ಚಳ್ಳಕೆರೆ : ರಾಜ್ಯದಲ್ಲಿ ಬರಘೋಷಣೆಯಾದ ನಂತರ ಹೆಚ್ಚುತ್ತುಕೊಂಡ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಬರ ಪರಸ್ಥಿತಿಗೆ ಸಂಬAದಿಸಿದ ಕಾರ್ಯಗಳನ್ನು ಚುರುಕುಗೊಳಿಸಿದೆ.
ಅದರಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಸುಮಾರು ನಾಲ್ಕು ಗೋಶಾಲೆಗಳನ್ನು ತೆರೆಯಲು ತಾಲೂಕು ಆಡಳಿತ ಸಿದ್ದವಾಗಿದೆ.
ಅದರಂತೆ ಈಡೀ ರಾಜ್ಯದಲ್ಲಿ ಸರಿ ಸುಮಾರು ಬರಗಾಲ ಆವರಿಸಿರುವುದು ಈ ಚಳ್ಳಕೆರೆ ತಾಲೂಕಿನಲ್ಲಿ ಅತೀ ಕಡಿಮೆ ಮಳೆ ಬಿಳುವು ಈ ಪ್ರದೇಶದಲ್ಲಿ ಗೋವುಗಳ ರಕ್ಷಣೆ ಹಾಗೂ ಕುಡಿಯುವ ನೀರಿಗೂ ಪ್ರತಿ ಬಾರಿವೂ ತಾತ್ಪರ ಪಡುವ ಅನಿವಾರ್ಯತೆಯಿಂದ ತಾಲೂಕು ಆಡಳಿತ ಈಗಾಗಲೇ ಸುಮಾರು 30 ಹಳ್ಳಿಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಸಮಸ್ಯೆ ಆವರಿಸುವ ಮುನ್ನೆವೆ ಸಾರ್ವಜನಿಕರ ಹಿತ ದೃಷ್ಠಿಯಿಂದ ತಾಲೂಕು ಆಡಳಿತ ಸನ್ನದು ಹಾಗಿದೆ.
ಅದರಂತೆ ಇಂದು ತಾಲೂಕಿನ ಕಸಬಾ ವ್ಯಾಪ್ತಿಯ ಅಜ್ಜನಗುಡಿ ಸ್ಥಳದಲ್ಲಿ ಸರಕಾರದಿಂದ ಗೋಶಾಲೆ ತೆರೆಯಲು ತಹಶೀಲ್ದಾರ್ ರೇಹಾನ್‌ಪಾಷ, ಪಶು ಇಲಾಖೆ ಸಹಾಯಕ ನಿದೇರ್ಶಕ ಡಾ.ರೇವಣ್ಣ, ಇಓ.ಶಶಿಧರ್ ಸೇರಿದ ತಂಡ ಗೋಶಾಲೆ ತೆರೆಯಲು ಜಿಲ್ಲಾಧಿಕಾರಿಗಳ ಅನುಮೋಧನೆ ಮೇರೆಗೆ ಇಂದು ಸ್ಥಳ ಪರೀಶೀಲನ ಕಾರ್ಯ ನಡೆಸಿದ್ದಾರೆ.
ಅದರಂತೆ ಪ್ರಸ್ತುತ ಇರುವ ಮೇವಿನ ಲಭ್ಯತೆ ಆಧಾರದ ಮೇಲೆ ನಾಲ್ಕು ವಾರಗಳವರೆಗೆ ಮೇವು ಇರುವುದರಿಂದ ಡಿಸೆಂಬರ್ ಅಂತ್ಯ ಇಲ್ಲದೆ ಜನವರಿ ಮೊದಲ ವಾರದಲ್ಲಿ ಗೋಶಾಲೆ ತೆರೆಯಲಾಗುವುದು ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ. ಇನ್ನೂ ಕಸಬಾ, ಪರಶುರಾಂಪುರ, ನಾಯಕನಹಟ್ಟಿ ತಳಕು ಹೋಬಳಿದ್ದು ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕಸಬಾ ವ್ಯಾಪ್ತಿಯ ಅಜ್ಜನಗುಡಿ ದೇವಸ್ಥಾನ ಸಮೀಪ, ಪರುಶುರಾಂಪುರ ಹೋಬಳಿಯ ಚೌಳೂರು ಗೇಟ್, ತಳಕು ಹೋಬಳಿಯ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಕಾವಲು, ಹಾಗೂ ನಾಯಕನಹಟ್ಟಿ ಹೋಬಳಿಯ ಸಮೀಪದ ಚೌಡಮ್ಮನ ಕಾವಲಿನಲ್ಲಿ ಸರಕಾರದಿಂದ ರೈತರ ಜಾನುವಾರುಗಳಿಗೆ ಗೋಶಾಲೆ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಾಕ್ಸ್ ಮಾಡಿ :
ಜನ ಜಾನುವಾರುಗಳಿಗೆ ತೊಂದರೆಯಾಗದAತೆ ಬರ ಪರಸ್ಥಿತಿಯನ್ನು ಎದುರಿಸಲು ತಾಲೂಕು ಆಡಳಿತ ಸನ್ನದಾಗಿದೆ ಇನ್ನೂ ಜನ ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಕೊರತೆಯಾಗದಂತೆ ಸರಕಾರ ಸೂಚನೆ ನೀಡಿದೆ ಈಗೀರ ಮೇವಿನ ಮೆವಿನ ಆಧಾರದ ಮೇಲೆ ಮುಂದಿನ ತಿಂಗಳ ಅಂತ್ಯಕ್ಕೆ ಸರಕಾರದಿಂದ ಹೋಬಳಿಗೊಂದು ಗೋಶಾಲೆ ತೆರೆಯಲಾಗುವುದು ಆದದರಿಂದ ಪ್ರಸ್ತುತ ಗೋಶಾಲೆಗಳ ಸ್ಥಳಗಳನ್ನು ಗುರುತಿಸಲಾಗಿದೆ.—ರೇಹಾನ್ ಪಾಷ ತಹಶೀಲ್ದಾರ್ ಚಳ್ಳಕೆರೆ

