ನಾಯಕನಹಟ್ಟಿ ಹೋಬಳಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಲ್ಲೂರ ಹಳ್ಳಿಯ ಶಿವಕುಮಾರ್ ಟಿ ತಂಡದ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಲ್ಲೂರ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ದಳವಾಯಿ ಇವರು ಕಾರ್ಯಕ್ರಮವನ್ನು ಕೀ ಬೋರ್ಡ್ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ,ಜನರು ಸ್ವತಃ ಹಾಡು ಕಟ್ಟಿ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಿದ್ದಿಯಾದ ಜಾನಪದ ಗೀತೆಗಳು ನಮ್ಮ ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಒಂದಾಗಿದೆ, ನಮ್ಮ ಸಂಸ್ಕೃತಿ ಆಚಾರಗಳಿಗೆ ಅನುಗುಣವಾಗಿ ಪ್ರತಿ ಸಂದರ್ಭಕ್ಕೂ ಹಾಡು ಕಟ್ಟಿ ಮೆರುಗನ್ನು ನೀಡಿರುವ ಮಹಾನ್ ಕಲಾವಿದರನ್ನು ಸ್ಮರಿಸಿ ಜಾನಪದ ಗೀತೆಗಳ ಸಂಗೀತ ನಿನಾದಗಳನ್ನು,ಸಾಹಿತ್ಯಗಳನ್ನು ಅಳಿಯದಂತೆ ನಾವು ಉಳಿಸಬೇಕಿದೆ ಎಂದು ಹೇಳಿದರು.

ಕಲಾ ತಂಡದ ನಾಯಕ ಶಿವಕುಮಾರ್ ಟಿ ಮಾತನಾಡಿ ಸತತವಾಗಿ 10 ವರ್ಷಗಳಿಂದ ಕಲಾವಿದನಾಗಿ ಕಲಾ ಸೇವೆಯನ್ನು ಮಾಡಲು ನನಗೆ ಮುಖ್ಯವಾದ ಪ್ರೇರೇಪಣೆ ನೀಡಿದ್ದು ನನ್ನ ಗುರುಗಳಾದ ಡಿ. ರಾಜಣ್ಣ ಇವರ ಸೂಕ್ತ ಮಾರ್ಗದರ್ಶನದಿಂದ ಇಂದು ನಾನು ವಿಷ್ಣು ಸಾಂಸ್ಕೃತಿಕ ಕಲಾ ಸಂಘವನ್ನು ಕಟ್ಟಿಕೊಂಡು ಕಲಾ ಸೇವೆಯನ್ನು ಮಾಡಲು ನೆರವಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಎಸ್.ಟಿ ಇವರ ಅನುಮತಿಯಿಂದಾಗಿ ಇಂದು ಜಾನಪದ ಸಂಗೀತ ಕಾರ್ಯಕ್ರಮವನ್ನು ಮಾಡುವ ಸೌಭಾಗ್ಯ ನಮ್ಮ ಕಲಾ ತಂಡಕ್ಕೆ ಲಭಿಸಿದೆ,ಇದೆ ತರ ನಮ್ಮ ತಂಡದಿಂದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ಜನರ ಪ್ರೋತ್ಸಾಹ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಮುಖ್ಯ ಶಿಕ್ಷಕ ವೆಂಕಟೇಶ್ ಹೆಚ್.ಡಿ , ಕಲಾವಿದ ರಾಜಣ್ಣ , ಗಾಯಕ ಶಿಕ್ಷಕರಾದ ಕೆ.ಟಿ.ನಾಗಭೂಷಣ್,
ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದ ಗಾಯಕರಾದ ಶಿವಕುಮಾರ್ ಟಿ,ಪ್ರಿಯಾಂಕ,ರಾಜಣ್ಣ,ತಿಪ್ಪೇಸ್ವಾಮಿ,ನಾಗಭೂಷಣ್,ನೀಲಪ್ಪ ತೂಲಹಳ್ಳಿ, ಉಪಾಧ್ಯಕ್ಷೆ ಮಂಜುಳಾ ಬಸವರಾಜ್, ಎಸ್ ಡಿ ಎಂ ಸಿ ಅಧ್ಯಕ್ಷ ಜಯಣ್ಣ, ಕಲಾ ತಂಡದ ನಾಯಕ ಶಿವಕುಮಾರ್ ಟಿ, ರಿದಂ ಪ್ಯಾಡ್ ವಾದಕ ಎಂ ವಿ ಬದ್ರಿ, ಕೀ ಬೋರ್ಡ್ ವಾದಕ ರಾಜಣ್ಣ,ಗಾಯಕ ಪವನ್ ತಳಕು ,ಶಿಕ್ಷಕರಾದ ವೀರಭದ್ರಪ್ಪ ಡಿ.ಕೆ,ರಂಜಿತಾ,ಮಹಾಂತೇಶ್, ಸೌಮ್ಯ , ಓಬಕ್ಕ,ಪ್ರಸನ್ನ ಕುಮಾರ್, ಬಡ ಮ್ಯಾಕಲಯ್ಯ, ಶಾಲಾ ವಿದ್ಯಾರ್ಥಿಗಳು,ಊರಿನ ಗ್ರಾಮಸ್ಥರು ಹಾಗೂ ಮತ್ತಿತರು ಹಾಜರಿದ್ದರು.

Namma Challakere Local News

You missed

error: Content is protected !!