಸರಕಾರದ ವಿರುದ್ದ ಚಾಟಿ ಬೀಸಿದರು.
ಪ್ರಸ್ತುತ ಶೇಂಗಾ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ ರೈತರು ಬಿತ್ತಿದ ಬಿತ್ತನೆ ಬೀಜ ಕೂಡ ಮರು ಪಾವತಿಯಾಗುವುದಿಲ್ಲ ಆದ್ದರಿಂದ ರೈತರ ಸಂಕಷ್ಟಕ್ಕೆ ದಾವಿಸಬೇಕು ಸಂಪುಟದಲ್ಲಿ ಮೊದಲ ಅಜೆಂಡವಾಗಿ ರೈತರ ಪರ ಧ್ವನಿ ಎತ್ತಲಾಗುವುದು ಎಂದರು.
@@@@@ :
ಬುಡಕಟ್ಟು ಜನಾಂಗವೇ ಹೆಚ್ಚು ವಾಸಮಾಡುವ ಬಯಲು ಸೀಮೆಯ ಚಳ್ಳಕೆರೆ ಭಾಗದಲ್ಲಿ ಅತೀ ಹೆಚ್ಚು ಗೋಸಂರಕ್ಷಕರು ಇದ್ದಾರೆ, ಇನ್ನೂ ದೇವರ ರಾಸುಗಳಿಗೆ ಮೇವು ಹೊದಗಿಸುವ ಕಾರ್ಯಕ್ಕೆ ಸರಕಾರ ಬದ್ದವಾಗಬೇಕು ಆದರೆ ಬರಗಾಲದಿಂದ ಗೋವುಗಳೂ ಮೇವು ನೀರಿಲ್ಲದ ಸ್ಥಿತಿ ತಲುಪಿವೆ, ಆದ್ದರಿಂದ ಕ್ಯಾಬಿನೆಟ್‌ನಲ್ಲಿ ದೇವರ ರಾಸುಗಳಿಗೆ ವರ್ಷದ ಉದ್ದಕ್ಕೂ ಮೇವು ನೀಡುವಂತೆ ಧ್ವನಿಎತ್ತಲಾಗುವುದು.—ವಿರೋಧ ಪಕ್ಷದ ನಾಯಕ ಆರ್.ಅಶೋಕ್
ಈ ಸಂಧರ್ಭದಲ್ಲಿ ಚಿತ್ರದುರ್ಗ ಮಾಜಿ ಶಾಸಕರಾದ ಜೆ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಶಿವಪುತ್ರಪ್ಪ, ವೆಂಕಟೇಶ್ ಯಾದವ್, ಬಿಜೆಪಿ ಮುಖಂಡರಾದ ಮಂಜುನಾಥ್, ಮಲ್ಲಿಕಾರ್ಜುನಾ, ಎವಿಬಿಪಿ ಬಾಲು, ಇತರರು ಇದ್ದರು.
ಪೋಟೋ1. ಚಳ್ಳಕೆರೆ ತಾಲ್ಲೂಕಿನ ಕಸಬಾ ಹೊಬಳಿಯ ಬುಡ್ನಹಟ್ಟಿ ಗ್ರಾಮದ ಲಕ್ಷಿö್ಮಬಾಯಿ ಎಂಬುವವರ ಶೇಂಗಾ ಹೊಲಕ್ಕೆ ಬರವಿಕ್ಷಣೆಯ ಅಂಗವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬೇಟಿ ನೀಡಿ ಬರ ವೀಕ್ಷಣೆ ಮಾಡಿದರು.
2..ಬರಕ್ಕೆ ತುತ್ತಾಗಿ ಒಣಗಿ ನಿಂತ ಶೇಂಗಾ ಹೊಲಕ್ಕೆ ಆರ್.ಅಶೋಕ್ ಬೇಟಿ ನೀಡಿ ವಿಕ್ಷಣೆ ಮಾಡಿದರು.
3..ಬರಕ್ಕೆ ತುತ್ತಾಗಿ ಕಾಯಿ ಕಟ್ಟದ ತೊಗರಿ ಹೊಲಕ್ಕೆ ಆರ್.ಅಶೋಕ್ ಬೇಟಿ ನೀಡಿ ವಿಕ್ಷಣೆ ಮಾಡಿದರು.