2.ಗ್ರಾಮೀಣ ಪ್ರದೇಶದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಉದ್ಯೋಗ ಖಾತ್ರಿ ಯೋಜನೆ ಹೆಚ್ಚಿಸಲಾಗಿದೆ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಕ್ಷಮಾ ಬರುವ ಮುನ್ನೆವೆ ಕುಡಿಯುವ ನೀರು ಜಾನುವಾರಗಳ ಮೇವಿಗೆ ಕೊರೆತೆಯಾಗದಂತೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.. ಗ್ರಾಪಂ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರೆ ಖಾಸಗಿ ರೈತರಿಂದ ನೀರು ಪಡೆಯಲು ಗುರುತಿಸಲಾಗಿದೆ ಒಟ್ಟಾರೆ ಬರಗಾಲ ಎದುರಿಸಲು ಯಾವುದೇ ಕೊರತೆಯಾಗದಂತೆ ಸಕಲ ಸಿದ್ದತೆಗಳನ್ನು ಮುಂಜಾಗೃತೆ ಮಾಡಿಕೊಳ್ಳಲಾಗಿದೆ.—ಇಓ.ಶಶಿಧರ್ ತಾಲೂಕು ಪಂಚಾಯಿತಿ

ಈ ಸಂದರ್ಭದಲ್ಲಿ ಪಶುಸಂಗೋನೆ ಸಹಾಯಕ ನಿರ್ಧೇಶಕ ಡಾ.ರೇವಣ್ಣ,ಕಂದಾಯ ಅಧಿಕಾರಿ ಲಿಂಗೇಗೌಡ, ಪಿಡಿಒ ಇನಾಯತ್ ಪಾಷ ಇತರರಿದ್ದರು.

About The Author

Namma Challakere Local News
error: Content is protected !!